ನವದೆಹಲಿ: ದೇಶದಲ್ಲಿ ಕೊರೊನಾ ಹೆಮ್ಮಾರಿ ವಿಜೃಂಭಿಸುತ್ತಿದೆ. ದಿನ ದಿನಕ್ಕೂ ಸೋಂಕಿತರ ಸಂಖ್ಯೆ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 32,695 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9.68 ಲಕ್ಷ ದಾಟಿದೆ.
ಬರೋಬ್ಬರಿ 606 ಮಂದಿ ಕೊರೊನಾಗೆ ಬಲಿ ಆಗಿದ್ದು, ಒಟ್ಟು ಮೃತರ ಸಂಖ್ಯೆ 24,915ಕ್ಕೇರಿದೆ. ಇದುವರೆಗೂ ದೇಶದಲ್ಲಿ 6 ಲಕ್ಷ ಮಂದಿ ಚೇತರಿಸಿಕೊಂಡಿದ್ದು, ಚೇತರಿಕೆ ಪ್ರಮಾಣ ಶೇಕಡಾ 63.24ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 3,31,146 ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ 6,12,815 ಮಂದಿ ಸೋಂಕಿತರು ಡಿಸ್ಚಾರ್ಜ್ ಆಗಿದ್ದು, 24,915 ಮಂದಿ ಸಾವನ್ನಪ್ಪಿದ್ದಾರೆ.
Advertisement
Highest single day spike of 32,695 #COVID19 cases and 606 deaths reported in the last 24 hours in India.
Total positive cases stand at 9,68,876 including 3,31,146 active cases, 6,12,815 cured/discharged/migrated and 24,915 deaths: Ministry of Health and Family Welfare pic.twitter.com/nuYhpfMQtz
— ANI (@ANI) July 16, 2020
Advertisement
ಮಹಾರಾಷ್ಟ್ರದಲ್ಲಿ 2.70 ಲಕ್ಷ ಮಂದಿಗೆ ಸೋಂಕು ದಾಟಿದೆ. ತಮಿಳುನಾಡಲ್ಲಿ ಒಂದೂವರೆ ಲಕ್ಷ, ದೆಹಲಿಯಲ್ಲಿ 1.17 ಲಕ್ಷ ಮಂದಿಗೆ ಸೋಂಕು ತಗುಲಿದೆ. ಈ ಮೂರು ಬಿಟ್ಟೆ ನಂತರದ ಸ್ಥಾನದಲ್ಲಿ ಕರ್ನಾಟಕ ಸ್ಥಾನ ಪಡೆದಿದೆ. ನಿನ್ನೆಯೇ ಗುಜರಾತ್, ಉತ್ತರ ಪ್ರದೇಶವನ್ನು ನಮ್ಮ ರಾಜ್ಯ ಮೀರಿಸಿದೆ.
Advertisement
ದಿನದ ಸೋಂಕಿತರ ಲೆಕ್ಕದಲ್ಲಿ ನಮ್ಮ ರಾಜ್ಯ ಮೂರನೇ ಸ್ಥಾನದಲ್ಲಿದೆ. ದೇಶದಲ್ಲಿ ನಿನ್ನೆ ಒಂದೇ ದಿನ 3.20 ಲಕ್ಷ ಟೆಸ್ಟ್ ನಡೆಸಲಾಗಿದೆ. ಇನ್ನು ಜಗತ್ತಿನಲ್ಲಿ 1.35 ಕೋಟಿ ಮಂದಿಗೆ ಸೋಂಕು ತಗುಲಿದ್ದು, 5.87 ಲಕ್ಷ ಮಂದಿ ಕೊರೊನಾಗೆ ಬಲಿ ಆಗಿದ್ದಾರೆ.