ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 34,884 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿ ಆಗಿದ್ದು, ಬರೋಬ್ಬರಿ 671 ಮಂದಿ ಹೆಮ್ಮಾರಿಗೆ ಬಲಿ ಆಗಿದ್ದಾರೆ.
ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,38,716 ಲಕ್ಷ ದಾಟಿದ್ದು, ಮೃತರ ಸಂಖ್ಯೆ 26,273 ದಾಟಿದೆ. ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ ಆರೂವರೆ ಲಕ್ಷ ದಾಟಿದೆ. ಉಳಿದಂತೆ 3,58,692 ಸಕ್ರಿಯ ಪ್ರಕರಣಗಳಿವೆ.
Advertisement
Spike of 34,884 cases and 671 deaths reported in India in the last 24 hours.
Total positive cases stand at 10,38,716, including 3,58,692 active cases, 6,53,751 cured/discharged/migrated and 26,273 deaths: Ministry of Health and Family Welfare pic.twitter.com/lkakSL1BVe
— ANI (@ANI) July 18, 2020
Advertisement
ಜಗತ್ತಿನಲ್ಲಿ ಪ್ರತಿ ಲಕ್ಷ ಮಂದಿಗೆ 1,630 ಪಾಸಿಟಿವ್ ಪ್ರಕರಣ ನಮೂದಾಗುತ್ತಿದೆ. ಭಾರತದಲ್ಲಿ ಇದರ ಪ್ರಮಾಣ 658 ಮಾತ್ರ ಇದೆ. ಇದೇ ವೇಳೆ ಅಮೆರಿಕ ಬಿಟ್ಟರೆ ಅತಿ ಹೆಚ್ಚು ಕೋವಿಡ್ ಟೆಸ್ಟ್ ಭಾರತದಲ್ಲೇ ನಡೆದಿದೆ ಎಂಬ ಮಾಹಿತಿ ಬಯಲಾಗಿದೆ. ದೇಶದಲ್ಲಿ ಪ್ರಮುಖವಾಗಿ ಬೆಂಗಳೂರು, ಹೈದರಾಬಾದ್, ಪುಣೆ ನಗರಗಳು ಸದ್ಯ ಕೋವಿಡ್ ಮಹಾಮಾರಿಯ ಹಾಟ್‍ಸ್ಪಾಟ್‍ಗಳಾಗಿ ಪರಿವರ್ತನೆಯಾಗುತ್ತಿದೆ. ಇದುವರೆಗೂ ಮುಂಬೈ, ದೆಹಲಿ, ಚೆನ್ನೈ, ಅಹ್ಮದಾಬಾದ್ ನಗರಗಳಲ್ಲಿ ಹೆಚ್ಚು ಕೋವಿಡ್ ಸೋಂಕಿನ ಪ್ರಕರಣಗಳು ವರದಿಯಾಗಿತ್ತು.
Advertisement
1,34,33,742 samples tested for #COVID19 till 17th July, of these 3,61,024 samples were tested yesterday: Indian Council of Medical Research (ICMR) pic.twitter.com/vkIsrx2yeS
— ANI (@ANI) July 18, 2020