– ಸೋಂಕಿತರ ಸಂಖ್ಯೆ 73,70,469ಕ್ಕೆ ಏರಿಕೆ
– 895 ಮಂದಿ ಮಹಾಮಾರಿಗೆ ಬಲಿ
ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ನರ್ತನ ಮುಂದುವರಿದಿದ್ದು, ಒಂದೇ ದಿನ 63,371 ಹೊಸ ಪ್ರಕರಣಗಳು ಪತ್ತೆಯಾಗಿವೆ.
India continues to have one of the lowest deaths per million population globally (presently pegged at 80).
Some states/UTs are performing better and reporting much lower deaths/million population than the national average: Ministry of Health pic.twitter.com/axXU5SoYUX
— ANI (@ANI) October 16, 2020
Advertisement
ದೇಶದಲ್ಲಿ ಸದ್ಯ ಸೋಂಕಿತರ ಸಂಖ್ಯೆ 73,70,469 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 8,04,528 ಸಕ್ರಿಯ ಪ್ರಕರಣಗಳಿದ್ದರೆ, 64,53,780 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
Advertisement
ಕಳೆದ 24 ಗಂಟೆಯಲ್ಲಿ 895 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದುವರೆಗೆ ದೇಶದಲ್ಲಿ 1,12,161 ಮಂದಿ ಕೋವಿಡ್ 19 ನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
Advertisement
India reports a spike of 63,371 new #COVID19 cases & 895 deaths in the last 24 hours.
Total case tally stands at 73,70,469 including 8,04,528 active cases, 64,53,780 cured/discharged/migrated cases & 1,12,161 deaths: Ministry of Health and Family Welfare pic.twitter.com/tWjy8XjI0c
— ANI (@ANI) October 16, 2020
Advertisement
ಸದ್ಯ ಇಡೀ ವಿಶ್ವಕ್ಕೆ ಹೋಲಿಸಿದರೆ ದೇಶದಲ್ಲಿ ಕೊರೊನಾದಿಂದ ಮೃತಪಡುವವರ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ. ದೇಶದಲ್ಲಿ ನಿನ್ನೆ ಒಂದೇ ದಿನ 10,28,622 ಮಂದಿಯನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದೆ. ಈ ಮೂಲಕ ಇದೂವರೆಗೂ 9,22,54,927 ಮಂದಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.
COVID-19 Testing Update. For more details visit: https://t.co/dI1pqwfbRz @MoHFW_INDIA @DeptHealthRes #ICMRFIGHTSCOVID19 #IndiaFightsCOVID19 #CoronaUpdatesInIndia #COVID19 pic.twitter.com/z0sQRK81PP
— ICMR (@ICMRDELHI) October 16, 2020