ನವದೆಹಲಿ: ದೇಶದಲ್ಲಿ ಒಂದೇ ದಿನ 93,337 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 1,247 ಸೋಂಕಿತರು ಸಾವನ್ನಪ್ಪಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 53 ಲಕ್ಷದ ಗಡಿ ದಾಟಿದೆ. ಒಟ್ಟು ಸೋಂಕಿತರ ಸಂಖ್ಯೆ 53,08,015ಕ್ಕೆ ಏರಿಕೆಯಾಗಿದ್ದು, 10,13,964 ಸಕ್ರಿಯ ಪ್ರಕರಣಗಳಿವೆ. 42,08,432 ಮಂದಿಗೆ ಕೊರೊನಾದಿಂದ ಗುಣಮುಖರಾಗಿದ್ದು, 85,619 ಸೋಂಕಿತರು ಸಾವನ್ನಪ್ಪಿದ್ದಾರೆ.
India's #COVID19 case tally crosses 53-lakh mark with a spike of 93,337 new cases & 1,247 deaths in last 24 hours.
The total case tally stands at 53,08,015 including 10,13,964 active cases, 42,08,432 cured/discharged/migrated & 85,619 deaths: Ministry of Health & Family Welfare pic.twitter.com/wKo1vgDc1Y
— ANI (@ANI) September 19, 2020
Advertisement
ವಿಶ್ವದಲ್ಲಿ ಕೊರೊನಾ ಪೀಡಿತ ರಾಷ್ಟ್ರಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿದ್ದು, ಅಮೆರಿಕಾ ಮೊದಲ ಸ್ಥಾನದಲ್ಲಿದೆ. ಅಮೆರಿಕಾದಲ್ಲಿ 39,68,680 ಸಕ್ರಿಯ ಪ್ರಕರಣಗಳಿವೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 44,95,183ಕ್ಕೆ ಏರಿಕೆಯಾಗಿದ್ದು, 4,61,851 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಷ್ಯಾ ಹಾಗೂ ಪೆರು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.
Advertisement
Advertisement
ಅತಿ ಹೆಚ್ಚು ಕೊರೊನಾ ಪ್ರಕರಣಗಳು ಹೊಂದಿರುವ ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, 11,67,496 ಒಟ್ಟು ಪ್ರಕರಣಗಳಿವೆ. ನಿನ್ನೆ ಒಂದೇ ದಿನ ಮಹಾರಾಷ್ಟ್ರದಲ್ಲಿ 21,656 ಪ್ರಕರಣಗಳು ವರದಿಯಾಗಿದ್ದು, 440 ಸೋಂಕಿತರು ಸಾವನ್ನಪ್ಪಿದ್ದಾರೆ. ಉಳಿದಂತೆ ಆಂಧ್ರ ಪ್ರದೇಶ, ತವಿಳುನಾಡು, ಕರ್ನಾಟಕ ಮತ್ತು ಉತ್ತರ ಪ್ರದೇಶ ಕೊರೊನಾ ಪೀಡಿಯ ಮೊದಲ ಐದು ರಾಜ್ಯಗಳ ಪಟ್ಟಿಯಲ್ಲಿವೆ.
Advertisement