– 17 ಲಕ್ಷಕ್ಕೂ ಅಧಿಕ ಮಂದಿ ಗುಣಮುಖ
ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಭಾರತದಲ್ಲಿ ತನ್ನ ಕಂಬಂಧ ಬಾಹುವನ್ನು ದಿನದಿಂದ ದಿನಕ್ಕೆ ಹರಡಿಸುತ್ತಿದ್ದು, ಇದೀಗ ಒಂದೇ ದಿನ 1007 ಮಂದಿ ಕೋವಿಡ್ 19ಗೆ ಬಲಿಯಾಗಿದ್ದಾರೆ.
Advertisement
ಕಳೆದ 24 ಗಂಟೆಯಲ್ಲಿ 64, 553 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 24,61,191ಕ್ಕೆ ಏರಿಕೆಯಾಗಿದೆ.
Advertisement
Spike of 64,553 cases and 1007 deaths reported in India, in the last 24 hours.
The #COVID19 tally in the country rises to 24,61,191 including 6,61,595 active cases, 17,51,556 discharged/migrated & 48,040 deaths: Ministry of Health & Family Welfare pic.twitter.com/WqClKQSJcc
— ANI (@ANI) August 14, 2020
Advertisement
ಸೋಂಕಿತರ ಸಂಖ್ಯೆಯಲ್ಲಿ 6,61,595 ಸಕ್ರಿಯ ಪ್ರಕರಣಗಳಿದ್ದು, 17,51,556 ಮಂದಿ ಮಹಾಮಾರಿಯನ್ನು ಗೆದ್ದಿದ್ದಾರೆ. ಇದೂವರೆಗೂ ದೇಶದಲ್ಲಿ 48,040 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
Advertisement
ದೇಶದಲ್ಲಿ ನಿನ್ನೆ ಒಂದೇ ದಿನ 8,48,728 ಮಂದಿಯನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದೆ. ಈ ಮೂಲಕ ಇದೂವರೆಗೂ 2,76,94,416 ಮಂದಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.
COVID-19 Testing Update . For more details visit: https://t.co/dI1pqvXAsZ #ICMRFIGHTSCOVID19 #IndiaFightsCOVID19 #CoronaUpdatesInIndia #COVID19 pic.twitter.com/dlbvgrmeK0
— ICMR (@ICMRDELHI) August 14, 2020
ತೆಲಂಗಾಣದಲ್ಲಿ 1,921 ಮಂದಿಯಲ್ಲಿ ಕೊರೊನಾ ಸೋಂಕು ಕನಿಸಿಕೊಂಡಿದ್ದು, ಈ ಮೂಲಕ ಅಲ್ಲಿನ ಸೊಂಕಿತರ ಸಂಖ್ಯೆ 88,396ಕ್ಕೆ ಏರಿಕೆಯಾಗಿದೆ. ಇದೂವರೆಗೂ 674 ಮಂದಿ ರಾಜ್ಯದಲ್ಲಿ ಕೊರೊನಾಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.