ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ತನ್ನ ರೌದ್ರನರ್ತನ ತೋರುತ್ತಿದ್ದು, ದಿನದಿಂದ ದಿನಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಕಳೆದ 24 ಗಂಟೆಯಲ್ಲಿ ಬರೋಬ್ಬರಿ 2,63,533 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಈ ಮೂಲಕ ಇದೀಗ ದೇಶದಲ್ಲಿ ಸೋಂಕಿತರ ಸಂಖ್ಯೆ 2,52,28,996ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ 4,329 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಇದುವರೆಗೆ 2,78,719 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.
India reports 2,63,533 new #COVID19 cases, 4,22,436 discharges and 4,329 deaths in the last 24 hours, as per Union Health Ministry
Total cases: 2,52,28,996
Total discharges: 2,15,96,512
Death toll: 2,78,719
Active cases: 33,53,765
Total vaccination: 18,44,53,149 pic.twitter.com/75fXkY6Xjh
— ANI (@ANI) May 18, 2021
ಸದ್ಯ ದೇಶದಲ್ಲಿ 33,53,765 ಸಕ್ರಿಯ ಪ್ರಕರಣಗಳಿವೆ. 2,15,96,512 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 18,44,53,149 ಮಂದಿ ಮುಂಜಾಗ್ರತಾ ಕ್ರಮವಾಗಿ ವಾಕ್ಸಿನ್ ಪಡೆದುಕೊಂಡಿದ್ದಾರೆ.
ದೇಶದಲ್ಲಿ ನಿನ್ನೆ ಒಂದೇ ದಿನ 18,69,223 ಮಂದಿಯನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದೆ. ಈ ಮೂಲಕ ಇದೂವರೆಗೂ 31,82,92,881 ಮಂದಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.
31,82,92,881 samples tested for #COVID19 up to 17th May 2021. Of these, 18,69,223 samples were tested yesterday: Indian Council of Medical Research (ICMR) pic.twitter.com/XnThloyrD1
— ANI (@ANI) May 18, 2021
ಮೇ 9 ರಂದು 3,66,317, ಮೇ 8 ರಂದು 4,03,808, ಮೇ 6 ರಂದು 4,14,280 ಮಂದಿಗೆ ಸೋಂಕು ಬಂದಿತ್ತು.