ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆ ಹಚ್ಚಲು ಈವರೆಗೂ ಒಂದು ಕೋಟಿ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಐಸಿಎಂಆರ್ ಹೇಳಿದೆ.
ಎಲ್ಲ ರಾಜ್ಯಗಳಲ್ಲೂ ಸೋಂಕು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಹೆಚ್ಚು ಮಾಡಿದೆ. ಕಳೆದ 14 ದಿನಗಳಿಂದ ಪ್ರತಿನಿತ್ಯ ಸರಾಸರಿ 2.15 ಲಕ್ಷ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇಂದು ಬೆಳಗ್ಗೆ 11 ಗಂಟೆ ವೇಳೆಗೆ ಒಂದು ಕೋಟಿ (1,00,04,101) ಪರೀಕ್ಷೆಗಳು ಪೂರ್ಣಗೊಂಡಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
Advertisement
Advertisement
ಒಂದು ಕೋಟಿ ಪರೀಕ್ಷೆಗಳ ಪೈಕಿ 6,97,413 ಮಂದಿಯಲ್ಲಿ ಸೋಂಕು ದೃಢವಾಗಿದ್ದು, ಈವರೆಗೂ 19,693 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ ದೇಶದಲ್ಲಿ 2,53,287 ಸಕ್ರಿಯ ಪ್ರಕರಣಗಳಿದ್ದು, 4,24,433 ಮಂದಿ ಗುಣಮುಖವಾಗಿದ್ದಾರೆ.
Advertisement
ಪರೀಕ್ಷೆ ಸಾಮರ್ಥ್ಯ ಹೆಚ್ಚಿಸಲು ಐಸಿಎಂಆರ್ 788 ಸರ್ಕಾರಿ, 317 ಖಾಸಗಿ ಲ್ಯಾಬ್‍ಗಳಿಗೆ ದೇಶದ್ಯಾಂತ ಅನುಮತಿ ನೀಡಿದೆ. ಒಟ್ಟು 1,105 ಲ್ಯಾಬ್‍ಗಳ ಪೈಕಿ, 592 ಆರ್‌ಟಿ – ಪಿಸಿಆರ್, 421 ಟ್ರೊನಾಟ್ ಲ್ಯಾಬ್ಸ್, 92 ಎನ್‍ಎಟಿ ಲ್ಯಾಬ್‍ಗಳನ್ನು ಒಳಗೊಂಡಿದೆ.
Advertisement
ಪ್ರತಿನಿತ್ಯ ಮೂರು ಲಕ್ಷ ಪರೀಕ್ಷೆಗಳನ್ನು ನಡೆಸಲು ಚಿಂತಿಸಿದ್ದು, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ರಾಜಸ್ಥಾನ, ಆಂಧ್ರ ಪ್ರದೇಶದಲ್ಲಿ ಪರೀಕ್ಷೆ ವೇಗ ಹೆಚ್ಚಿಸಲಾಗಿದೆ. ಹೆಚ್ಚು ಕೊರೊನಾ ಪೀಡಿತ ರಾಜ್ಯಗಳಲ್ಲಿ ಮುಂದಿನ ಹಂತಗಳಲ್ಲಿ ಟೆಸ್ಟಿಂಗ್ ಹೆಚ್ಚಿಸಲಿದ್ದೇವೆ ಎಂದು ಐಸಿಎಂಆರ್ ಹೇಳಿದೆ.