ದೇಶಕ್ಕೆ ಹೆಮ್ಮೆ ತಂದಿದ್ದೀರಿ – ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಕೋವಿಂದ್ ಅಭಿನಂದನೆ

Public TV
1 Min Read
president 3

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕ್ರೀಡಾಪಟುಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟೀ ಪಾರ್ಟಿ ನೀಡಿ ಅಭಿನಂದಿಸಿದ್ದಾರೆ.

PRESIDENT 1

ರಾಷ್ಟ್ರಪತಿ ಭವನದಲ್ಲಿ ಚಹಾ ಕೂಟ ನೀಡಿ ಮಾತನಾಡಿದ ಕೋವಿಂದ್, ಇಡೀ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದೀರಿ ಎಂದು ಹೇಳಿ ಕ್ರೀಡಾಪಟುಗಳನ್ನು ಶ್ಲಾಘಿಸಿದ್ದಾರೆ.

PRESIDENT 2

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದೇಶ ವಿದೇಶಗಳಲ್ಲಿರುವ ಸಮಸ್ತ ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭ ಕೋರಿದರು. ಈ ವರ್ಷ ಭಾರತದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಶೇಷತೆಯಿಂದ ಆಚರಿಸಲಾಗುತ್ತಿದೆ. ಇದು 75ನೇ ಸ್ವಾತಂತ್ರ್ಯ ದಿನಾಚರಣೆಯಾಗಿದೆ. ನಾವೆಲ್ಲರೂ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತೇವೆ. ಆದರೆ ಈ ವಿಶೇಷ ದಿನದ ಹಿಂದೆ ಹಲವು ಗಣ್ಯರ ತ್ಯಾಗ ಬಲಿದಾನಗಳಿವೆ ಎಂದು ಸ್ಮರಿಸಿಕೊಂಡರು.

ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಹೋರಾಟ ಮಾಡಿದ ಸರ್ವರಿಗೂ ನನ್ನ ನಮನಗಳು. ನಾವೆಲ್ಲರೂ 75 ವರ್ಷಗಳಲ್ಲಿ ಹಲವು ಅಡೆ ತಡೆಗಳನ್ನು ಮೆಟ್ಟಿನಿಂತು ಎಲ್ಲರೂ ಒಂದಾಗಿ ಸಾಗಿ ಬಂದಿದ್ದೇವೆ. ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪ್ರದರ್ಶನ ಕಂಡು ದೇಶವೇ ಹೆಮ್ಮೆ ಪಡುತ್ತಿದೆ. ಹಾಗಾಗಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಮತ್ತಷ್ಟು ವಿಶೇಷವಾಗಿದೆ. 121 ವರ್ಷಗಳ ಬಳಿಕ ಒಲಿಂಪಿಕ್ಸ್ ಇತಿಹಾಸದಲ್ಲಿ ನಮ್ಮ ದೇಶದಿಂದ ಅತೀ ಹೆಚ್ಚು ಕ್ರೀಡಾಪಟುಗಳನ್ನು ಕಳುಹಿಸಿದ್ದೇವೆ ಅವರು ಉತ್ತಮ ಸಾಧನೆ ತೋರಿ ಪದಕ ಬೇಟೆಯಾಡಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಶ್ಲಾಘಿಸಿದರು. 

ದೇಶದಲ್ಲಿ ಕೊರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಹಾಗಾಗಿ ಪ್ರತಿಯೊಬ್ಬರು ಕೊರೊನಾದ ಬಗ್ಗೆ ಎಚ್ಚರದಿಂದ ಇರಬೇಕು. ಯಾರು ಕೂಡ ಮುಂಜಾಗ್ರತಾ ಕ್ರಮಗಳನ್ನು ಮರೆಯಬಾರದು. ಎಲ್ಲರೂ ಕೂಡ ಕೊರೊನಾ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಿ ಎಂದು ಕೋವಿಂದ್ ಅವರು ಮನವಿ ಮಾಡಿಕೊಂಡರು. ಇದನ್ನೂ ಓದಿ: ತವರಿಗೆ ಬಂದ ಟೋಕಿಯೋ ಒಲಿಂಪಿಕ್ಸ್ ವೀರರಿಗೆ ಅದ್ಧೂರಿ ಸ್ವಾಗತ – ದೆಹಲಿಯಲ್ಲಿ ಕೇಂದ್ರ ಸರ್ಕಾರದಿಂದ ಸನ್ಮಾನ

Share This Article
Leave a Comment

Leave a Reply

Your email address will not be published. Required fields are marked *