ದೇಶಕ್ಕಾಗಿ ನಮ್ಮ ರಕ್ತ, ಬೆವರು ಸುರಿಸಿದ್ದೇವೆ- ಮೋದಿಗೆ ಸುರೇಶ್ ರೈನಾ ಧನ್ಯವಾದ

Public TV
2 Min Read
PM Modi Suresh Raina

ನವದೆಹಲಿ: ಇದೇ ಆ.15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಎಂಎಸ್ ಧೋನಿ ಜೊತೆಗೆ ಸುರೇಶ್ ರೈನಾ ಕೂಡ ವಿದಾಯ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಧೋನಿ ಅವರಿಗೆ ಪ್ರಶಂಸೆ ನೀಡಿ ಸ್ವತಃ ಪ್ರಧಾನಿ ಮೋದಿ ಪತ್ರ ಬರೆದಿದ್ದರು. ಸದ್ಯ ಧೋನಿರೊಂದಿಗೆ ಸುರೇಶ್ ರೈನಾ ಅವರಿಗೂ ಮೋದಿ ಎರಡು ಪುಟಗಳ ಪತ್ರ ಬರೆದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ರೈನಾ, ಆಗಸ್ಟ್ 15ರಂದು ನೀವು ಕಠಿಣ ನಿರ್ಣಯ ತೆಗೆದುಕೊಂಡಿದ್ದೀರಿ. ಆದರೆ ನಾನು ಇದನ್ನು ನಿವೃತ್ತಿ ಎಂಬ ಪದದಿಂದ ಕರೆಯುವುದಿಲ್ಲ. ಏಕೆಂದರೆ ಇನ್ನು ನಿಮಗೆ ಆಡುವ ಸಾಮರ್ಥ್ಯವಿತ್ತು. ಯಂಗ್ ಅಂಡ್ ಎನರ್ಜಿಟಿಕ್ ಆಟಗಾರನಾಗಿ ಕಾಣಿಸುವ ನೀವು ಇಷ್ಟು ಬೇಕಾ ವಿದಾಯ ಹೇಳುತ್ತೀರಿ ಎಂದು ಊಹೆ ಮಾಡಿರಲಿಲ್ಲ. ನಿಮ್ಮ ಎರಡನೇ ಇನ್ನಿಂಗ್ಸ್ ಉತ್ತಮವಾಗಿ ಸಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಇದುವರೆಗೂ ಭಾರತ ಕ್ರಿಕೆಟ್ ತಂಡಕ್ಕೆ ಅತ್ಯುತ್ತಮ ಸೇವೆ ನೀಡಿದ್ದೀರಿ. ಎಷ್ಟೇ ಪ್ರಮುಖ ಇನ್ನಿಂಗ್ಸ್ ಆಡಿದ್ದೀರಿ. ಇದನ್ನೂ ಓದಿ: ಪಿಪಿಇ ಕಿಟ್ ಧರಿಸಿ ಯುಎಇಗೆ ಪ್ರಯಾಣಿಸಿದ ರಾಜಸ್ಥಾನ ರಾಯಲ್ಸ್ ಕ್ರಿಕೆಟಿಗರು

2007ರ ಟಿ20 ವಿಶ್ವಕಪ್‍ನೊಂದಿಗೆ, 28 ವರ್ಷಗಳ ಬಳಿಕ ಗೆದ್ದ ಏಕದಿನ ವಿಶ್ವಕಪ್ ತಂಡದ ಸದಸ್ಯರಾಗಿದ್ದೀರಿ. 2011ರ ವಿಶ್ವಕಪ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಕ್ವಾಟರ್ ಫೈನಲ್ ಮ್ಯಾಚ್‍ನಲ್ಲಿ ನಿಮ್ಮ ಪ್ರದರ್ಶನವನ್ನು ನೇರ ವೀಕ್ಷಿಸಿದ್ದೆ. ಅಂದು ನಿಮ್ಮ ಇನ್ನಿಂಗ್ಸ್ ತಂಡ ಗೆಲುವು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ನಿಮ್ಮಂತಹ ಫಿಲ್ಡರ್ ಅಗತ್ಯ ತಂಡಕ್ಕಿದೆ. ಖಂಡಿತ ತಂಡ ಒಬ್ಬ ಅತ್ಯುತ್ತಮ ಫಿಲ್ಡರನ್ನು ಮಿಸ್ ಮಾಡಿಕೊಳ್ಳುತ್ತದೆ. ನೀವು ದೇಶದ ಘಟನತೆಗಾಗಿ ಆಡಿದ್ದೀರಿ. ಥ್ಯಾಂಕ್ಯೂ ಸುರೇಶ್ ರೈನಾ ಎಂದು ಮೋದಿ ಪತ್ರದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಸಣ್ಣ ಪಟ್ಟಣದಲ್ಲಿ ಹುಟ್ಟಿ ದೇಶವೇ ಹೆಮ್ಮೆಪಡುವಂತೆ ಮಾಡಿದ್ದೀರಿ- ಧೋನಿಯನ್ನು ಹೊಗಳಿದ ಮೋದಿ

Suresh Raina

ಮೋದಿ ಬರೆದ ಪತ್ರವನ್ನು ಟ್ವಿಟ್ಟರ್‍ನಲ್ಲಿ ಶೇರ್ ಮಾಡಿರುವ ರೈನಾ, ದೇಶಕ್ಕಾಗಿ ನಮ್ಮ ರಕ್ತ ಮತ್ತು ಬೆವರು ಸುರಿಸಿದ್ದೇವೆ. ದೇಶದ ಪ್ರಧಾನಿ ಜೊತೆಗೆ ಜನರು ನಮ್ಮ ಪ್ರದರ್ಶನವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವುದಕ್ಕಿಂತ ದೊಡ್ಡ ವಿಷಯ, ಪ್ರಶಂಸೆ ಬೇರೆ ಯಾವುದು ಇಲ್ಲ. ನಿಮ್ಮ ಮಾತಿಗೆ ಧನ್ಯವಾದ ಮೋದಿ ಜೀ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮೈದಾನದಲ್ಲೇ ಧೋನಿ ಕೋಪಗೊಂಡು ರೈನಾಗೆ ಎಚ್ಚರಿಕೆ ನೀಡಿದ್ದರು: ಆರ್‌ಪಿ ಸಿಂಗ್‌

Suresh Raina 2

Share This Article
Leave a Comment

Leave a Reply

Your email address will not be published. Required fields are marked *