– ಆಹಾರ ಕಿಟ್‍ಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ
ರಾಯಚೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ರಾಯಚೂರಿನ ಬಹಳಷ್ಟು ದೇವಾಲಯಗಳ ಅರ್ಚಕರು ಅಕ್ಷರಶಃ ಬೀದಿಗೆ ಬಂದಿದ್ದಾರೆ. ದೇವಾಲಯಕ್ಕೆ ಬರುವ ಭಕ್ತರ ಕಾಣಿಕೆಯಿಂದ ಬದುಕುತ್ತಿದ್ದ ಅರ್ಚಕರ ಕುಟುಂಬಗಳು ಈಗ ಕಷ್ಟವನ್ನು ಎದುರಿಸುತ್ತಿವೆ.
ಹೀಗಾಗಿ ಮುಜರಾಯಿ ಇಲಾಖೆ ಆಯುಕ್ತರು ಸೂಚಿಸಿದಂತೆ ಆಹಾರ ಕಿಟ್‍ಗಳನ್ನು ವಿತರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಅರ್ಚಕರು ಮನವಿ ಸಲ್ಲಿಸಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ಮುಜರಾಯಿ ಇಲಾಖೆ ಆಯುಕ್ತರು ಆಹಾರ ಕಿಟ್ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದು ಇದುವರೆಗೂ ಕಿಟ್ ವಿತರಿಸಿಲ್ಲ ಎಂದು ಅರ್ಚಕರು ಆರೋಪಿಸಿದ್ದಾರೆ.
Advertisement
Advertisement
ಕಾಣಿಕೆ ತಟ್ಟೆಯಲ್ಲಿ ಬೀಳುವ ಕಾಣಿಕೆಯಿಂದ ಜೀವನ ನಡೆಯುತ್ತಿತ್ತು. ಆದರೆ ಈಗ ದೇವಾಲಯಗಳಿಗೆ ಬೀಗ ಹಾಕಿರುವುದರಿಂದ ಮದುವೆಗಳಿಲ್ಲ, ವಿಶೇಷ ಪೂಜೆಗಳಿಲ್ಲ, ಭಕ್ತರಿಲ್ಲ ಹೀಗಾಗಿ ಕಾಣಿಕೆ ತಟ್ಟೆಯ ಕಾಣಿಕೆಯೂ ನಮಗೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಧಾರ್ಮಿಕ ದತ್ತಿ ಇಲಾಖೆಯ ಸಿ ವರ್ಗದ ದೇವಾಲಯಗಳ ಅರ್ಚಕರ ಸ್ಥಿತಿಯಂತೂ ತುಂಬಾ ಕಷ್ಟದಾಯಕವಾಗಿದೆ. ಸರ್ಕಾರ ದೇವಾಲಯಗಳನ್ನೇ ನಂಬಿ ಬದುಕುತ್ತಿರುವ ನಮಗೆ ಸಹಾಯಧನ ನೀಡಬೇಕು. ಕಿಟ್ ವಿತರಿಸಬೇಕು ಅಂತ ಅರ್ಚಕರು ಒತ್ತಾಯಿಸಿದ್ದಾರೆ.