ದೇವಸ್ಥಾನದ ಆವರಣದಲ್ಲೇ ನಾದಿನಿಯನ್ನ ಕೊಂದ ಬಾವ

Public TV
1 Min Read
MURDER 2

– ತಲೆಗೆ ಕಬ್ಬಿಣದ ರಾಡ್‍ನಿಂದ ಹೊಡೆದು ಎಸ್ಕೇಪ್
– ದೇಗುಲದಿಂದ ಹಿಂದಿರುಗುತ್ತಿದ್ದಾಗ ಕೃತ್ಯ

ಭುವನೇಶ್ವರ: ದೇವಸ್ಥಾನಕ್ಕೆ ಹೋಗಿ ಹಿಂದಿರುಗುತ್ತಿದ್ದ ನಾದಿನಿಯನ್ನು ದೇಗುಲದ ಆವರಣದಲ್ಲಿ ಬಾವ ಕೊಲೆ ಮಾಡಿರುವ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಹರಿದಪದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಗ್ರಾಮದ ರಂಜಿ ನಹಾಕ್ (40) ಎಂದು ಗುರುತಿಸಲಾಗಿದೆ. ರಂಜಿ ಇಂದು ಮುಂಜಾನೆ ಸುಮಾರು 5 ಗಂಟೆಗೆ ದೇವಸ್ಥಾನಕ್ಕೆ ಹೋಗಿದ್ದರು. ದೇವಾಲಯದಿಂದ ಹಿಂದಿರುಗುತ್ತಿದ್ದಾಗ ಮಹಿಳೆಯ ಬಾವ ಮೋಚಿರಾಮ್ ಕಬ್ಬಿಣದ ರಾಡ್‍ನಿಂದ ರಂಜಿ ತಲೆಗೆ ಹೊಡೆದಿದ್ದಾನೆ.

police 1 e1585506284178

ರಂಜಿ ತೀವ್ರವಾಗಿ ಗಾಯಗೊಂಡಿದ್ದು, ದೇವಸ್ಥಾನದ ಆವರಣದಲ್ಲೇ ಮೃತಪಟ್ಟಿದ್ದಾರೆ. ಕೊಲೆ ಮಾಡಿದ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದ ಪೊಲೀಸರು ಗ್ರಾಮಕ್ಕೆ ಬಂದು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಸದ್ಯಕ್ಕೆ ಆರೋಪಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Police Jeep 1

Share This Article
Leave a Comment

Leave a Reply

Your email address will not be published. Required fields are marked *