ತುಮಕೂರು: ಪಾವಗಡ ಪಟ್ಟಣದ ಶನೇಶ್ವರ ಸ್ವಾಮಿ ದೇಗುಲ ಪ್ರವೇಶ ನಿಷೇಧಿಸಿದ್ದ ಹಿನ್ನೆಲೆ ಶನಿವಾರ ಭಕ್ತಾದಿಗಳು ರಸ್ತೆ ಡಿವೈಡರ್ ಗೆ ಪೂಜೆ ಸಲ್ಲಿಸಿರು.
ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ವಿಚಾರ ತಿಳಿಯದೆ ಆಂಧ್ರ ಪ್ರದೇಶದ ವಿವಿಧ ಭಾಗಗಳಿಂದ ಭಕ್ತಾದಿಗಳು ಪಟ್ಟಣಕ್ಕೆ ಬಂದಿದ್ದರು. ಶನೇಶ್ವರ ದೇಗುಲದ ಸುತ್ತಲೂ ಬ್ಯಾರಿಕೇಡ್ ಹಾಕಿದ್ದರಿಂದ ಡಿವೈಡರ್ ಬಳಿ ಫೋಟೋ ಇರಿಸಿ ತೆಂಗಿನ ಕಾಯಿ ಒಡೆದು ಪೂಜೆ ಸಲ್ಲಿಸಿದರು.
ದೇಗುಲದ ವತಿಯಿಂದ ಪ್ರಸಾದ ವಿತರಣೆ ಸ್ಥಗಿತಗೊಳಿಸಲಾಗಿತ್ತು. ರಸ್ತೆಗಳು ವಾಹನಗಳು, ಜನರಿಂದ ತುಂಬಿತ್ತು. ವಾರದ ಮುನ್ನವೆ ದರ್ಶನ ನಿಷೇಧಿಸುವ ಬಗ್ಗೆ ವ್ಯಾಪಕ ಪ್ರಚಾರ ನೀಡಿದ್ದರೆ ಜನತೆಗಾದ ನಿರಾಶೆ ತಪ್ಪಿಸಬಹುದಿತ್ತು ಎಂದು ನೂರಾರು ಕಿ.ಮೀ. ದೂರದಿಂದ ಆಗಮಿಸಿದ್ದ ಭಕ್ತಾದಿಗಳು ತಿಳಿಸಿದರು.