ಚೆನ್ನೈ: ಐದು ವರ್ಷದ ಬಾಲಕಿ ಮೇಲೆ 50 ವರ್ಷದ ಸಂಬಂಧಿಕ ಅತ್ಯಾಚಾರ ಎಸಗುವ ಮೂಲಕ ವಿಕೃತಿ ಮೆರೆದಿದ್ದಾನೆ.
ತಮಿಳು ನಾಡಿನ ಮದುರೈನ ತಿರುಮಂಗಲಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 50 ವರ್ಷದ ಆರೋಪಿ ವಿರುದ್ಧ ಮಹಿಳೆ ದೂರು ನೀಡಿದ್ದಾಳೆ. ಆರೋಪಿಯನ್ನು ಶಕ್ತಿ ಎಂದು ಗುರುತಿಸಲಾಗಿದ್ದು, ಮಹಿಳೆಗೆ ನಲ್ಲೂರಿನ ದೂರದ ಸಂಬಂಧಿಯಾಗಿದ್ದಾನೆ. ಡಿಸೆಂಬರ್ 25ರಂದು ಆರೋಪಿ ಮಹಿಳೆ ಮನೆಗೆ ಭೇಟಿ ನೀಡಿದ್ದ. ಈ ವೇಳೆ ದೇವಸ್ಥಾನಕ್ಕೆಂದು ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.
Advertisement
Advertisement
ಮನೆಗೆ ಬಂದ ತಕ್ಷಣ ಬಾಲಕಿ ಘಟನೆ ಕುರಿತು ತನ್ನ ತಾಯಿಗೆ ವಿವರಿಸಿದ್ದಾಳೆ. ಬಳಿಕ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ದೂರಿನ ಆಧಾರದ ಮೇಲೆ ಪೊಲೀಸರು ಪೋಕ್ಸೋ ಕಾಯ್ದೆಯ ಸಂಬಂಧಿಸಿದ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಆರೋಪಿಯನ್ನು ಕಸ್ಟಡಿಗೆ ಪಡೆದಿದದ್ದಾರೆ ಎಂದು ವರದಿಯಾಗಿದೆ.