ತಿರುವನಂತಪುರಂ: ಗರ್ಭಿಣಿಯೊಬ್ಬರು ದೇವರನ್ನು ಮೆಚ್ಚಿಸಲು ತನ್ನ 6 ವರ್ಷದ ಮಗನನ್ನು ಕೊಂದಿರುವ ಘಟನೆ ಕೇರಳಾದ ಪಾಲಕ್ಕಾಡ್‍ನಲ್ಲಿ ನಡೆದಿದೆ.
ಶಾಹಿದಾ(30) ಮಗನನ್ನು ಕೊಂದ ತಾಯಿ. ದೇವರ ಹೆಸರಿನಲ್ಲಿ ಹೆತ್ತ ತಾಯಿ ಮಗನ ಕತ್ತು ಸೀಳಿ ಅತ್ಯಂತ ಭೀಕರವಾಗಿ ಹತ್ಯೆ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
ಗರ್ಭಿಣಿ ಶಾಹಿದಾ ಮುಂಜಾನೆ ತನ್ನ ಮೂರನೇ ಮಗನನ್ನು ಕೊಲೆ ಮಾಡಿದ್ದಾಳೆ. ಬಳಿಕ ತಾನೇ ಪೊಲೀಸರಿಗೆ ಕರೆ ಮಾಡಿ ನಾನು ನನ್ನ ಮಗನನ್ನು ಕೊಲೆ ಮಾಡಿದ್ದೇನೆ. ದೇವರನ್ನು ಸಂತೃಪ್ತಿಪಡಿಸಲೆಂದು ಈ ಕೊಲೆಯನ್ನು ಮಾಡಿದ್ದೇನೆ ಎಂದು ತಿಳಿಸಿದ್ದಾಳೆ. ಮುಂಜಾನೆ 3 ಗಂಟೆಯ ಸುಮಾರಿಗೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಶಾಹಿದಾ ಪತಿ ಹಾಗೂ ಇಬ್ಬರು ಮಕ್ಕಳಿಗೆ ಮನೆಯಲ್ಲಿ ಕೊಲೆಯಾಗಿರುವ ವಿಚಾರ ತಿಳಿದಿದೆ.
ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಮಹಿಳೆ ಶರಣಾಗಿದ್ದಾಳೆ. ಈ ಪ್ರಕರಣ ಕುರಿತಾಗಿ ತನಿಖೆ ನಡೆಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.