ದಾವಣಗೆರೆ: ದೆಹಲಿ ನಾಯಕರ ಮನೆಯ ಗೇಟ್ ಮುಟ್ಟಿ ಫೋಟೋ ತೆಗೆಸಿಕೊಂಡು ಬರ್ತಾರೆ ಎಂದು ಹೇಳುವ ಮೂಲಕ ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಶಾಸಕ ಎಂ.ಪಿ ರೇಣುಕಾಚಾರ್ಯ ಮತ್ತೆ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ನಾಯಕರ ಮನೆಯ ಗೇಟ್ ಮುಟ್ಟಿ ನಂತರ ಅಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಬರುತ್ತಾರೆ. ಇಲ್ಲಿ ಬಂದು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಆ ವ್ಯಕ್ತಿ. ಕೋವಿಡ್ ಸೋಂಕು ಇಳಿಮುಖ ಅಗಲಿ. ಆ ಬಳಿಕ ನನ್ನ ಹೋರಾಟ ಶುರುವಾಗಲಿದೆ. ಯೋಗೇಶ್ವರ್ ಅವರನ್ನ ವಜಾ ಮಾಡಬೇಕು. ಜೊತೆಗೆ ಮೆಗಾ ಸಿಟಿ ಹಗರಣದ ಹಿನ್ನೆಲೆ ಬಂಧಿಸಬೇಕು ಎಂದು ಗರಂ ಆಗಿದ್ದಾರೆ. ಇದನ್ನು ಓದಿ: ವಿಧಿಯ ಮುಂದೆ ಎಲ್ಲವೂ ಶೂನ್ಯ – ಸೋಂಕಿತನ ಅಂತ್ಯಕ್ರಿಯೆ ನೆರವೇರಿಸಿ ಭಾವುಕರಾದ ರೇಣುಕಾಚಾರ್ಯ
65 ಜನ ಶಾಸಕರು ಸೇರಿ ಸಿಪಿವೈ ವಜಾ ಮಾಡೋಕೆ ಒತ್ತಾಯಿಸಿದ್ದೇವೆ. ಸಿಪಿ ಯೋಗೇಶ್ವರ್ ಉಂಡು ಹೋದ ಕೊಂಡು ಹೋದ ಥರ. ಯೋಗೇಶ್ವರ್ ಮೆಗಾಸಿಟಿ ದೊಡ್ಡ ಹಗರಣ ಮಾಡಿದ್ದಾರೆ. ಈ ಬಗ್ಗೆ ಡಿಜಿ ಐಜಿಗೂ ದೂರು ನೀಡಿದ್ದಾರೆ. ಆ ಮನುಷ್ಯ ಮೂಲತ ಬಿಜೆಪಿಯವರಲ್ಲ, ಅವಕಾಶವಾದಿ ಎಂದು ಜರಿದಿದ್ದಾರೆ. ಇದನ್ನು ಓದಿ: ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆ ವಿರುದ್ಧ ಸೋಂಕಿತರ ಆಕ್ರೋಶ
ಸದಾನಂದ ಗೌಡ ಅವಧಿಯಲ್ಲಿ ಲೂಟಿ ಹೊಡೆದು, ಕೊನೆ ಕ್ಷಣದಲ್ಲಿ ಕೈ ಸೇರಿದ, ಕೊನೆಗೆ ಸೈಕಲ್ ಹತ್ತಿದ್ದಾರೆ. ಬಿಜೆಪಿ ಸರ್ಕಾರ ಬರಲು ಕಾರಣ ಆದ ಅಂತಾರೆ. ಆದರೆ ಸ್ವಾಭಿಮಾನಕ್ಕೆ ಧಕ್ಕೆ ಆಗಿ ಜೆಡಿಎಸ್ ಕಾಂಗ್ರೆಸ್ ಶಾಸಕರು ಅವರೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದಿದ್ದಾರೆ. ಸಿಎಂ ಭೇಟಿ ಮಾಡಿ ಸೋತವರಿಗೆ ಸಚಿವ ಸ್ಥಾನ ಕೊಡಬೇಡಿ ಅಂತ ಹೇಳಿದ್ದೇವೆ. ನಂತರ ಕೈಕಾಲು ಹಿಡಿದು ಮಿನಿಸ್ಟರ್ ಆಗಿದ್ದಾರೆ. ಅವರದ್ದು ಐರೈನ್ ಲೆಗ್ ಇದ್ದಂತೆ ಎಂದು ರೇಣುಕಾಚಾರ್ಯ ಸಿಡಿಮಿಡಿಗೊಂಡಿದ್ದಾರೆ.
ರಾಮನಗರ ಉಸ್ತುವಾರಿ ಬೇಕು, ಇಂಧನ ಖಾತೆ ಬೇಕು ಬೃಹತ್ ನೀರಾವರಿ ಬೇಕು ಅಂತಾರೆ. ಅವರಿಗೆ ತನ್ನ ಸ್ವಂತ ಚಿಕ್ಕೇರಿ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಗೆಲ್ಲಿಸೋಕೆ ಆಗಿಲ್ಲ. ಪಕ್ಷ ಸಂಘಟನೆ ಮಾಡ್ತೀನಿ ಅಂತ ಕೊಚ್ಕೊಳ್ತಾರೆ, ಅವರ ಕೊಡುಗೆ ಏನಿದೆ. ಸಿಎಂಗೆ ಮೊದಲೇ ಹೇಳಿದ್ದೇವೆ, ಅವರನ್ನು ಮಂತ್ರಿ ಮಾಡಬೇಡಿ ಅಂತ ಅವರು 420 ಅಂತ. 65 ಶಾಸಕರು ವಜಾ ಮಾಡಿ ಅಂತ ಸಹಿ ಸಂಗ್ರಹ ಮಾಡಲಾಗಿದೆ ಎಂದರು. ಇದನ್ನು ಓದಿ: ಕೋವಿಡ್ ಕೇಂದ್ರದಲ್ಲಿ ಯೋಗ ಟೀಚರ್ ಆದ ರೇಣುಕಾಚಾರ್ಯ
ಅವರ ಮೇಲೆ ಕ್ರಮ ಕೈಗೊಳ್ಳಲು ಸಿಎಂ ಅವರಿಗೆ ಭಯ ಇಲ್ಲ. ಸಿಎಂ ರೆಡಿಮಿಡ್ ಫುಡ್ ಅಲ್ಲ ಪಕ್ಷ ಸಂಘಟನೆ, ಹೋರಾಟದಿಂದ ಬಂದವರು. ಯಡಿಯೂರಪ್ಪ ಆಲದ ಮರ ನಾವು ಅವರ ನೆರಳಲ್ಲಿ ಇರೋರು. ಅವರ ಬೆನ್ನಿಗೆ ಚೂರಿ ಹಾಕಿದ್ರೆ ನಾವು ಬೀಡ್ತಿವಾ ಅದು ನಡೆಯಲ್ಲ. ಕೋವಿಡ್ ಇರೋದ್ರಿಂದ ಸುಮ್ಮನೆ ಇದ್ದೀವಿ, ಅದಾದ ನಂತರ ಹೋರಾಟ ಶುರು ಮಾಡ್ತೀವಿ ಎಂದರು.