ನವದೆಹಲಿ: ಕರ್ನಾಟಕ ಭವನದ ಕಾನೂನು ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಮಿಳುನಾಡು ಮೂಲದ ಪಿ.ಎನ್.ರಾಮನಾಥನ್‍ಗೆ (ರಾಜ) ಅಕ್ರಮ ಬಡ್ತಿ ಮತ್ತು ನಿಯಮ ಮೀರಿ ಸೇವಾವಧಿ ವಿಸ್ತರಿಸಲು ಶಿಫಾರಸು ಮಾಡಿರುವ ಆರೋಪ ಕೇಳಿ ಬಂದಿದೆ.
ಸೇವಾ ಹಿರಿತನದಲ್ಲಿ 9ನೇ ಸ್ಥಾನದಲ್ಲಿರುವ ಪಿ.ಎನ್.ರಾಮನಾಥನ್ ನಿಯಮ ಮೀರಿ ಬಡ್ತಿ ನೀಡುವ ಪ್ರಕ್ರಿಯೆ ನಡೆದಿದ್ದು, ಇಲ್ಲಿ ಗೋಲ್‍ಮಾಲ್ ನಡೆದಿರುವುದಾಗಿ ಕರ್ನಾಟಕ ಭವನದ ಹಲವು ಸಿಬ್ಬಂದಿ ಆರೋಪಿಸಿದ್ದಾರೆ.
Advertisement
ಪಿ.ಎನ್.ರಾಮನಾಥ್‍ಗೂ ಮುನ್ನ ಸೇನಾ ಹಿರಿತನದಲ್ಲಿ ಎಂಟು ಮಂದಿ ಕಾರ್ಯ ನಿರ್ವಹಿಸುತ್ತಿದ್ದು, ಅವರೆಲ್ಲರನ್ನು ನಿರ್ಲಕ್ಷಿಸಿ ರಾಮನಾಥನ್‍ಗೆ ಮಣೆ ಹಾಕಲಾಗಿದೆ ಅಲ್ಲದೇ ಬಡ್ತಿ ಜೊತೆಗೆ ಸೇವಾವಧಿ ಅವಧಿ ವಿಸ್ತರಣೆ ಮಾಡಿ ನಿವಾಸಿ ಆಯುಕ್ತರು ಶಿಫಾರಸು ಮಾಡಿದ್ದಾರೆ. ಈ ಹಿಂದೆ ನಿವಾಸಿ ಆಯುಕ್ತರಾಗಿದ್ದ ನಿಲಯ್ ಮಿತಾಶ್ ಅವರ ಮೇಲೆ ರಾಮನಾಥ್ ರಾಜಕೀಯ ಪ್ರಭಾವ ಬೀರಿದ್ದು, ಅವರು ತಮ್ಮ ವರ್ಗಾವಣೆಗೂ ಮುನ್ನ ರಾಮನಾಥನ್ ಸೇವಾ ಅವಧಿ ವಿಸ್ತರಣೆಗೆ ಶಿಫಾರಸು ಮಾಡಿದ್ದರು.
Advertisement
ರಾಮನಾಥನ್ ಬಡ್ತಿ ಮತ್ತು ಸೇವಾವಧಿ ವಿಸ್ತರಣೆಗೆ ಈಗ ತಕರಾರು ಕೇಳಿ ಬಂದ ಹಿನ್ನೆಲೆ ರಾಜ್ಯ ಸಚಿವ ಸಂಪುಟದ ಅನುಮೋದನೆ ಪಡೆಯಲು ಪ್ರಯತ್ನ ಮಾಡಲಾಗುತ್ತಿದೆ. ರಾಜ್ಯ ರಾಜಕಾರಣಿಗಳ ಮೇಲೂ ಪ್ರಭಾವ ಬೀರುವ ಶಕ್ತಿ ಇರುವ ಈ ತಮಿಳು ಅಧಿಕಾರಿ ಸಚಿವ ಸಂಪುಟ ಒಪ್ಪಿಗೆ ಪಡೆಯಲಿದ್ದು ಅಕ್ರಮವಾಗಿ ಬಡ್ತಿ ಹಾಗೂ ಸೇವಾವಧಿ ವಿಸ್ತರಣೆ ಮಾಡಿಸಿಕೊಳ್ಳಲಿದ್ದಾರೆ ಎಂದು ಹಲವು ಕರ್ನಾಟಕ ಭವನದ ನೌಕರರು ಆರೋಪಿಸಿದ್ದಾರೆ.