ಬೆಂಗಳೂರು: ದೆಹಲಿಯಿಂದ ಬಂದ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ ನಲಪಾಡ್ ಅವರನ್ನ ಅದ್ಧೂರಿಯಾಗಿ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ನಲಪಾಡ್, ಕಾಂಗ್ರೆಸ್ ಪಕ್ಷ ನನ್ನ ತಾಯಿಯಿದ್ದಂತೆ. ನಾನು ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತ. ರಾಜ್ಯ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಜನ ನನಗೆ ಅತಿ ಹೆಚ್ಚಿನ ಮತಗಳನ್ನ ಕೊಟ್ಟು ತಮ್ಮ ಪ್ರೀತಿಯನ್ನ ತೋರಿಸಿದ್ದಾರೆ. ಆದ್ರೆ ಸಿಸ್ಟಂನಲ್ಲಿ ಸಣ್ಣ ಪುಟ್ಟ ಪ್ರಾಬ್ಲಂಗಳಿವೆ. ನನಗೆ ಕಾಂಗ್ರೆಸ್ ಪಕ್ಷದ ಮೇಲೆ ನೂರಕ್ಕೆ ನೂರರಷ್ಟು ಭರವಸೆ ಇದೆ ಎಂದು ಕಾಂಗ್ರೆಸ್ ಯುವ ಘಟಕದ ರಾಜ್ಯಾಧ್ಯಕ್ಷ ಸ್ಥಾನ ತಪ್ಪಿದ್ದಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದರು.
ನಾನು ಕಾಂಗ್ರೆಸ್ ಕಾರ್ಯಕರ್ತ. ನನಗೆ ಎಕ್ಸ್ ಹಾಗೂ ವೈ ಅಂತ ಇಲ್ಲ. ನಾನು ಯಾವಾಗಲೂ ಕಾಂಗ್ರೆಸ್ ಕಾರ್ಯಕರ್ತನಾಗೇ ಇರ್ತೇನೆ ಅಂತ ಹೇಳಿದರು. ಇನ್ನೂ ಅಧ್ಯಕ್ಷ ಸ್ಥಾನ ಸಿಕ್ಕ ಬಗ್ಗೆ ಮಹಮದ್ ನಲಪಾಡ್ ಸ್ಪಷ್ಟಪಡಿಸಲಿಲ್ಲ.
ಇನ್ನೂ ಕೆಐಎಬಿಯಲ್ಲಿ ಬೆಂಬಲಿಗರು ಅದ್ಧೂರಿ ಸ್ವಾಗತ ಕೋರಿದರು. ಬೃಹತ್ ಗಾತ್ರದ ಪುಷ್ಪಮಾಲೆ ಹಾಕಿ ಏರ್ಪೋರ್ಟ್ ನಲ್ಲಿ ಬರಮಾಡಿಕೊಂಡರು. ನೂರಾರು ಮಂದಿ ಬೆಂಬಲಿಗರು ಜಮಾವಣೆಗೊಂಡು ಶುಭಾಶಯ ಕೋರಿದ್ರು.