ನವದೆಹಲಿ: ಕೊರೊನಾ ನಿಯಂತ್ರಣಕ್ಕಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ವಿಧಿಸಿದ್ದ ಲಾಕ್‍ಡೌನ್ ಅವಧಿಯನ್ನ ಮತ್ತೆ ಒಂದು ವಾರ ವಿಸ್ತರಿಸಿದ್ದಾರೆ.
ಮೇ 3ರ ಬೆಳಗ್ಗೆ 5 ಗಂಟೆಗೆ ದೆಹಲಿಯ ಲಾಕ್‍ಡೌನ್ ಅಂತ್ಯವಾಗಲಿತ್ತು. ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಆಪ್ ಸರ್ಕಾರ ಒಂದು ವಾರದ ಲಾಕ್‍ಡೌನ್ ವಿಸ್ತರಣೆ ಮಾಡಿದ್ದಾರೆ. ಈ ಮೊದಲೇ ಸಿಎಂ ಕೇಜ್ರಿವಾಲ್ ಲಾಕ್‍ಡೌನ್ ವಿಸ್ತರಿಸುವ ಸುಳಿವು ನೀಡಿದ್ದರು. ಮೇ 10ರ ಬೆಳಗ್ಗೆ 5 ಗಂಟೆವರೆಗೆ ದೇಶದ ರಾಜಧಾನಿ ಲಾಕ್ ಆಗಲಿದೆ. ಈ ಹಿಂದಿನ ಮಾರ್ಗಸೂಚಿಗಳು ಮುಂದುವರಿಯಲಿವೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
Advertisement
Lockdown in Delhi is being extended by one week
— Arvind Kejriwal (@ArvindKejriwal) May 1, 2021
Advertisement
ಮೇ 3ಕ್ಕೆ ಲಾಕ್‍ಡೌನ್ ತೆರವಾದ್ರೆ ಅಂಗಡಿ ತೆರೆಯಲ್ಲ ಎಂದು ದೆಹಲಿಯ ವ್ಯಾಪಾರಿಗಳು ಶುಕ್ರವಾರ ಘೋಷಣೆ ಮಾಡಿದ್ದರು. ಸರ್ಕಾರದ ಲಾಕ್ ಸಡಿಲಗೊಳಿಸಿದರೂ ನಾವು ಸ್ವಯಂ ನಿರ್ಬಂಧ ಹಾಕಿಕೊಳ್ಳುತ್ತಿದ್ದೇವೆ ಎಂದು 150ಕ್ಕೂ ಅಧಿಕ ವ್ಯಾಪಾರಿ ಸಂಘಟನೆಗಳು ಹೇಳಿದ್ದವು. ಸರ್ಕಾರವೂ ಇನ್ನು ಕೆಲವು ದಿನಗಳವರೆಗೆ ಲಾಕ್‍ಡೌನ್ ವಿಸ್ತರಿಸೋದು ಒಳ್ಳೆಯದು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದರು. .