– ಗ್ರಾಮೀಣ ಭಾಗಗಳ ಆಸ್ಪತ್ರೆಗಳಿಗೆ ಬಲ ತುಂಬಿದ ಮುಖಂಡ ಅಮೀನ್
ಯಾದಗಿರಿ: ಕೊರೊನಾ ಎರಡನೇ ಅಲೆಯ ಹೊಡೆತ ಸಿಕ್ಕಿರುವ ಗ್ರಾಮೀಣ ಭಾಗಗಳ ಆಸ್ಪತ್ರೆಗಳಿಗೆ ಬಲ ತುಂಬುವ ನಿಟ್ಟಿನಲ್ಲಿ ಮತ್ತು ಸಕಾಲಕ್ಕೆ ಗ್ರಾಮೀಣ ಭಾಗದ ಜನರಿಗೆ ಉಚಿತವಾಗಿ ಆಕ್ಸಿಜನ್ ದೊರೆಯುವಂತಾಗಲು, ಶಹಪುರದ ಬಿಜೆಪಿ ಮುಖಂಡ ಹಾಗೂ ಅಮೀನ್ ರೆಡ್ಡಿ ಯಾಳಗಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಅಮೀನ್ ರೆಡ್ಡಿಯವರು ಸುಮಾರು 15 ಆಕ್ಸಿಜನ್ ಕಾನ್ಸನ್ಟ್ರೇರ್ ಗಳನ್ನು ಉಚಿತವಾಗಿ ಶಹಪುರ ತಾಲೂಕು ಆಸ್ಪತ್ರೆಗೆ ನೀಡಿದ್ದಾರೆ.
ಒಟ್ಟು ಹತ್ತು ಲಕ್ಷ ಮೌಲ್ಯ 20 ಕಾನ್ಸನ್ಟ್ರೇರ್ ಖರೀದಿಸಿರುವ ಅಮೀನ್ ರೆಡ್ಡಿ, 15 ಶಹಪುರ ತಾಲೂಕು ಆಸ್ಪತ್ರೆ ನೀಡಿ, ಉಳಿದ ಐದು ಕಾನ್ಸನ್ಟ್ರೇರ್ ಗಳನ್ನು ಅಗತ್ಯಬಿಳುವ ಸೋಂಕಿತರಿಗೆ ನೀಡುವ ಸಲುವಾಗಿ ತಮ್ಮ ಕಚೇರಿಯಲ್ಲಿ ಇಟ್ಟುಕೊಂಡಿದ್ದು, ಆಕ್ಸಿಜನ್ ಅಗತ್ಯ ಬಿಳುವ ಸೋಂಕಿತರು ದೂರವಾಣಿ ಕರೆ ಮಾಡಿದ್ರೆ ಸಾಕು ಅವರು ಇರುವ ಸ್ಥಳಕ್ಕೆ ಕಾನ್ಸನ್ಟ್ರೇರ್ ಕಳುಹಿಸಿ ಕೊಡಲಾಗುತ್ತದೆ.
ಅಮೀನ್ ರೆಡ್ಡಿಯವರ ಈ ಐಡಿಯಾದಿಂದ ನೂರಾರು ಸೋಂಕಿತರು ಸಕಾಲಕ್ಕೆ ಆಕ್ಸಿಜನ್ ಪಡೆಯುವಂತಾಗಿದೆ. ಅವರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.