– ಕೇಂದ್ರ ನಾಯಕರು ಯತ್ನಾಳ್ ಪರ ಇದ್ದಾರೆ
ಚಿತ್ರದುರ್ಗ: ಹಣ ಹಂಚಿ ಗೆದ್ದವರು ಅವಧಿ ಪೂರ್ಣ ಕೆಲಸ ಮಾಡುವುದಿಲ್ಲ. ಇದು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆ ಆಗಿದ್ದು, ಹೇಸಿಗೆ ತರಿಸಿದೆ ಎಂದು ಮಾಜಿ ಸಚಿವ, ಜೆಡಿಸ್ ಮುಖಂಡ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗಳಲ್ಲಿ ಎಲ್ಲಾ ಪಕ್ಷದವರು ಹಣ, ಸಾರಾಯಿ ಹಂಚುತ್ತಾರೆ. ಮತದಾರರು ಮೂರು ಕಡೆಯಿಂದಲೂ ಇವುಗಳನ್ನು ತೆಗೆದುಕೊಂಡು ಒಬ್ಬರಿಗೆ ಟೋಪಿ ಹಾಕ್ತಾರೆ. ದುಡ್ಡು ಕೊಟ್ಟು ಗೆದ್ದವರು ಅವಧಿ ಪೂರ್ಣ ಕೆಲಸ ಮಾಡುವುದಿಲ್ಲ. ಇದು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆ ಆಗಿದ್ದು ಹೇಸಿಗೆ ತರಿಸಿದೆ. ರಾಜಕಾರಣ ಬೇಡ ಅನ್ನಿಸಿದರೂ ನಾವು ಡ್ರಗ್ ಅಡಿಕ್ಟ್ ಆದಂತಾಗಿದೆ ಎಂದು ಕಿಡಿಕಾರಿದರು.
ಸಿಎಂ ಸ್ಥಾನದಿಂದ ಬಿಎಸ್‍ವೈ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೋದಿ ಹಾಗೂ ಶಾ ಬೆಂಬಲ ಇಲ್ಲದೆ ಬಿಜೆಪಿ ಶಾಸಕ ಯತ್ನಾಳ್ ಹೇಳಲು ಸಾಧ್ಯವಿಲ್ಲ. ಮೋದಿ, ಶಾ ಪ್ರಭಾವ ಕಾರಣ ಯತ್ನಾಳ್ ವಿರುದ್ಧ ಕ್ರಮ ಆಗಿಲ್ಲ. ನಾನೇ ಸಿಎಂ ಆಗುತ್ತೇನೆ ಎಂದು ಯತ್ನಾಳ್ ನನ್ನ ಬಳಿ ಹೇಳಿದ್ದಾರೆ. ಸಿಎಂ ಬಿಎಸ್ ವೈ ಅಧಿಕಾರದಿಂದ ಇಳಿಸುತ್ತಾರೋ ಇಲ್ವೋ ಗೊತ್ತಿಲ್ಲ. ಬಿಎಸ್ ವೈ ಬಳಿಕ ಯತ್ನಾಳ್ ಸಿಎಂ ಆಗುತ್ತಾರೋ ಗೊತ್ತಿಲ್ಲ. ಕೇಂದ್ರದ ಎಲ್ಲಾ ನಾಯಕರು ಯತ್ನಾಳ್ ಪರವಾಗಿದ್ದಾರೆ ಎಂದರು. ಇದನ್ನೂ ಓದಿ: ಯತ್ನಾಳ್‍ಗಿರೋ ಗಟ್ಸ್ ರಾಜ್ಯ ಬಿಜೆಪಿ ನಾಯಕರಿಗಿಲ್ಲ: ಹೊರಟ್ಟಿ
ಮೂರು ಪಕ್ಷದ ಹೈಕಮಾಂಡ್ ಗಳಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಮೋದಿ ಎದುರು ಯಾರೂ ನಿಲ್ಲೋಕಾಗೋದಿಲ್ಲ. ಇಂಥ ಸಂದರ್ಭದಲ್ಲಿ ಯತ್ನಾಳ್ ನಾನೇ ಮುಂದಿನ ಸಿಎಂ ಅಂತಿದ್ದಾರೆ. ಯತ್ನಾಳ್ ವಿರುದ್ಧ ಕ್ರಮ ಆಗಿಲ್ಲ ಅಂದರೆ ಹೈಕಮಾಂಡ್ ಅವರ ಪರ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಎಸ್‍ವೈ ಸಿಎಂ ಆಗಿ ಬಹಳ ದಿನ ಉಳಿಯುವುದಿಲ್ಲ: ಯತ್ನಾಳ್ ಹೊಸ ಬಾಂಬ್