– ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್
ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರಿನ ಮಂದಿ ಊರುಗಳತ್ತ ಪ್ರಯಾಣಿಸುತ್ತಿದ್ದು, ಮೆಜೆಸ್ಟಿಕ್ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಜಾತ್ರೆಯಂತಾಗಿದೆ. ಇಂದು ಮಧ್ಯಾಹ್ನದಿಂದಲೇ ಬೆಂಗಳೂರು ನಗರದ ಬಹುತೇಕ ಭಾಗಗಳಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಜನ ಮಳೆ ಮತ್ತು ಕೊರೊನಾ ಸಹ ಲೆಕ್ಕಿಸದೇ ಊರುಗಳತ್ತ ಹೊರಟು ನಿಂತಿದ್ದಾರೆ.
Advertisement
ಹಬ್ಬದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಸ್ ನಿಲ್ದಾಣದತ್ತ ಆಗಮಿಸಿದ್ದರಿಂದ ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ. ತುಮಕೂರು, ಬಳ್ಳಾರಿ, ಮೈಸೂರು ರಸ್ತೆಗಳು ಜನರಿಂದ ತುಂಬಿ ತುಳುಕುತ್ತಿದ್ದು, ವಾಹನಗಳು ಮಂದಗತಿಯಲ್ಲಿ ಸಾಗುತ್ತಿವೆ.
Advertisement
Advertisement
ಇನ್ನು ಖಾಸಗಿ ವಾಹನಗಳು ದೀಪಾವಳಿಯನ್ನೇ ಬಂಡವಾಳ ಮಾಡಿಕೊಂಡಿದ್ದು ಪ್ರಯಾಣ ದರವನ್ನ ದುಪ್ಪಟ್ಟು ವಸೂಲಿ ಮಾಡಿಕೊಳ್ಳುತ್ತಿವೆ. ಬಸ್ ನಿಲ್ದಾಣ, ಪ್ರಮುಖ ರಸ್ತೆಗಳಲ್ಲಿ ಜನರು ಸಾಮಾಜಿಕ ಅಂತರವನ್ನೇ ಮರೆತು ಊರಿಗೆ ಸಡಗರದಲ್ಲಿದ್ದಾರೆ. ಸಣ್ಣ ಮಕ್ಕಳು, ವೃದ್ಧರು ಎನ್ನದೇ ಗುಂಪು ಗುಂಪಾಗಿದೆ ಎಲ್ಲರೂ ಪ್ರಯಾಣ ಬೆಳೆಸುತ್ತಿರೋದು ಕೊರೊನಾ ಆತಂಕಕ್ಕೆ ಕಾರಣವಾಗಿದೆ.