ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಅಭಿನಯದ ದಿ ಫ್ಯಾಮಿಲಿ ಮ್ಯಾನ್-2 ವೆಬ್ ಸೀರಿಸ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಮೆಚ್ಚುಗೆ ಪಡೆಯುತ್ತಿದೆ. ಈ ಮಧ್ಯೆ ಕನ್ನಡದ ನಟಿಯರು ಸಮಂತಾ ಆ್ಯಕ್ಟಿಂಗ್‍ಗೆ ಫುಲ್ ಫಿದಾ ಆಗಿದ್ದಾರೆ.
ಇಷ್ಟು ದಿನ ಗ್ಲಾಮರ್ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಸಮಂತಾ ಅಕ್ಕಿನೇನಿ, ದಿ ಫ್ಯಾಮಿಲಿ ಮ್ಯಾನ್-2 ವೆಬ್ ಸೀರಿಸ್‍ಗಾಗಿ ಫುಲ್ ವರ್ಕ್ ಔಟ್ ಮಾಡಿ, ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು. ಚೆನ್ನೈನ ಗಾರ್ಮೆಂಟ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುವ ರಾಜಿ ಎಂಬ ಎರಡು ವಿಭಿನ್ನ ಶೇಡ್ ಇರೋ ಪಾತ್ರದಲ್ಲಿ ನಟಿಸಿದ್ದಾರೆ.
ಸದ್ಯ ನಟಿ ಸಮಂತಾ ಅಕ್ಕಿನೇನಿ ದಿ ಫ್ಯಾಮಿಲಿ ಮ್ಯಾನ್-2 ವೆಬ್ ಸೀರಿಸ್‍ನ ಚಿಕ್ಕ ದೃಶ್ಯವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನನಗೆ ಸ್ಟಂಟ್ ಮಾಡಲು ತರಬೇತಿ ನೀಡಿದ ವ್ಯಕ್ತಿ ಯಾನ್ ನಿಕ್‍ಬಿನ್‍ಗೆ ವಿಶೇಷ ಧನ್ಯವಾದ ತಿಳಿಸಲು ಬಯಸುತ್ತೇನೆ. ನನ್ನನ್ನು ತಳ್ಳಿದಾಗಲೆಲ್ಲ ನನ್ನ ದೇಹದ ಅಂಗಗಳಿಗೆ ನೋವುಂಟಾಗುತ್ತಿತ್ತು. ಆದರೆ ಇವೆಲ್ಲವನ್ನು ನೀಡಲು ಎಂದು ಈಗ ತಿಳಿಯಿತು. ನನಗೆ ಎತ್ತರ ಎಂದರೆ ಭಯವಾಗುತ್ತದೆ. ಆದರೆ ನನ್ನ ಬೆನ್ನ ಹಿಂದೆ ನೀವಿದ್ದೀರಿ ಎಂದು ಬೀಲ್ಡಿಂಗ್‍ನಿಂದ ಜಿಗಿದೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಇದನ್ನು ಓದಿ: ಕೊರೊನಾ ಲಸಿಕೆ ಇಂಜೆಕ್ಷನ್‍ಗೆ ಹೆದರಿಕೊಂಡ್ರಾ ನಿರ್ದೇಶಕ ಪ್ರಶಾಂತ್ ನೀಲ್?
ಇದೀಗ ಈ ವೀಡಿಯೋಗೆ ಸ್ಯಾಂಡಲ್‍ವುಡ್ ನಟಿ ರಶ್ಮಿಕಾ ಮಂದಣ್ಣ, ಬೆಂಕಿಯ ಎಮೋಜಿ ಕಳುಹಿಸಿದ್ದು, ಡ್ಯಾಮ್ ಎಂದು ಕಮೆಂಟ್ ಮಾಡಿದ್ದಾರೆ. ಜೊತೆಗೆ ಕಿರುತೆರೆ ನಟಿ ಶ್ವೇತಾ ಚೆಂಗಪ್ಪ, ಎಂಥ ಪರ್ಫಾಮೆನ್ಸ್ ನಿಮ್ಮದು ಎಂದರೆ, ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್, ನೀವು ಬೆಂಕಿ. ವಾವ್ ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೆ ನಟ ಸಾರ್ವಭೌಮ ಸಿನಿಮಾದಲ್ಲಿ ಪುನೀತ್‍ಗೆ ಜೋಡಿಯಾಗಿದ್ದ ನಟಿ ಅನುಪಮಾ ಪರಮೇಶ್ವರ್ ಕೂಡ ವೀಡಿಯೋ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ: ಶಿಲ್ಪಾ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ – ಬಾಲಿವುಡ್ ಗಣ್ಯರಿಂದ ಶುಭಾಶಯಗಳ ಸುರಿಮಳೆ
View this post on Instagram