ಬಿಗ್ ಮನೆಯಲ್ಲಿ ಸದಾ ಒಂದಲ್ಲ ಒಂದು ವಿಷಯಗಳಲ್ಲಿ ಸುದ್ದಿಯಾಗುತ್ತಿರುವ ದಿವ್ಯಾ ಸುರೇಶ್ ಮತ್ತು ಮಂಜು ಜೋಡಿ ಇದೀಗ ತಮ್ಮಲ್ಲಿ ಕೆಲ ಬದಲಾವಣೆಗಳನ್ನು ಕಂಡುಕೊಂಡಿದೆ. ಟಾಸ್ಕ್ ಒಂದರಲ್ಲಿ ಆಡುವ ಮುನ್ನ ದಿವ್ಯಾ ತನ್ನ ತಂಡಕ್ಕೆ ಹೇಳಿದ ಸಲಹೆಯ ಬಗ್ಗೆ ಮಂಜು ವಿರೋಧ ವ್ಯಕ್ತಪಡಿಸಿ ದಿವ್ಯಾಗೆ ಬುದ್ಧಿವಾದವನ್ನು ಹೇಳಿದ್ದಾರೆ.
ಬಿಗ್‍ಬಾಸ್ ನೀಡಿದ್ದ ನಿಲ್ಲು ನಿಲ್ಲು ಕಾವೇರಿ ಟಾಸ್ಕ್ ನಲ್ಲಿ ಕ್ವಾಟ್ಲೆಕಿಲಾಡಿಗಳು ಮತ್ತು ಸೂರ್ಯ ಸೇನೆ ತಂಡಗಳು ಭರ್ಜರಿಯಾಗಿ ಪ್ರದರ್ಶನ ನೀಡಿದೆ. ಈ ಮೊದಲು ತಂಡದಲ್ಲಿ ಆಡುವ ಆಟಗಾರರ ಹಸರನ್ನು ಆಯ್ಕೆ ಮಾಡುವಾಗ ಕ್ವಾಟ್ಲೆಕಿಲಾಡಿಗಳು ತಂಡದ ಸದಸ್ಯೆ ದಿವ್ಯಾ ತಮ್ಮ ತಂಡಕ್ಕೆ ನೀಡಿದ ಸಲಹೆಯೊಂದರ ಬಗ್ಗೆ ಮಂಜು ಟಾಸ್ಕ್ ಮುಗಿದ ಬಳಿಕ ವಿವರಣಾತ್ಮಕವಾದ ಬುದ್ಧಿವಾದ ಹೇಳಿ ತಂಡಕ್ಕೆ ಬೂಸ್ಟ್ ತುಂಬಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಮನೆಗೆ ಬಂದ್ರೂ ಚಪ್ಪಲಿ ಕದಿಯುವ ಬುದ್ಧಿ ಬಿಡದ ಸ್ಪರ್ಧಿ..!
ಕ್ವಾಟ್ಲೆಕಿಲಾಡಿಗಳು ತಂಡದ ಕ್ಯಾಪ್ಟನ್ ಮಂಜು, ತಮ್ಮ ತಂಡದ ಸದಸ್ಯರು ಆಟ ಆಡಲು ಪ್ರಾರಂಭಿಸುವ ಮೊದಲು ತಮ್ಮಲ್ಲಿ ಆತ್ಮವಿಶ್ವಾಸವನ್ನು ಹೊಂದಿರಬೇಕು. ತಂಡ ಎಂದು ಬಂದಾಗ ನಾವೆಲ್ಲರೂ ಜೊತೆಯಾಗಿ ಆಟದಲ್ಲಿ ತೊಡಗಿಕೊಳ್ಳಬೇಕು. ದಿವ್ಯಾ ನೀನು ಆಡಲು ಹೊರಟಾಗ ಮೊದಲು ಬೇರೆ ಯಾರನ್ನಾದರು ಕಳುಹಿಸಿದರೆ ಒಳ್ಳೆದು ಎಂದು ಹೇಳಿದ್ದೆ. ಆ ರೀತಿ ಹೇಳದೆ ನೀನು ತುಂಬಾ ಆತ್ಮವಿಶ್ವಾಸದಿಂದ ಹೋಗುತ್ತಿದ್ದರೆ ನಮ್ಮ ತಂಡದ ಎಲ್ಲಾ ಸದಸ್ಯರಿಗೆ ಅದು ಪ್ರೋತ್ಸಾಹ ನೀಡಿದಂತೆ ಆಗುತ್ತಿತ್ತು. ನೀನು ಬಲಿಷ್ಠ ಆಟಗಾರ್ತಿ ಎಂದು ನಾವು ನಂಬಿಕೆ ಇಟ್ಟಿರುತ್ತೇವೆ. ಆಗ ನೀನು ವಿಶ್ವಾಸ ಕಳೆದುಕೊಂಡರೆ ನಮ್ಮ ತಂಡಕ್ಕೆ ಅದೇ ಮೊದಲ ಸೋಲಾಗುತ್ತದೆ. ನಮ್ಮಲ್ಲಿರುವ ಭಯವನ್ನು ನಾವು ಇತರರಿಗೆ ತೋರಿಸಿಕೊಳ್ಳಬಾರದು. ಮೊದಲ ಹೆಜ್ಜೆ ಇತತರಿಗೆ ಬೇಗ ಪ್ರಭಾವ ಬೀರುತ್ತದೆ ಮುಂದೆ ಈ ತಪ್ಪು ಮಾಡಬೇಡ ಎಂದು ಮಂಜು ತಿಳಿಹೇಳಿದ್ದಾರೆ.