ದೊಡ್ಮನೆಯ ಪ್ರಣಯ ಪಕ್ಷಿಗಳು ಎಂದೇ ಬಿಂಬಿತವಾಗಿರುವ ಅರವಿಂದ್ ಹಾಗೂ ದಿವ್ಯಾ ಉರುಡುಗ ಇಂದು ಫುಲ್ ಜೊತೆ ಜೊತೆಯಾಗಿಯೇ ಕಾಲ ಕಳೆದಿದ್ದು, ಕೊನೇಯ 11 ದಿನಗಳು ಎಂಬ ಕಾರಣಕ್ಕೋ ಏನೋ ಗೊತ್ತಿಲ್ಲ, ಬಿಗ್ ಬಾಸ್ ನೀಡಿದ ಲಕ್ಸುರಿ ಐಟಂ ಟಾಸ್ಕ್‍ನಲ್ಲಿ ಸಹ ಒಟ್ಟಿಗೆ ಆಡಿದ್ದಾರೆ.
ಹೌದು ಅರವಿಂದ್ ಒಬ್ಬರೇ ಕುಳಿತಾಗ ದಿವ್ಯಾ ಉರುಡುಗ ಆ ಕಡೆ ಹೋಗುತ್ತಾರೆ, ಆಗ ಅರವಿಂದ್ ಬಾ ಕುಳಿತುಕೋ ಎನ್ನುತ್ತಾರೆ. ಹಾಗೇ ಹೇಳುತ್ತಲೇ ದಿವ್ಯಾ ಉರುಡುಗ ಅರವಿಂದ್ ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆ. ಆಗ ದಿವ್ಯಾ ಉರುಡುಗ ಕಂಡೀಶನ್ ಹಾಕುತ್ತಾರೆ. ನೀವು ಇಲ್ಲೇ ಕುಳಿತುಕೋ ಎಂದು ಹೇಳಿದರೆ ಆದರೆ ನನಗೆ ಸುಮ್ಮನೇ ಕುಳಿತುಕೊಳ್ಳಲು ಆಗಲ್ಲ, ನಾನು ಕುಳಿತುಕೊಂಡರೆ ಮಾತನಾಡಿಸುತ್ತೇನೆ, ನೀವು ಸ್ಟ್ರಾಟಜಿ ಅಂತೆಲ್ಲ ಹೇಳಂಗಿಲ್ಲ ಎನ್ನುತ್ತಾರೆ.
ನಾನು ಏನು ಬೇಕಾದರೂ ಹೇಳಬಹದು ಎಂದು ಅರವಿಂದ್ ಅನ್ನುತ್ತಾರೆ, ಹಾಗೇ ಹೇಳಿದರೆ ಫೇರ್ ರೀತಿ ಅನ್ನಿಸುವುದಿಲ್ಲ, ನೀವು ಮೈಂಡ್ ಖಾಲಿ ಮಾಡಿಕೊಳ್ಳುತ್ತೀರಾ ಎನ್ನುತ್ತಾರೆ. ಅಲ್ಲದೆ ನಾನು ಕುಳಿತುಕೊಳ್ಳಬೇಕಾ ಎದ್ದು ಹೋಗಬೇಕಾ ಎಂದು ದಿವ್ಯಾ ಉರುಡುಗ ಪ್ರಶ್ನಿಸುತ್ತಾರೆ ಆಗ ಅರವಿಂದ್ ಕಿವಿ ಮುಚ್ಚಿಕೊಳ್ಳುತ್ತಾರೆ.
ಇದ್ದಕ್ಕಿದ್ದಂತೆ ದಿವ್ಯಾ ಉರುಡುಗ ಮಹಾನಟಿ ಅಲ್ಲ, ಮಹಾನಟ ಎನ್ನುತ್ತಾರೆ. ಆಗ ಅರವಿಂದ್ ಯಾರು ಎಂದು ಪ್ರಶ್ನಿಸುತ್ತಾರೆ ಇಷ್ಟಕ್ಕೆ ದಿವ್ಯಾ ಬಿದ್ದು ಬಿದ್ದು ನಗುತ್ತಾರೆ. ಇಷ್ಟಾಗುತ್ತಲೇ ಲಕ್ಸುರಿ ಐಟಂ ಟಾಸ್ಕ್ ಅನೌನ್ಸ್ ಆಗುತ್ತದೆ. ಸೋಫಾ ಮೇಲೆ ಅಕ್ಕಪಕ್ಕ ಕುಳಿತಿದ್ದ ದಿವ್ಯಾ ಉರುಡುಗ, ಅರವಿಂದ್ ಅವರಿಗೆ ಕಚಗುಳಿ ಇಡಲು ಆರಂಭಿಸುತ್ತಾರೆ. ಇಬ್ಬರೂ ಒಬ್ಬರಿಗೊಬ್ಬರು ಕಚಗುಳಿ ಇಟ್ಟು ಸಖತ್ ನಕ್ಕಿದ್ದಾರೆ.
ಈ ದೃಶ್ಯವನ್ನು ಪ್ರಶಾಂತ್ ಸಂಬರಗಿ ಮಾತ್ರ ಫುಲ್ ಗಂಭಿರವಾಗಿ ನೋಡಿದ್ದಾರೆ. ಹೀಗೆ ಕಚಗುಳಿ ಇಟ್ಟು ಫುಲ್ ನಕ್ಕಿದ್ದಾರೆ. ಬಳಿಕ ಇಬ್ಬರೂ ಟಾಸ್ಕ್ ಮಾಡಲು ತೆರಳಿದ್ದು, ನಂಬರ್ ಪ್ಲೇಟ್ ಟಾಸ್ಕ್‍ನಲ್ಲಿ ದಿವ್ಯಾ ಉರುಡುಗ ವಿನ್ ಆಗಿದ್ದಾರೆ. ಅರವಿಂದ್ ಬೇಗನೇ ನಂಬರ್ ಪ್ಲೇಟ್ ಸಂಗ್ರಹಿಸಿದರೂ ಕ್ಯಾಪ್ಟನ್ ಬಳಿ ಬೇಗ ನೀಡದ ಕಾರಣ ಸೋತಿದ್ದಾರೆ. ಬಳಿಕ ಸುಖಾಸುಮ್ಮನೇ ಸೋತೆ ಎಂದು ಪಶ್ಚಾತಾಪಪಟ್ಟಿದ್ದಾರೆ.