ದಿವ್ಯಾ ಉರುಡುಗ ಹೊರ ಹೋಗಿದ್ದಕ್ಕೆ ಬಿಗ್ ಮನೆಯಲ್ಲಿ ಇನ್ನೂ ನೀರವ ಮೌನ ಆವರಿಸಿದ್ದು, ಸ್ಪರ್ಧಿಗಳಲ್ಲಿ ಬೇಸರ ಕಾಡುತ್ತಿದ್ದರೆ, ಅರವಿಂದ್ ಅವರಿಗೆ ಒಂಟಿತನ ಕಾಡುತ್ತಿದೆ. ಇದೇ ವೇಳೆ ದಿವ್ಯಾ ಹಾಗೂ ಅರವಿಂದ್ ನೀರಿನ ಬಾಟಲ್ ಸೀಕ್ರೆಟ್ ನ್ನು ಶುಭಾ ಪೂಂಜಾ ಬಿಚ್ಚಿಟ್ಟಿದ್ದಾರೆ.
ಬೆಳ್ಳಂ ಬೆಳಗ್ಗೆಯೇ ಅರವಿಂದ್ ಬೇಸರದಲ್ಲಿರುವುದನ್ನು ಕಂಡು ಮಂಜು ಪಾವಗಡ ಸಮಾಧಾನ ಮಾಡಲು ಯತ್ನಿಸಿದ್ದಾರೆ. ಒಕೆ ನಾ… ಏನೂ ಮಾಡಕ್ಕಾಗಲ್ಲ, ನನಗೇ ಹಿಂಸೆ ಆಗುತ್ತಾಳೆ. ಸಿಕ್ಕಾಪಟ್ಟೆ ಬೇಜಾರುತ್ತಿದೆ, ಅವಳು ನಗುತ್ತಿದ್ದದ್ದು, ಆ ಕ್ಷಣಕ್ಕೆ ಏನೇನೋ ಮಾತನಾಡಿ ಬಿಡುತ್ತೇವೆ, ಅದು ನಿಜವಾದಾಗ ತುಂಬಾ ಬೇಸರವಾಗುತ್ತದೆ, ಒಂಟಿತನ ಫೀಲ್ ಆಗುತ್ತೆ. ಜೊತೆಯಲ್ಲಿದ್ದು, ಹೊಡೆದಾಡಲಿ, ಬಡಿದಾಡಲಿ ಏನೇ ಮಾಡಲಿ. ಆದರೆ ಸಡನ್ ಆಗಿ ನಮ್ಮೋರು ಅಂತ ನಮಗೆ ಇರಲ್ಲಲಾ ಜೊತೆಯಲ್ಲಿ. ಹಾಗಂತ ಯಾರಿಗೂ ಹೇಳಿಕೊಳ್ಳುವ ಹಾಗಿಲ್ಲ, ಬಿಡೋ ಹಾಗಿಲ್ಲ ಎಂದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಮಂಜು ಪಾವಗಡ ಹೀಗೆ ಹೇಳುತ್ತಿದ್ದಂತೆ ಅರವೀಂದ್ ಫುಲ್ ಬೇಜಾರಾಗಿ ಸಪ್ಪೆ ಮೋರೆ ಹೊತ್ತು, ತಲೆ ತಗ್ಗಿಸಿ ಅಳು ಕಂಟ್ರೋಲ್ ಮಾಡಿಕೊಳ್ಳುತ್ತಾರೆ.
ಬಳಿಕ ಶುಭ ಹಾಗೂ ಮಂಜು ಪಾವಗಡ ಗಾರ್ಡನ್ ಏರಿಯಾದಲ್ಲಿ ಕುಳಿತಾಗ, ಮಂಜು ವಾಟರ್ ಬಾಟಲ್ ಇಲ್ಲೇ ಇದೆ ಎನ್ನುತ್ತಾರೆ. ಆಗ ಶುಭ ಅದನ್ನು ಅರವಿಂದ್ ಬಳಸುತ್ತಿದ್ದಾರೆ, ಅವರ ಬಾಟಲ್ ದಿವ್ಯಾಗೆ ಕೊಟ್ಟಿದ್ದಾರೆ ಎಂದು ಉತ್ತರಿಸುತ್ತಾರೆ. ಆಗ ಮಂಜು ಹೆಂಗಿದಾಳೋ ಏನೋ ಪಾಪ ಎಂದು ಕಳವಳ ವ್ಯಕ್ತಪಡಿಸುತ್ತಾರೆ. ಐ ಥಿಂಕ್ ಅವಳು ಫೈನ್ ಆಗಿರುತ್ತಾಳೆ ರೆಸ್ಟ್ ಬೇಕಿರುತ್ತೆ ಅನ್ಸುತ್ತೆ. ಈ ಟೈಮಲ್ಲಿ ಕೇರ್, ಮೆಡಿಕೇಶನ್ಸ್ ಬೇಕಿರುತ್ತದೆ, ಬಿಗ್ ಬಾಸ್ ಮನೆಯ ಒಳಗಡೆ ಅದು ಕಷ್ಟ. ಬರ್ತಾ ಬರ್ತಾ ಮನೆ ಸೈಲೆಂಟ್, ಖಾಲಿ ಅನ್ನಿಸುತ್ತಿದೆ ಕಣೋ ಎಂದು ಶುಭ ಪ್ರತಿಕ್ರಿಯಿಸುತ್ತಾರೆ.