ವೀಕೆಂಡ್ ನಲ್ಲಿ ಬಿಗ್‍ಬಾಸ್ ಮನೆಗೆ ಸ್ಪೆಷಲ್ ಅಕ್ಕಿ ಬಳಸಿ ಚಿಕನ್ ಮತ್ತು ಮಟನ್ ಬಿರಿಯಾನಿ ಮಾಡುವ ಟಾಸ್ಕ್ ನೀಡಿದ್ದಾರೆ. ವೈಷ್ಣವಿ ಮತ್ತು ಪ್ರಿಯಾಂಕಾ ಅಡುಗೆ ಮಾಡುತ್ತಿದ್ರೆ, ಅರವಿಂದ್, ದಿವ್ಯಾ ಉರುಡುಗ ಮತ್ತು ಶುಭಾ ಪೂಂಜಾ ಮಾತಾಡುತ್ತಾ ಸಮಯ ಕಳೆಯುತ್ತಿದ್ದರು. ಈ ವೇಳೆ ವಾಯು ಆಗಿರೋ ಹಾಗಿದೆ. ಬೆನ್ನು ಹಿಡಿದುಕೊಂಡಿದೆ. ಹಾಗಾಗಿ ಒಂದು ಲಟ್ಟಿಗೆ ತೆಗೆದುಕೊಂಡ್ರೆ ಸರಿ ಹೋಗುತ್ತೆ ಅಂದ್ರು. ಪಕ್ಕದಲ್ಲಿಯೇ ಕುಳಿತಿದ್ದ ಅರವಿಂದ್, ಲಟ್ಟಿಗೆ ತೆಗೆದು ನೆಟ್ಟಗೆ ಮಾಡುವ ಅಂದ್ರು.
Advertisement
ಇದಕ್ಕೂ ಮೊದಲು ಪ್ರಿಯಾಂಕಾ, ದಿವ್ಯಾ ಯು, ಅರವಿಂದ್ ಮತ್ತು ಶುಭಾ ಮಧ್ಯೆ ಲಟ್ಟಿಗೆ ಸರಿನಾ? ನೆಟ್ಟಿಕೆ ಸರಿಯಾ? ಅನ್ನೋ ವಿಷ್ಯ ಚರ್ಚೆ ಆಯ್ತು. ದಿವ್ಯಾ ಅದು ಲಟ್ಟಿಗೆ, ನೆಟ್ಟಿಗೆ ಅಲ್ಲ ಅಂತ ವಾದಿಸುತ್ತಿದ್ದರು. ಇತ್ತ ಭದ್ರಾವತಿ ಭಾಗದವರಾದ ಪ್ರಿಯಾಂಕಾ ಸಹ ದಿವ್ಯಾಗೆ ಸಾಥ್ ನೀಡಿದರು. ಅಲ್ಲಿಯೇ ಕುಳಿತಿದ್ದ ಶುಭಾ ಪೂಂಜಾ, ಕನ್ನಡ ಮತ್ತು ತುಳು ಭಾಷೆಯಲ್ಲಿಯೂ ಅದು ನೆಟ್ಟಿಕೆ. ಅದು ಹೇಗೆ ನಿಮ್ಮ ಊರಲ್ಲಿ ಲಟ್ಟಿಗೆ ಎಂದು ಪ್ರಶ್ನೆ ಮಾಡಿದರು.
Advertisement
Advertisement
ನಮ್ಮಲ್ಲಿ ಚಪಾತಿ ಲಟ್ಟಿಸೋದು ಲಟ್ಟಣಿಗೆ ಅಂತ ಕರೀತಿವಿ. ಅದು ನೆಟ್ಟಿಕೆ ಸರಿ ಎಂದು ಅರವಿಂದ್ ಹೇಳಿದ್ರು. ಆಗ ನೆಟ್ಟಗೆ ಅಂದ್ರೆ ನೇರ ಎಂದರ್ಥ. ನೆಟ್ಟಗಿರಿ ಅಂತ ಹೇಳ್ತಾರೆ ಅಲ್ವಾ ಎಂದು ದಿವ್ಯಾ ಮತ್ತು ಪ್ರಿಯಾಂಕ ಹೇಳಿದ್ರು.
Advertisement
ಕೊನೆಗೆ ವಾದ ಮುಂದುವರಿಸಲು ಇಷ್ಟಪಡದ ಅರವಿಂದ್, ದಿವ್ಯಾಗೆ ಲಟ್ಟಿಗೆ ತೆಗೆದು ನೆಟ್ಟಗೆ ಮಾಡುವ ಎಂದು ಮುಗುಳ್ನಕ್ಕರು. ದಿವ್ಯಾರನ್ನ ಮೇಲೆಕೆತ್ತಿ ಲಟ್ಟಿಗೆ ತೆಗೆದರು. ದಿವ್ಯಾ ಉರುಡುಗ, ನಿಧಿ ಸುಬ್ಬಯ್ಯ ಮತ್ತು ರಾಜೀವ್ ಜೊತೆಯಾಗಿ ಮಟನ್ ಬಿರಿಯಾನಿ ತಯಾರಿಸಿದರು. ಮತ್ತೊಂದು ತಂಡದ ಸದಸ್ಯರಾದ ವೈಷ್ಣವಿ, ಶುಭಾ ಪೂಂಜಾ ಮತ್ತು ದಿವ್ಯಾ ಸುರೇಶ್ ಚಿಕನ್ ಬಿರಿಯಾನಿ ತಯಾರಿಸಿದ್ರು.