ಮನೆ ಮಂದಿಗೆ ಇದು ಕೊನೆಯ ದಿನ. ದಿವ್ಯ ಯು ಅವರನ್ನ ಮನೆ ಮಂದಿ ಸಿಕ್ಕಾಪಟ್ಟೆ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಮಿಸ್ ಮಾಡಿಕೊಳ್ಳೋದಕ್ಕಿಂತ ಹೆಚ್ಚಾಗಿ ಆಕೆಯ ಆರೋಗ್ಯ ಬಗ್ಗೆ ಕಾಳಜಿ ಇತ್ತು. ಹೀಗಾಗಿ ಚಕ್ರವರ್ತಿ ಅವರು ಕೂಡ ಸ್ಪೆಷಲ್ ಆಗಿ ಬಿಗ್ಬಾಸ್ ಹತ್ರ ರಿಕ್ವೆಸ್ಟ್ ಮಾಡಿದ್ರು. ದಿವ್ಯಳ ವಾಯ್ಸ್ ನೋಟ್ ಕಳ್ಸಿ ಅಂತ. ಅದರಂತೆ ಮನೆಮಂದಿಯ ಕಡೆ ದಿನಗಳ ಎಲ್ಲಾ ಆಸೆಗಳನ್ನು ಬಿಗ್ಬಾಸ್ ಈಡೇರಿಸಿದ್ರು. ಇದನ್ನು ಕೂಡ ಈಡೇರಿಸಿಯೇ ಬಿಟ್ರು. ದಿವ್ಯಳಿಂದ ವಾಯ್ಸ್ ನೋಟ್ ಬಂದಿತ್ತು.
Advertisement
ಹಾಯ್ ಸರ್ಪೈಸ್ ಅಂತ ದಿವ್ಯ ಮಾತು ಶುರು ಮಾಡಿದ್ರು. ದಿವ್ಯಳ ವಾಯ್ಸ್ ಎಲ್ರಿಗೂ ಬೇಗ ಗೊತ್ತಾಗುತ್ತೆ. ಎಲ್ಲರು ಹೇಗಿದ್ದೀರಾ ಎಂದಾಕ್ಷಣ ಅರವಿಂದ್ ಕಣ್ಣು ಅರಳಿತು. ದಿವ್ಯ ಮಾತಾಡುತ್ತಾ ಎಲ್ಲರನ್ನು ವಿಚಾರಿಸಿಕೊಂಡ್ರು. ನೀವೆಷ್ಟು ಮಿಸ್ ಮಾಡಿಕೊಳ್ತಿರೋ ನಾನು ನಿಮ್ಮನ್ನೆಲ್ಲಾ ಅಷ್ಟೆ ಮಿಸ್ ಮಾಡಿಕೊಳ್ತೀನಿ ಶುಭಾ ಅಕ್ಕ ನಿನ್ನ ತುಂಬಾ ಮಿಸ್ ಮಾಡ್ಕೋಳ್ತೀನಿ. ನಾನಿಲ್ಲ ಅಂದಾಗ ನೀನು ಅತ್ತಿದ್ದು ನೋಡಿ ನಂಗು ಅಳು ಬಂತು, ಈಗ ಯಾರನ್ನ ಗೋಳೊಯ್ಕೋಳ್ತೀಯಾ, ವೈಶ್ ನೀನು ನಂಗೆ ಹುಷಾರಿಲ್ಲ ಅಂದಾಗ ಎಷ್ಟು ಚೆನ್ನಾಗ್ ನೋಡ್ಕೊಂಡೆ. ಪ್ರಶಾಂತ್ ಬ್ರೋ ಸೆಕೆಂಡ್ ಟೈಮ್ ಕ್ಯಾಪ್ಟನ್ ಆಗಿದ್ದೀರಾ, ಕಂಗ್ರಾಟ್ಸ್ ಹಾಗೇ ಕ್ಯಾಪ್ಟನ್ ಆದಾಗ ನಂಗೆ ಡೆಡಿಕೇಟ್ ಮಾಡಿದ್ದಕ್ಕೆ ಥ್ಯಾಂಕ್ಸ್ ಅಂದ್ರು. ಆಮೇಲೆ ಶಾಮ ನಾನ್ ಚೆನ್ನಾಗಿದ್ದೀನಿ ನಿನ್ ಸಾಂಗ್ ಇಷ್ಟ ಆಯ್ತು. ನೀನು ಮತ್ತು ರಘು ಪ್ರೇ ಮಾಡಿದ್ದು ಇಷ್ಟ ಆಯ್ತು. ಮಂಜ ಸಿಗೋ ನೀನು ಮಾಡ್ತೀನಿ. ಸ್ಟ್ರೆಚ್ಚರ್ ಸ್ಟ್ರೆಚ್ಚರ್ ಅಂತ ಹೇಳಿ ಅದ್ರಲ್ಲೆ ಕಳ್ಸಿದ್ದಿಯಾ ಅಂತ ರೇಗಿದ್ಲು.
Advertisement
Advertisement
ಅರವಿಂದ್ ನನ್ನು ಯಾವಾಗ ಮಾತಾಡಿಸ್ತಾಳೆ ಅಂತ ಕಾಯ್ತಿದ್ದ ಪ್ರೇಕ್ಷಕರಿಗೆ ಕಡೆಗೆ ಅರವಿಂದ್ ನನ್ನು ಮಾತಾಡಿಸಿದ್ರು ದಿವ್ಯ. ಹಾಯ್ ಅವಿ ಹೇಗಿದ್ದೀರಾ ಅಂದ ಆ ಧ್ವನಿಯಲ್ಲೇ ತುಂಬಾ ಮಿಸ್ ಮಾಡಿಕೊಂಡ ಭಾವ ಅಡಗಿತ್ತು. ನಿಮ್ ಬಗ್ಗೆ ಏನ್ ಹೇಳಿದ್ರು ಎಷ್ಟ್ ಹೇಳಿದ್ರು ಕಡಿಮೇನೆ, ಖುಷಿ ಬೇಜಾರ್ ಏನ್ ಆದ್ರೂ ನನ್ ಹತ್ರ ಹೇಳ್ಕೋಳ್ತಾ ಇದ್ರಿ. ನಂಗೊತ್ತು ನಾನ್ ಇಲ್ಲ ಅಂದ್ರೆ ಬೇಜಾರಾಗಿರ್ತೀರಾ. ಯಾವಾಗ್ಲೂ ನಗ್ತಾ ಇರಿ, ಗೇಮ್ ಚೆನ್ನಾಗ್ ಆಡಿ, ತುಂಬಾ ಮಿಸ್ ಮಾಡ್ಕೋಳ್ತಾ ಇದ್ದೀನಿ, ಆರಾಮಾಗಿ ಇದ್ದೀನಿ. ಉಡುಪಿ ಹೊಟೇಲ್ ಬಗ್ಗೆ ಥಿಂಕ್ ಮಾಡಿ, ಪ್ರೀತಿ ಇರ್ಲಿ. ಮಿಸ್ ಯು ಆಲ್, ಆದಷ್ಟು ಬೇಗ ಸಿಕ್ತೇನೆ ಅಂತ ಹೇಳಿ ಟಾಟಾ ಬಾಯ್ ಬಾಯ್ ಹೇಳಿದ್ರು. ಅರವಿಂದ್ ಕಣ್ಣಲ್ಲಿ ದಿವ್ಯ ವಾಯ್ಸ್ ಕೇಳಿ ನೋಡಿದ ಖುಷಿ ಕಾಣಿಸ್ತಾ ಇತ್ತು.
Advertisement
ಊಟಕ್ಕೆ ಕುಂತಾಗ ಪ್ರಶಾಂತ್ ಹತ್ತಿರ ನನ್ನನ್ನ ಲಾಸ್ಟ್ ಗೆ ತಗೊಂಡ್ಲು, ನಾನು ಕೂಡ ಅವ್ಳನ್ನ ಲಾಸ್ಟ್ ಗೆ ತಗೊಳೋದ್ ಅಲ್ವಾ ಅದ್ಕೆ ಲಾಸ್ಟ್ ನಲ್ಲೇ ತಗೊಂಡ್ಲು ಅಂತ ನಗ್ತಾ ನಗ್ತಾ ದಿವ್ಯಳ ಬುದ್ಧಿವಂತಿಕೆಯನ್ನ ಹೊಗಳಿದ್ರು. ಆಮೇಲೆ ಕಣ್ಮಣಿ ಹತ್ರಾನು ಥ್ಯಾಂಕ್ಸ್ ಹೇಳಿದ್ರು. ಇವತ್ತು ದಿವ್ಯ ಹಾಗೂ ಅರವಿಂದ್ ಮ್ಯಾಚಿಂಗ್ ಡ್ರೆಸ್ ಹಾಕೋಳೋದಕ್ಕೆ ಪ್ಯ್ಲಾನ್ ಮಾಡಿದ್ರು, ಆದ್ರೆ ದಿವ್ಯ ಇಲ್ಲದ ಕಾರಣ ಒಬ್ರೆ ಅದೇ ಡ್ರೆಸ್ ಹಾಕೊಂಡಿದ್ರು.