– ಅಕ್ಕನಿಂದ ವಧುವಿನ ಮೊಗದಲ್ಲಿ ಮಂದಹಾಸ
– ನವದಂಪತಿಗೆ ತಂದೆಯ ಆರ್ಶೀವಾದ
ಚೆನ್ನೈ: ತಂದೆ ಇಲ್ಲದ ನೋವಿನಲ್ಲಿದ್ದ ವಧುವಿನ ಮೊಗದಲ್ಲಿ ಮಂದಹಾಸ ಮೂಡುವಂತೆ ಅಕ್ಕ ಮಾಡಿದ ಪ್ಲಾನ್ ನೋಡಿ ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಧನರಾಗಿದ್ದ ತಂದೆಯ ಅನುಪಸ್ಥಿತಿ ಮದುವೆ ಮನೆಯಲ್ಲಿ ಎದ್ದು ಕಾಣುತ್ತಿತ್ತು. ಸಂಭ್ರಮದಲ್ಲಿಯೂ ವಧು ಸೇರದಂತೆ ಕುಟುಂಬಸ್ಥರು ದುಃಖದಲ್ಲಿದ್ದರು. ವಧುವಿನ ಅಕ್ಕ ಮಾಡಿದ ಪ್ಲಾನ್ ನಿಂದಾಗಿ ಮದುವೆ ಸಂಭ್ರಮದಿಂದ ನಡೆದಿದ್ದು, ಸಂತೋಷದಿಂದ ಕುಟುಂಬಸ್ಥರ ಕಣ್ಣಾಲಿಗಳು ತೇವಗೊಂಡಿದ್ದವು.
ತಮಿಳುನಾಡಿನ ಪುದುಕೊಟ್ಟಾಯಿಯಲ್ಲಿ ಈ ಮದುವೆ ನಡೆದಿದ್ದು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಲಕ್ಷ್ಮಿಪ್ರಭಾ ತಮ್ಮ ತಂದೆಯ ಪುತ್ಥಳಿಯನ್ನ ಸೋದರಿ ಭುವನೇಶ್ವರಿ ಮದುವೆಯಲ್ಲಿ ಕಾಣಿಕೆಯಾಗಿ ನೀಡಿದ್ದಾರೆ. ಲಕ್ಷ್ಮಿ ಪ್ರಭಾ ಮೂರ್ತಿಗಾಗಿ ಸುಮಾರು 6 ಲಕ್ಷ ರೂ. ಖರ್ಚು ಮಾಡಿದ್ದಾರೆ.
ಮೂರ್ತಿಯ ಬೆಲೆ ಹೆಚ್ಚಿರಬಹುದು. ಆದ್ರೆ ಮದುವೆ ದಿನ ತಂಗಿ ಖುಷಿಯಾಗಿರೋದು ನನಗೆ ಮುಖ್ಯವಾಗಿತ್ತು. ಆಕೆಯ ಸಂತೋಷದಿಂದ ಹಣ ನನಗೆ ಮುಖ್ಯ ಅಲ್ಲ. ಮದುವೆ ದಿನ ತಂದೆ ನಮ್ಮ ಜೊತೆಯಲ್ಲಿದ್ದ ವಿಶೇಷ ಅನುಭವ ನಮಗೆ ಸಿಕ್ತು. ನಂತರ ನವದಂಪತಿ ತಂದೆಯ ಆರ್ಶೀವಾದ ಸಹ ಪಡೆದುಕೊಂಡರು ಎಂದು ಲಕ್ಷ್ಮಿಪ್ರಭಾ ಹೇಳುತ್ತಾರೆ.