ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು,
ಭಾದ್ರಪದಮಾಸ, ಶುಕ್ಲ ಪಕ್ಷ, ದಶಮಿ/ಏಕಾದಶಿ,
ಶುಕ್ರವಾರ, ಮೂಲ ನಕ್ಷತ್ರ/ಪೂರ್ವಾಷಾಡ ನಕ್ಷತ್ರ.
ರಾಹುಕಾಲ: 10:52 ರಿಂದ 12:25
ಗುಳಿಕಕಾಲ: 7:46 ರಿಂದ 9:19
ಯಮಗಂಡಕಾಲ: 03:31 ರಿಂದ 05:54
ಮೇಷ: ಭೂಮಿ ಮತ್ತು ವಾಹನ ಖರೀದಿ ಸಾಧ್ಯತೆ, ನಷ್ಟ ಮತ್ತು ಅನಗತ್ಯ ಕಿರಿಕಿರಿ, ತಾಯಿಂದ ಅನುಕೂಲ.
Advertisement
ವೃಷಭ: ಆಕಸ್ಮಿಕ ಧನಲಾಭ, ಸಹೋದರನೊಂದಿಗೆ ಕಿರಿಕಿರಿ, ಮನಸ್ತಾಪ, ಹತ್ತಿರದ ಪ್ರಯಾಣ ಮತ್ತು ಪತ್ರ ವ್ಯವಹಾರ, ಗೃಹ ಬದಲಾವಣೆಯಿಂದ ತೊಂದರೆ.
Advertisement
ಮಿಥುನ: ಸಹದ್ಯೋಗಿಗಳೊಂದಿಗೆ ಕಿರಿಕಿರಿ, ಸಂಗಾತಿಯಿಂದ ಸ್ನೇಹಿತರಿಂದ ಲಾಭ, ಆಧ್ಯಾತ್ಮದ ಬಗ್ಗೆ ಒಲವು.
Advertisement
ಕಟಕ: ಶತ್ರು ಕಾಟಗಳು, ಅನಾರೋಗ್ಯ ಸಮಸ್ಯೆಗಳು, ಸಾಲದ ಸುಳಿಗೆ ಸಿಲುಕುವಿರಿ.
Advertisement
ಸಿಂಹ: ಮಕ್ಕಳಿಗಾಗಿ ಅಧಿಕ ಖರ್ಚು, ಧಾರ್ಮಿಕ ಕ್ಷೇತ್ರಗಳ ದರ್ಶನ ಭಾಗ್ಯ, ಆಕಸ್ಮಿಕ ತೊಂದರೆಗಳು.
ಕನ್ಯಾ: ಸ್ಥಿರಾಸ್ತಿ ಮತ್ತು ವಾಹನ ಲಾಭ, ಅಧ್ಯಾತ್ಮದ ಕಡೆ ಹೆಚ್ಚಿನ ಒಲವು, ಸಹೋದರರಿಂದ ಧನಾಗಮನ.
ತುಲಾ: ಕೆಲಸ ಕಾರ್ಯಗಳಲ್ಲಿ ಯಶಸ್ಸು, ಮಾನ ಅಪಮಾನಗಳಿಗೆ ಗುರಿಯಾಗುವಿರಿ, ಸಾಲದ ಚಿಂತೆ.
ವೃಶ್ಚಿಕ: ಅಧಿಕ ತಿರುಗಾಟ ಮತ್ತು ಅನುಕೂಲ, ಆಕಸ್ಮಿಕವಾಗಿ ನಷ್ಟ, ಮಕ್ಕಳ ನಡವಳಿಕೆಯಿಂದ ಬೇಸರ.
ಧನಸ್ಸು: ವಾಹನ ಅಪಘಾತ, ನೀರು ಇರುವ ಸ್ಥಳದಲ್ಲಿ ಎಚ್ಚರಿಕೆ, ಕೆಲಸ ಕಾರ್ಯಗಳಲ್ಲಿ ವಿಘ್ನ, ಸ್ಥಿರಾಸ್ತಿ ವಿಚಾರವಾಗಿ ಕೋರ್ಟ್ ಮೆಟ್ಟಿಲೇರುವಿರಿ.
ಮಕರ: ಅಧಿಕ ಖರ್ಚು, ಆತ್ಮೀಯರಿಂದ,ಸಹೋದರನಿಂದ ಮೋಸ, ಸ್ವಯಂಕೃತ ಅಪರಾಧಗಳಿಂದ ದುಂದುವೆಚ್ಚ.
ಕುಂಭ: ಕುಟುಂಬದಲ್ಲಿ ವಾಗ್ವಾದಗಳು, ಕೆಲಸ ಕಾರ್ಯಗಳಲ್ಲಿ ಕಿರಿಕಿರಿ, ಕಾರ್ಮಿಕರು ದೊರಕುವ ಸಾಧ್ಯತೆ.
ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಕಿರಿಕಿರಿ, ವಸ್ತ್ರಾಭರಣ, ಫೈನಾನ್ಸ್ ಕ್ಷೇತ್ರದಲ್ಲಿ ಅನುಕೂಲ.