ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯನ,
ಹೇಮಂತ ಋತು, ಪುಷ್ಯ ಮಾಸ,
ಕೃಷ್ಣಪಕ್ಷ, ತಿಥಿ: ಏಕಾದಶಿ
ವಾರ: ಭಾನುವಾರ, ನಕ್ಷತ್ರ : ಜೇಷ್ಠ,
Advertisement
ರಾಹುಕಾಲ: 5.00 ರಿಂದ 6.27
ಗುಳಿಕಕಾಲ: 3.32 ರಿಂದ 5.00
ಯಮಗಂಡಕಾಲ: 12.37 ರಿಂದ 2.05
Advertisement
ಮೇಷ: ಮನೆ ವಾತಾವರಣದಲ್ಲಿ ಅಶಾಂತಿ, ಮನಸ್ಸಿನಲ್ಲಿ ನಾನಾ ಆಲೋಚನೆ, ಮಾನಸಿಕ ವ್ಯಥೆ, ಮುಂಗೋಪ ಹೆಚ್ಚಾಗುವುದು, ಕೆಲಸ ಕಾರ್ಯಗಳಲ್ಲಿ ವಿಳಂಬ, ಆತುರ ನಿರ್ಧಾರದಿಂದ ಸಂಕಷ್ಟ, ಯೋಚಿಸಿ ಕೆಲಸದಲ್ಲಿ ಮುನ್ನಡೆಯುವುದು ಉತ್ತಮ.
Advertisement
ವೃಷಭ: ಹಣ ಬಂದರೂ ಉಳಿಯುವುದಿಲ್ಲ, ಅಧಿಕ ಖರ್ಚು, ಆತ್ಮೀಯರಲ್ಲಿ ವೈಮನಸ್ಸು, ಅನ್ಯರೊಂದಿಗೆ ವಾದ-ವಿವಾದ, ಕುಟುಂಬದಲ್ಲಿ ಕಲಹ ಸಾಧ್ಯತೆ, ಮಾತಿನ ಮೇಲೆ ಹಿಡಿತ ಅಗತ್ಯ, ಕಷ್ಟಗಳು ಬಂದರೂ ಎದುರಿಸುವಿರಿ.
Advertisement
ಮಿಥುನ: ಉನ್ನತ ವಿದ್ಯಾಭ್ಯಾಸದ ಯೋಗ, ಮಕ್ಕಳಿಗೆ ಓದಿನಲ್ಲಿ ಆಸಕ್ತಿ, ಸ್ನೇಹಿತರಿಂದ ಖರ್ಚು, ಅಂದುಕೊಂಡಿದ್ದನ್ನು ಸಾಧಿಸುತ್ತೀರಿ, ಇಷ್ಟಾರ್ಥಗಳು ಸಿದ್ಧಿಯಾಗುವುದು, ಅಪಘಾತವಾಗುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರ.
ಕಟಕ: ಅಧಿಕವಾದ ಶೀತಬಾಧೆ, ಆರೋಗ್ಯಕ್ಕಾಗಿ ಹಣವ್ಯಯ, ಷೇರು ವ್ಯವಹಾರಗಳಲ್ಲಿ ನಷ್ಟ, ಹಣಕಾಸು ವಿಚಾರವಾಗಿ ಎಚ್ಚರ, ಬಂಡವಾಳ ಹೂಡಿಕೆ ಬೇಡ, ನೆಮ್ಮದಿಗೆ ಭಂಗ, ಮನಸ್ಸಿನಲ್ಲಿ ಆತಂಕ
ಸಿಂಹ: ಹಣಕಾಸು ಸಮಸ್ಯೆ, ನೆಮ್ಮದಿ ಬಯಸುವಿರಿ, ಇಷ್ಟಾರ್ಥ ಸಿದ್ದಿಗಾಗಿ ತಿರುಗಾಟ, ಮನಸ್ಸಿನಲ್ಲಿ ಅಲ್ಪ ಆತಂಕ, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ಅಧಿಕವಾದ ಖರ್ಚು ಮಾಡುವಿರಿ, ಕುಟುಂಬದಲ್ಲಿ ಅಧಿಕವಾದ ಕೋಪ, ವಿವಾದಗಳಿಂದ ದೂರವಿರಿ.
ಕನ್ಯಾ: ದಾಯಾದಿಗಳೊಂದಿಗೆ ವೈಮನಸ್ಸು, ಬಂಧುಗಳಿಂದ ನಿಂದನೆ, ವ್ಯವಹಾರದಲ್ಲಿ ನಿಧಾನಗತಿ, ವ್ಯಾಪಾರದಲ್ಲಿ ನಷ್ಟ, ಹಣಕಾಸು ವಿಚಾರದಲ್ಲಿ ತಗಾದೆ, ದಂಡ ಕಟ್ಟುವ ಪ್ರಸಂಗ, ರಿಯಲ್ ಎಸ್ಟೇಟ್‍ನವರಿಗೆ ಲಾಭ.
ತುಲಾ: ಹಣಕಾಸು ವಿಚಾರದಲ್ಲಿ ಯೋಜನೆ, ವ್ಯವಹಾರ ಆರಂಭಕ್ಕೆ ಯೋಚನೆ, ಮಾನಸಿಕವಾಗಿ ವೇದನೆ ಪಡುವಿರಿ, ಮನಸ್ಸಿನಲ್ಲಿ ಭಯ ಆತಂಕ, ಗೊಂದಲಮಯ ವಾತಾವರಣ, ಅತಿಯಾದ ದುಃಖ ಕಾಡುವುದು, ಹಿರಿಯರಿಂದ ಉತ್ತಮ ಸಲಹೆ.
ವೃಶ್ಚಿಕ: ನಾನಾ ವಿಚಾರಗಳ ಬಗ್ಗೆ ಚರ್ಚೆ, ಹಣಕಾಸು ನಷ್ಟ, ದೇಹದಲ್ಲಿ ಆಲಸ್ಯ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಸ್ನೇಹಿತರೊಂದಿಗೆ ಕಲಹ, ಶತ್ರುತ್ವ ಹೆಚ್ಚಾಗುವುದು, ಷೇರು ವ್ಯವಹಾರದಲ್ಲಿ ಎಚ್ಚರಿಕೆ.
ಧನಸ್ಸು: ಯತ್ನ ಕಾರ್ಯದಲ್ಲಿ ಯಶಸ್ಸು, ಪರಿಶ್ರಮಕ್ಕೆ ತಕ್ಕ ಪ್ರತಿಫಲ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಹಣಕಾಸು ಆಹಾರ ದಾನ ಸಾಧ್ಯತೆ, ಅಪರೂಪದ ವ್ಯಕ್ತಿಯನ್ನು ಭೇಟಿಯಾಗುವಿರಿ, ನೆಮ್ಮದಿ ಜೀವನಕ್ಕೆ ಮನಸ್ಸು.
ಮಕರ: ದೇವತಾ ಕಾರ್ಯಗಳಲ್ಲಿ ಭಾಗಿ, ಮನೋವ್ಯಥೆ, ಶ್ರಮಕ್ಕೆ ಫಲ, ಆರೋಗ್ಯದಲ್ಲಿ ಚೇತರಿಕೆ, ವಿರೋಧಿಗಳಿಂದ ತೊಂದರೆ, ರೋಗಬಾಧೆ, ರಿಯಲ್ ಎಸ್ಟೇಟ್‍ನವರಿಗೆ ಲಾಭ.
ಕುಂಭ: ಅನಿರೀಕ್ಷಿತ ದ್ರವ್ಯಲಾಭ, ಕುಟುಂಬದಲ್ಲಿ ಅನರ್ಥ, ಯತ್ನ ಕಾರ್ಯ ಅನುಕೂಲ, ಋಣಭಾದೆ, ದುಷ್ಟರಿಂದ ದೂರವಿರಿ, ಚಂಚಲ ಮನಸ್ಸು, ಅಧಿಕ ಕೋಪ, ಅನ್ಯ ಜನರಲ್ಲಿ ದ್ವೇಷ.
ಮೀನ: ಹಿತಶತ್ರುಗಳಿಂದ ತೊಂದರೆ, ಪುಣ್ಯಕ್ಷೇತ್ರ ದರ್ಶನ, ಬಾಕಿ ವಸೂಲಿ, ಸುಖ ಭೋಜನ, ಧರ್ಮಕಾರ್ಯದಲ್ಲಿ ಆಸಕ್ತಿ, ಕಾರ್ಯ ಸಾಧನೆಗಾಗಿ ತಿರುಗಾಟ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಕೃಷಿಯಲ್ಲಿ ಲಾಭ.