ಪಂಚಾಂಗ
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ಪೌರ್ಣಿಮೆ,
ಶುಕ್ರವಾರ, ಅನೂರಾಧ ನಕ್ಷತ್ರ
ಮಧ್ಯಾಹ್ನ 4:42 ನಂತರ ಜ್ಯೇಷ್ಠ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 10:46 ರಿಂದ 12:22
ಗುಳಿಕಕಾಲ: ಬೆಳಗ್ಗೆ 7:34 ರಿಂದ 9:10
ಯಮಗಂಡಕಾಲ: ಮಧ್ಯಾಹ್ನ 3:34 ರಿಂದ 5:10
Advertisement
ಮೇಷ: ಸ್ಥಿರಾಸ್ತಿ-ವಾಹನದಿಂದ ಲಾಭ, ಮಾತೃವಿನಿಂದ ಅನುಕೂಲ, ಉದ್ಯೋಗದಲ್ಲಿ ಒತ್ತಡ, ಕಿರಿಕಿರಿ, ಮಿತ್ರರಿಂದ ಸಮಸ್ಯೆ, ಕುಟುಂಬಸ್ಥರಿಂದ ತೊಂದರೆ, ಲಾಭ ಪ್ರಮಾಣ ಕುಂಠಿತ.
Advertisement
ವೃಷಭ: ಬಂಧುಗಳಿಂದ ಕಿರಿಕಿರಿ, ಸಂಗಾತಿಯಿಂದ ನೋವು, ಗೌರವಕ್ಕೆ ಧಕ್ಕೆ, ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವಿರಿ, ಪ್ರಯಾಣದಲ್ಲಿ ಆಲಸ್ಯ, ಕೆಲಸದಲ್ಲಿ ನಿಧಾನ ಬೆಳವಣಿಗೆ.
Advertisement
ಮಿಥುನ: ಅನಿರೀಕ್ಷಿತ ಆರ್ಥಿಕ ಸಂಕಷ್ಟ, ಸಾಲ ಮಾಡುವ ಪರಿಸ್ಥಿತಿ, ಕುಟುಂಬಸ್ಥರೇ ಶತ್ರುಗಳಾಗುವರು, ವಾದ-ವಿವಾದ ಹೆಚ್ಚಾಗುವುದು, ಗ್ಯಾಸ್ಟ್ರಿಕ್, ಆರೋಗ್ಯದಲ್ಲಿ ವ್ಯತ್ಯಾಸ.
ಕಟಕ: ಸ್ವಯಂಕೃತ ಅಪರಾಧದಿಂದ ಅಶಾಂತಿ, ಅವಮಾನವಾಗುವ ಸಾಧ್ಯತೆ, ದುಶ್ಚಟಗಳಿಂದ ತೊಂದರೆ, ವಿಕೃತ ಆಸೆಗಳಿಗೆ ಮನಸ್ಸು ಪ್ರಚೋದನೆ, ಮಕ್ಕಳ ವಿಚಾರದಲ್ಲಿ ಕಲಹ, ದಾಂಪತ್ಯದಲ್ಲಿ ವೈಮನಸ್ಸು.
ಸಿಂಹ: ಸ್ಥಿರಾಸ್ತಿ-ವಾಹನದಿಂದ ನಷ್ಟ, ತಾಯಿಯನ್ನು ದೂರ ಮಾಡಿಕೊಳ್ಳುವಿರಿ, ದೀರ್ಘಕಾಲದ ರೋಗ ಬಾಧೆ, ಚರ್ಮ ಸಮಸ್ಯೆ, ಶರೀರದಲ್ಲಿ ನೋವು, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.
ಕನ್ಯಾ: ಮಕ್ಕಳಿಂದ ಲಾಭ, ಉದ್ಯೋಗದಲ್ಲಿ ಬಡ್ತಿ, ದಾಂಪತ್ಯದಲ್ಲಿ ನೆಮ್ಮದಿ, ಸ್ಥಿರಾಸ್ತಿ ತಗಾದೆ ನಿವಾರಣೆ, ಕೋರ್ಟ್ ಕೇಸ್ಗಳಲ್ಲಿ ಜಯ, ಮಿತ್ರರು-ಕುಂಬಸ್ಥರು ಶತ್ರುವಾಗುವರು.
ತುಲಾ: ಉದ್ಯೋಗ ಸ್ಥಳದಲ್ಲಿ ಒತ್ತಡ, ಮಿತ್ರರು-ಸಂಗಾತಿಯೊಂದಿಗೆ ವಾಗ್ವಾದ, ಸ್ಥಿರಾಸ್ತಿ-ವಾಹನದಿಂದ ಧನಾಗಮನ, ಕಾರ್ಮಿಕರಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ಲಾಭ.
ವೃಶ್ಚಿಕ: ಪ್ರಯಾಣದಲ್ಲಿ ಅಡೆತಡೆ-ನಿರಾಸಕ್ತಿ, ನರದೌರ್ಬಲ್ಯ, ಹೊಟ್ಟೆ ನೋವು, ಆರೊಗ್ಯದಲ್ಲಿ ವ್ಯತ್ಯಾಸ, ಮನಸ್ಸಿಗೆ ನಿರಾಸೆ-ಜಿಗುಪ್ಸೆ, ಆಲಸ್ಯ ಮನೋಭಾವ, ಒತ್ತಡ ಜೀವನ, ಆಸ್ತಿ ವಿಚಾರದಲ್ಲಿ ತಗಾದೆ.
ಧನಸ್ಸು: ಆಕಸ್ಮಿಕ ಧನ ನಷ್ಟ, ನಂಬಿಕಸ್ಥರಿಂದ ಸಂಕಷ್ಟಕ್ಕೆ ಸಿಲುಕುವಿರಿ, ಉಸಿರಾಟದ ಸಮಸ್ಯೆ, ಮನಸ್ಸಿನಲ್ಲಿ ಆತಂಕ, ವ್ಯವಹಾರಗಳಲ್ಲಿ ಎಚ್ಚರ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಸಂಗಾತಿಯಿಂದ ಅನುಕೂಲ, ಸ್ನೇಹಿತರಿಂದ ಉದ್ಯೋಗಾವಕಾಶ, ಆರ್ಥಿಕ ಸಹಾಯ ಲಭಿಸುವುದು, ಉತ್ತಮ ಗೌರವ, ಕೀರ್ತಿ ಪ್ರಾಪ್ತಿ, ದೀರ್ಘಕಾಲದ ಆಸೆ ಈಡೇರುವುದು.
ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಲಾಭ-ನಷ್ಟ ಸಮ ಪ್ರಮಾಣ, ಶೀತ, ಕಫ, ರಕ್ತ ದೋಷ, ಅಜೀರ್ಣ ಸಮಸ್ಯೆ, ಅನಾರೋಗ್ಯ, ಬಾಡಿಗೆದಾರರಿಂದ ಕಿರಿಕಿರಿ, ಕಾರ್ಮಿಕರಿಂದ ನಷ್ಟ.
ಮೀನ: ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಂದ ದೂರಾಗುವ ಆಲೋಚನೆ, ದುರ್ಘಟನೆಗಳಿಂದ ದೂರ ಪ್ರಯಾಣ, ತಂದೆಯಿಂದ ಅದೃಷ್ಟ, ದೇವತಾ ಕಾರ್ಯದಲ್ಲಿ ಭಾಗಿ. ಪ್ರಾಮಾಣಿಕತೆಗೆ ಪ್ರಾಮುಖ್ಯತೆ ನೀಡುವಿರಿ.