ಪಂಚಾಂಗ
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಸೋಮವಾರ, ಹಸ್ತ ನಕ್ಷತ್ರ,
Advertisement
ರಾಹುಕಾಲ: ಬೆಳಗ್ಗೆ 7:32 ರಿಂದ 9:08
ಗುಳಿಕಕಾಲ: ಮಧ್ಯಾಹ್ನ 1:56 ರಿಂದ 3:32
ಯಮಗಂಡಕಾಲ: ಬೆಳಗ್ಗೆ 10:44 ರಿಂದ 12:20
Advertisement
ಮೇಷ: ವಿಪರೀತ ಖರ್ಚು, ಭವಿಷ್ಯದ ಬಗ್ಗೆ ಆಲೋಚನೆ, ಮಾತಿನ ಮೇಲೆ ಹಿಡಿತ ಅಗತ್ಯ, ಕುಟುಂಬಸ್ಥರಿಂದ ಹಿತವಚನ, ಆತುರ ನಿರ್ಧಾರದಿಂದ ಸಂಕಷ್ಟ, ವ್ಯವಹಾರ ಒಪ್ಪಂದ ಮುಂದೂಡುವುದು ಉತ್ತಮ.
Advertisement
ವೃಷಭ: ಅನೇಕ ವಿಚಾರಗಳ ಬಗ್ಗೆ ಚರ್ಚೆ, ಹಣಕಾಸು ನಷ್ಟ, ಆಲಸ್ಯ ಮನೋಭಾವ, ಮಾನಸಿಕ ವೇದನೆ, ಗೊಂದಲದ ವಾತಾವರಣ.
Advertisement
ಮಿಥುನ: ಅನ್ಯ ಜನರಲ್ಲಿ ಪ್ರೀತಿ, ನಂಬಿಕಸ್ಥರಿಂದ ದ್ರೋಹ, ವಾಹನ ರಿಪೇರಿ, ಮನಸ್ಸಿನಲ್ಲಿ ಭಯ, ಬಂಧುಗಳಿಂದ ಕಿರಿಕಿರಿ, ಹಣಕಾಸು ಪರಿಸ್ಥಿತಿ ಚೇತರಿಕೆ.
ಕಟಕ: ಮಿತ್ರರಲ್ಲಿ ಬಾಂಧವ್ಯ ವೃದ್ಧಿ, ಅಲ್ಪ ಕಾರ್ಯ ಸಿದ್ಧಿ, ಶೀತ ಸಂಬಂಧಿತ ರೋಗ, ತಾಳ್ಮೆಯಿಂದ ಕಾರ್ಯ ಯಶಸ್ಸು, ಕೃಷಿಕರಿಗೆ ಅಲ್ಪ ಲಾಭ.
ಸಿಂಹ: ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ, ಮಾನಸಿಕ ನೆಮ್ಮದಿ ಲಭಿಸುವುದು, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಹಣಕಾಸು ಸಮಸ್ಯೆ, ಪಿತ್ರಾರ್ಜಿತ ಆಸ್ತಿಗಾಗಿ ತಕರಾರು,
ಕನ್ಯಾ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಮಾತೃವಿನಿಂದ ಪ್ರಶಂಸೆ, ಆತ್ಮೀಯರೊಂದಿಗೆ ಪ್ರೀತಿ ವಿಶ್ವಾಸ, ಐಷಾರಾಮಿ ಜೀವನಕ್ಕೆ ಮನಸ್ಸು, ನಿಮ್ಮ ಕಷ್ಟಕ್ಕೆ ಆತ್ಮೀಯರಿಂದ ನೆರವು.
ತುಲಾ: ಕೆಲಸ ಕಾರ್ಯಗಳಲ್ಲಿ ವಿಘ್ನ, ಆಸ್ತಿ ವಿಚಾರದಲ್ಲಿ ಕಲಹ, ಹಿತ ಶತ್ರುಗಳ ಬಾಧೆ, ನಂಬಿಕಸ್ಥರಿಂದ ಮೋಸ ಹೋಗುವಿರಿ, ಅತೀ ಆತ್ಮವಿಶ್ವಾಸದಿಂದ ಸಂಕಷ್ಟ, ತಾಳ್ಮೆಯಿಂದ ಕಾರ್ಯ ಸಿದ್ಧಿ.
ವೃಶ್ಚಿಕ: ಹೊಸ ಸಮಸ್ಯೆಗಳು ಉದ್ಭವ, ತಾಳ್ಮೆ ಕಳೆದುಕೊಂಡರೆ ಅಶಾಂತಿ, ಮೌನವಾಗಿರುವುದು ಉತ್ತಮ, ಶತ್ರುಗಳ ಕುತಂತ್ರಕ್ಕೆ ಸಿಲುಕುವಿರಿ, ಅಧಿಕ ಚಿಂತೆಯಿಂದ ನಿದ್ರಾಭಂಗ, ದಿನಾಂತ್ಯದಲ್ಲಿ ನೆಮ್ಮದಿ ಪ್ರಾಪ್ತಿ.
ಧನಸ್ಸು: ಪರರಿಂದ ಸಹಾಯ, ಕೆಲಸ ಕಾರ್ಯಗಳಲ್ಲಿ ವಿಳಂಬ, ಖರ್ಚು ವೆಚ್ಚಗಳ ಬಗ್ಗೆ ನಿಗಾವಹಿಸಿ, ಹಣಕಾಸು ಪರಿಸ್ಥಿತಿ ಬಿಕ್ಕಟ್ಟು, ವಿದ್ಯಾರ್ಥಿಗಳಿಗೆ ಅನುಕೂಲ.
ಮಕರ: ಕುಟುಂಬಸ್ಥರೊಂದಿಗೆ ಕಾಲ ಕಳೆಯುವಿರಿ, ಅಪರಿಚಿತರಿಂದ ದೂರವಿರಿ, ತಂದೆ-ತಾಯಿಯೊಂದಿಗೆ ಪ್ರೀತಿ, ಮಾನಸಿಕ ನೆಮ್ಮದಿ, ಅನ್ಯರಿಗಾಗಿ ಖರ್ಚು ಮಾಡುವಿರಿ, ಕಷ್ಟ ಕಾಲಕ್ಕೆ ಸಹಾಯ ಲಭಿಸುವುದಿಲ್ಲ.
ಕುಂಭ: ತಾಳ್ಮೆ ಕಳೆದುಕೊಳ್ಳುವಿರಿ, ಚಂಚಲ ಸ್ವಭಾವ, ಹೇಳಿಕೆ ಮಾತು ಕೇಳಿ ಸಂಕಷ್ಟಕ್ಕೆ ಸಿಲುಕುವಿರಿ, ನೆಮ್ಮದಿ ಇಲ್ಲದ ದಿನ ನಿಮ್ಮದಾಗುವುದು, ಆರೋಗ್ಯದ ಬಗ್ಗೆ ಕಾಳಜಿವಹಿಸಿ.
ಮೀನ: ವಿದ್ಯಾರ್ಥಿಗಳಿಗೆ ಪ್ರಗತಿ, ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದಲ್ಲಿ ಪ್ರೀತಿ, ಸುಖ ಭೋಜನ ಪ್ರಾಪ್ತಿ, ಕೆಲಸದಲ್ಲಿ ಅಲ್ಪ ಹಿನ್ನಡೆ, ಸೈಟ್-ವಾಹನ ಖರೀದಿಗೆ ಆಲೋಚನೆ,