ಪಂಚಾಂಗ: ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ, ಗ್ರೀಷ್ಮ ಋತು,
ಆಷಾಢ ಮಾಸ, ಶುಕ್ಲ ಪಕ್ಷ,
ಸಪ್ತಮಿ ತಿಥಿ, ಶನಿವಾರ,
ಪೂರ್ವ ಫಾಲ್ಗುಣಿ ನಕ್ಷತ್ರ
ಬೆಳಗ್ಗೆ 10:11 ನಂತರ ಉತ್ತರ ಫಾಲ್ಗುಣಿ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:14 ರಿಂದ 10:50
ಗುಳಿಕಕಾಲ: ಬೆಳಗ್ಗೆ 6:01 ರಿಂದ 7:38
ಯಮಗಂಡಕಾಲ: ಮಧ್ಯಾಹ್ನ 2:02ರಿಂದ 3:38
Advertisement
ಮೇಷ: ವಾಹನ-ಸ್ಥಿರಾಸ್ತಿಯಿಂದ ನಷ್ಟ, ಕೃಷಿ ಚಟುವಟಿಕೆಗಳಿಂದ ಸಮಸ್ಯೆ, ಅಧಿಕಾರಿ-ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಶತ್ರುಗಳ ನಾಶ, ಕೋರ್ಟ್ ಕೇಸ್‍ಗಳಲ್ಲಿ ಜಯದ ಸೂಚನೆ.
Advertisement
ವೃಷಭ: ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ಕಿರಿಯ ಸಹೋದರಿಯಿಂದ ಅನುಕೂಲ, ಉನ್ನತ ಅಧಿಕಾರಿಗಳ ಭೇಟಿ, ರಾಜಕೀಯ ವ್ಯಕ್ತಿಗಳೊಂದಿಗೆ ಮಾತುಕತೆ, ಶುಭ ಫಲ ಯೋಗ ಪ್ರಾಪ್ತಿ.
Advertisement
ಮಿಥುನ: ಉದ್ಯೋಗ-ಸ್ಥಳ ಬದಲಾವಣೆ, ಗೃಹ ಬದಲಾವಣೆಗೆ ಆಲೋಚನೆ, ನಾನಾ ರೀತಿ ಚಿಂತೆ, ಅಧಿಕಾರಯುತ ಮಾತುಗಳನ್ನಾಡುವಿರಿ, ಕುಟುಂಬಸ್ಥರಿಗೆ ನೆರವು, ಆಕಸ್ಮಿಕ ಧನಾಗಮನ.
Advertisement
ಕಟಕ: ಸ್ವಂತ ಉದ್ಯಮ ವ್ಯಾಪಾರದಲ್ಲಿ ಲಾಭ, ವ್ಯವಹಾರದಲ್ಲಿ ಧನಾಗಮನ, ಅನಗತ್ಯ ತಿರುಗಾಟ, ಮೊಂಡು ಧೈರ್ಯ, ಶೌರ್ಯ ಪ್ರದರ್ಶನ, ದಿನಾಂತ್ಯದಲ್ಲಿ ಅಶಾಂತಿ ವಾತಾವರಣ.
ಸಿಂಹ: ಆದಾಯ-ನಷ್ಟ ಸಮ ಪ್ರಮಾಣ, ಕೀರ್ತಿ, ಗೌರವ ಸಂಪಾದನೆ, ಸಾಧಿಸುವ ಹಂಬಲ, ಕೆಲಸ ಕಾರ್ಯದಲ್ಲಿ ಅಧಿಕ ಒತ್ತಡ, ಒತ್ತಡದಿಂದ ನಿದ್ರಾಭಂಗ, ನಷ್ಟ ಪ್ರಮಾಣ ಅಧಿಕವಾಗುವುದು.
ಕನ್ಯಾ: ಸ್ನೇಹಿತರಿಂದ ಒತ್ತಡಕ್ಕೆ ಸಿಲುಕುವಿರಿ, ಉದ್ಯೋಗದಲ್ಲಿ ಒತ್ತಡ, ಯೋಚನೆಯಿಂದ ನಿದ್ರಾಭಂಗ, ನಷ್ಟ ಪ್ರಮಾಣ ಅಧಿಕ, ರಾಜಕೀಯ ವ್ಯಕ್ತಿಗಳಿಂದ ಕಿರಿಕಿರಿ, ಅಹಂಭಾವದ ನಡವಳಿಕೆಯಿಂದ ಸಂಕಷ್ಟ.
ತುಲಾ: ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ಆರ್ಥಿಕ ಸಹಾಯ ಲಭಿಸುವುದಿಲ್ಲ, ಲಾಭ ಪ್ರಮಾಣ ಕುಂಠಿತ, ಅದೃಷ್ಟ ವಂಚಿತರೆಂಬ ಭಾವನೆ ಕಾಡುವುದು.
ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ನಿಮ್ಮ ಕೆಲಸಕ್ಕೆ ಪ್ರಶಂಸೆ ಲಭಿಸುವುದು, ಪ್ರಯಾಣದಿಂದ ನೆಮ್ಮದಿ, ದೇವರ ಆರಾಧನೆಯಿಂದ ಅನುಕೂಲ, ಮಿತ್ರರಿಂದ ಅದೃಷ್ಟ ಒಲಿಯುವುದು, ಗೌರವ, ಕೀರ್ತಿ ಪ್ರತಿಷ್ಠೆ ಲಭಿಸುವುದು.
ಧನಸ್ಸು: ಅನಿರೀಕ್ಷಿತ ಗಣ್ಯರ ಭೇಟಿ, ಪೂರ್ವಿಕರ ಕಾರ್ಯಗಳಲ್ಲಿ ತೊಡಗುವಿರಿ, ಪ್ರಯಾಣದಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ, ಉದ್ಯೋಗ ಸಮಸ್ಯೆ ಹೆಚ್ಚಾಗುವುದು, ಮನಸ್ಸಿನಲ್ಲಿ ಆತಂಕ, ಆಕಸ್ಮಿಕ ತೊಂದರೆ ಎದುರಾಗುವುದು.
ಮಕರ: ಸಂಗಾತಿಯೊಂದಿಗೆ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ದಾಂಪತ್ಯದಲ್ಲಿ ಕಿರಿಕಿರಿ, ವಿಚ್ಛೇದನಕ್ಕಾಗಿ ಓಡಾಟ, ನೆಮ್ಮದಿಗೆ ಭಂಗ, ಜೀವನ ನಿರ್ವಹಣೆಗೆ ಪರಿಶ್ರಮ, ಮಾನಸಿಕ ಒತ್ತಡ.
ಕುಂಭ: ಆರೋಗ್ಯ ವಿಚಾರದಲ್ಲಿ ಆತಂಕ ಸೃಷ್ಠಿ, ಕಣ್ಣಿಗೆ ಪೆಟ್ಟಾಗುವ ಸಾಧ್ಯತೆ ಎಚ್ಚರ, ದ್ರವ ರೂಪದ ವಸ್ತುಗಳಿಂದ ತೊಂದರೆಯಾಗುವ ಸಾಧ್ಯತೆ, ಕೆಲಸದಲ್ಲಿ ಅಧಿಕವಾದ ಒತ್ತಡ, ತೆರಿಗೆ ಕಟ್ಟುವ ವಿಚಾರದಲ್ಲಿ ಸಮಸ್ಯೆ, ಸ್ನೇಹಿತರಿಂದ ಅನಾನುಕೂಲ.
ಮೀನ: ಪ್ರೇಮ ವಿಚಾರದಲ್ಲಿ ಸಮಸ್ಯೆ, ಶತ್ರುತ್ವ ಹೆಚ್ಚಾಗುವುದು, ಮಕ್ಕಳೊಂದಿಗೆ ವಾಗ್ವಾದ, ಹಠ-ಅಹಂಭಾವದ ನಡವಳಿಕೆಯಿಂದ ಅಶಾಂತಿ, ಸಾಲ ಬಾಧೆ, ಶತ್ರು ಕಾಟ, ನಷ್ಟ ಪ್ರಮಾಣ ಅಧಿಕ, ಭವಿಷ್ಯದ ಬಗ್ಗೆ ಆತಂಕ.