– ನಿನ್ನೆ ಒಂದೇ ದಿನ 89 ಸಾವಿರ ಕೇಸ್
– ಜಗತ್ತಿನ ಹಲವು ದೇಶಗಳಲ್ಲಿ ಮತ್ತೆ ಲಾಕ್‍ಡೌನ್
ನವದೆಹಲಿ: ದೇಶದಲ್ಲಿ ಕೊರೊನಾ ರುದ್ರತಾಂಡವ ಮುಂದುವರಿದಿದೆ. ದಿನದ ಸೋಂಕಿನ ಪಟ್ಟಿಯಲ್ಲಿ ಭಾರತ ವಿಶ್ವದಲ್ಲೇ ನಂಬರ್ ಒನ್ ಆಗುವಷ್ಟರ ಮಟ್ಟಿಗೆ ಹೆಮ್ಮಾರಿ ಆರ್ಭಟಿಸುತ್ತಿದೆ.
ಅಮೆರಿಕ, ಬ್ರೆಜಿಲ್ ದೇಶಗಳನ್ನು ಮೀರಿಸಿರುವ ಭಾರತ, ಇದೀಗ ನಂಬರ್ ಪಟ್ಟಕ್ಕೆ ಹೋಗಿ ಕುಳಿತಿದೆ. ನಿನ್ನೆ ದೇಶದಲ್ಲಿ ಬರೋಬ್ಬರಿ 89,129 ಪ್ರಕರಣಗಳು ನಮೂದಾದ್ರೆ, ಅಮೆರಿಕ ಮತ್ತು ಬ್ರೆಜಿಲ್‍ನಲ್ಲಿ ತಲಾ 69 ಸಾವಿರ ಕೇಸ್ ಬಂದಿವೆ. ಇದು ಹೀಗೆ ಮುಂದುವರಿದ್ರೆ ಇನ್ನೊಂದು ವಾರದಲ್ಲಿ ದಿನದ ಕೇಸ್‍ಗಳು ಲಕ್ಷ ದಾಟೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಅಷ್ಟೇ ಅಲ್ಲ ನಿನ್ನೆ ಒಂದೇ ದಿನ ದೇಶದಲ್ಲಿ ಬರೋಬ್ಬರಿ 714 ಮಂದಿ ಬಲಿ ಆಗಿದ್ದಾರೆ. ಸಕ್ರಿಯ ಕೇಸ್‍ಗಳ ಸಂಖ್ಯೆ ಆರೂಮುಕ್ಕಾಲು ಲಕ್ಷ ದಾಟಿದೆ. ಮಹಾರಾಷ್ಟ್ರದಲ್ಲಿ ನಿನ್ನೆ 47 ಸಾವಿರಕ್ಕೂ ಹೆಚ್ಚು ಕೇಸ್ ಬಂದಿದೆ. 481 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಂದು 49,447 ಕೇಸ್ ಬಂದಿದ್ದು, 227 ಸಾವು ಉಂಟಾಗಿದೆ. ಪುಣೆಯಲ್ಲಿ ಇಂದಿನಿಂದ ಸೆಮಿ ಲಾಕ್ಡೌನ್ ಜಾರಿ ಆಗಿದೆ. ಮಹಾರಾಷ್ಟ್ರದಲ್ಲಿ 1ರಿಂದ 8ನೇ ತರಗತಿ ಮಕ್ಕಳಿಗೆ ಪರೀಕ್ಷೆ ರದ್ದು ಮಾಡಲಾಗಿದೆ.
ಜಗತ್ತಿನ ಹಲವು ದೇಶಗಳು ಮತ್ತೆ ಲಾಕ್‍ಡೌನ್ ಕಡೆ ಮುಖ ಮಾಡಿವೆ. ನೆರೆಯ ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರ, ಒಂದು ವಾರ ಲಾಕ್‍ಡೌನ್ ಘೋಷಿಸಿದೆ. ಫ್ರಾನ್ಸ್‍ನಲ್ಲಿ ಇಂದಿನಿಂದ ಲಾಕ್‍ಡೌನ್ ಜಾರಿ ಆಗಿದೆ. ಪೋಲೆಂಡ್‍ನಲ್ಲಿ ಮೂರು ವಾರ, ಬೆಲ್ಜಿಯಂನಲ್ಲಿ ನಾಲ್ಕು ವಾರ ಲಾಕ್‍ಡೌನ್ ಜಾರಿ ಆಗಿದೆ. ಜನ ಅಪಾಯಿಂಟ್‍ಮೆಂಟ್ ತೆಗೆದುಕೊಂಡು ಅಂಗಡಿಗಳಿಗೆ ಹೋಗಬೇಕಿದೆ.