ಬೆಂಗಳೂರು: ಸಿಎಂ, ಮೂವರು ಸಚಿವರು, ನಾಲ್ವರು ಅಧಿಕಾರಿಗಳಿಗೆ ಬಂದಿರುವ ಟಪಾಲ್‍ಗಳನ್ನು ನೋಡಿ ವಿಧಾನಸಭೆ ಸಿಬ್ಬಂದಿ ಕಂಗಾಲಾಗಿದ್ದಾರೆ.
ಒಂದಲ್ಲ ಎರಡಲ್ಲ ಬರೋಬ್ಬರಿ 15 ಸಾವಿರಕ್ಕೂ ಹೆಚ್ಚು ಪತ್ರಗಳು ಬಂದಿವೆ. ಈ ಟಪಾಲ್‍ಗಳನ್ನು ನೋಡಿ ಸಿಬ್ಬಂದಿ ಗಾಬರಿಯಾಗಿದ್ದಾರೆ. ಒಂದೇ ಕವರ್, ಒಂದೇ ವಿಷಯ ಹೊಂದಿರುವ ಸಾವಿರಾರು ಪತ್ರಗಳಿವೆ. ಸಿಎಂ ಕಚೇರಿಗೂ 5 ಸಾವಿರ ಟಪಾಲ್‍ಗಳು ಬಂದಿವೆ.
ತಂಬಾಕು ಉತ್ಪನ್ನ ನಿಷೇಧ ಕಾಯ್ದೆ ಜಾರಿಗೊಳಿಸದಂತೆ ಸಾವಿರಾರು ಪತ್ರಗಳ ಮೂಲಕ ಒತ್ತಡ ಹೇರಲಾಗುತ್ತಿದೆ. ಭ್ರಷ್ಟ ಅಧಿಕಾರಿಗಳು ಬೆಂಗಳೂರಿನ ಅಂಗಡಿ ಮುಂಗಟ್ಟುಗಳಿಗೆ ದೌರ್ಜನ್ಯ ಮಾಡ್ತಿದ್ದಾರೆ. ತಂಬಾಕು ಸಿಗರೇಟ್ ನಿಷೇಧದ ಹೆಸರಲ್ಲಿ ದೌರ್ಜನ್ಯ ಎಸಗಿ ಹಣ ವಸೂಲಿ ಮಾಡ್ತಿದ್ದಾರೆ. ಇದನ್ನು ನಿಯಂತ್ರಿಸುವಂತೆ ಆಗ್ರಹಿಸಿ ಪತ್ರ ಚಳುವಳಿ ಆರಂಭಿಸಿದ್ದಾರೆ. ಅಂಗಡಿ ಮಾಲೀಕರು ಸಿಎಂ ಯಡಿಯೂರಪ್ಪ, ಭೈರತಿ ಬಸವರಾಜ್, ಸುಧಾಕರ್ ಸೇರಿ ಅಧಿಕಾರಿಗಳಿಗೂ ಪತ್ರ ಬರೆದಿದ್ದಾರೆ.
ಟಪಾಲ್‍ನ ವಿಚಾರ ನೋಡಿ ಸಚಿವರ ಕಚೇರಿ ಸಿಬ್ಬಂದಿಗಳು ತಲೆ ಕೆಡಿಸಿಕೊಂಡಿದ್ದಾರೆ. ಬೆಂಗಳೂರಿನ ಅಂಗಡಿ ಮುಂಗಟ್ಟುಗಳ ಮಾಲೀಕರಿಂದ ಸಚಿವರು ಹಾಗೂ ಸಿಎಂಗೆ ಪತ್ರ ಬರೆದಿದ್ದಾರೆ. ಸಿಗರೇಟ್ ತಂಬಾಕು ಉತ್ಪನ್ನ ಮಾರಾಟ ಮಾಡುವ ಸ್ಥಳಗಳ ನಿಯಂತ್ರಣ ಕಾಯ್ದೆ ವಿರೋಧಿಸಿ ಅಂಗಡಿ ಮುಂಗಟ್ಟು ಮಾಲೀಕರು ಪತ್ರ ಬರೆದಿದ್ದಾರೆ. ಬರೋಬ್ಬರಿ 5 ಸಾವಿರಕ್ಕೂ ಹೆಚ್ಚು ಅಂಗಡಿ ಮಾಲೀಕರಿಂದ 15 ಸಾವಿರಕ್ಕೂ ಹೆಚ್ಚು ಪತ್ರಗಳನ್ನು ಬರೆದಿದ್ದಾರೆ.
ಭಾರೀ ಸಂಖ್ಯೆಯಲ್ಲಿ ಬಂದ ಪೋಸ್ಟ್‍ಗಳನ್ನು ನೋಡಿ, ನಮ್ಮ ಬಳಿ ಈ ಟಪಾಲ್‍ಗಳನ್ನು ನೋಡಲು ಸಾಧ್ಯವಿಲ್ಲ. ನೀವು ಬಂದು ತೆಗೆದುಕೊಂಡು ಹೋಗಿ ವಿಧಾನಸಭೆಯ ಸಿಬ್ಬಂದಿ ಸಚಿವರ ಸಿಬ್ಬಂದಿಗೆ ಕರೆ ಮಾಡಿ ತಿಳಿಸಿದ್ದಾರೆ.