ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ದಾವಣಗೆರೆಯ 5 ಮಂದಿ ಶಾಸಕರು ಭೇಟಿ ನೀಡಿ ಸಚಿವ ಸ್ಥಾನಕ್ಕೆ ಬೇಡಿಕೆಯಿಟ್ಟಿದ್ದಾರೆ.
ನಂತರ ಜಂಟಿಯಾಗಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ದಾವಣಗೆರೆಯ 5 ಶಾಸಕರಲ್ಲಿ ಒಬ್ಬರಿಗಾದ್ರೂ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.
ದಾವಣಗೆರೆ ಜಿಲ್ಲೆ ಮಧ್ಯ ಕರ್ನಾಟಕದ ರಾಜಧಾನಿಯಾಗಬೇಕಿತ್ತು. ವಾಣಿಜ್ಯ, ಕೈಗಾರಿಕೆಗಳಲ್ಲಿ ಮುಂದುವರಿದಿರುವ ಜಿಲ್ಲೆ. ಆದರೂ ನಮಗೇನೂ ಬೇಸರವಿಲ್ಲ. ನಮ್ಮ ಜಿಲ್ಲೆಗೆ ಅವಕಾಶ ಕೊಡಬೇಕು ಎಂದು ನಮ್ಮ ಜಿಲ್ಲೆಯ 5 ಶಾಸಕರು ಒಟ್ಟಿಗೆ ಭೇಟಿ ಮಾಡಿದ್ವಿ. ಸಿಎಂ ಬೊಮ್ಮಾಯಿ, ಯಡಿಯೂರಪ್ಪ, ಹಾಗೂ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿರುವುದಾಗಿ ತಿಳಿಸಿದರು.
ನಾವೆಲ್ಲ ಒಟ್ಟಾಗಿ ಅವಕಾಶ ಕೊಡಬೇಕು ಎಂದು ಕೇಳಿದ್ದೀವಿ. ಸಾರ್ವಜನಿಕರ ಪರವಾಗಿ ನಾವು ಒತ್ತಾಯ ಮಾಡಿದ್ದೀವಿ. ದಾವಣಗೆರೆಯ ಸಮಗ್ರ ಅಭಿವೃದ್ಧಿಗೆ ನಮಗೆ ಪ್ರಾತಿನಿಧ್ಯ ಕೊಡಬೇಕು. ನಾವು ಯಾವುದೇ ಲಾಬಿ ಮಾಡುತ್ತಿಲ್ಲ. ಯಡಿಯೂರಪ್ಪ, ಪಕ್ಷದ ಅಧ್ಯಕ್ಷರು, ಅರುಣ್ ಸಿಂಗ್ ಅವರನ್ನೂ ಭೇಟಿ ಮಾಡಿದ್ದೇವೆ. ಅರುಣ್ ಸಿಂಗ್ ದಾವಣಗೆರೆ ಪ್ರಾತಿನಿಧ್ಯ ಅಂತ ಡೈರಿಯಲ್ಲಿ ಬರೆದುಕೊಂಡಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.