ಕೋಲಾರ: ಜಮೀನು ವಿವಾದ ಹಿನ್ನೆಲೆ ದಾಯಾದಿಗಳ ಮಧ್ಯೆ ಜಗಳ ನಡೆದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಜಮೀನಿನ ಮೇಲೆ ನೀರು ಹರಿಯುತ್ತಿದ್ದದ್ದನ್ನು ಪ್ರಶ್ನಿಸಿದಕ್ಕೆ, ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಇದಾಗಿದೆ. ಕೋಲಾರ ತಾಲ್ಲೂಕಿನ ಚೌಡದೇನಹಳ್ಳಿ ಗ್ರಾಮದ ಮುಲಿಯಾಕಲಪ್ಪ ದೊಡ್ಡ ಹೆಂಡತಿ ಮಕ್ಕಳಾದ ಮುನಿರಾಜು, ಸೊಣ್ಣಪ್ಪ, ಅಂಜಿನಪ್ಪ ಮತ್ತು ಸಹೋದರರು ಸೇರಿ ಚಿಕ್ಕ ಹೆಂಡತಿ ಮಕ್ಕಳಾದ ಮನೋಜ್ ಮತ್ತು ಮದನ್ ಸೇರಿದಂತೆ ಮುನಿಯಾಕಲಪ್ಪ ಮೇಲೆ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಇನ್ನು ಹಲ್ಲೆಯಲ್ಲಿ ಮನೋಜ್ ತಲೆಗೆ ತೀವ್ರವಾಗಿ ಗಾಯವಾಗಿದ್ದು ತಲೆಗೆ ನಾಲ್ಕು ಹೊಲಿಗೆಯನ್ನು ಮಾಡಲಾಗಿದೆ.
ಮುನಿಯಾಕಲಪ್ಪ ದೊಡ್ಡ ಹೆಂಡತಿ ಮಕ್ಕಳಿಗೆ ನೀಡಬೇಕಾದ ಭಾಗವನ್ನು ಗ್ರಾಮದ ಹಿರಿಯರು ಸೇರಿ ನ್ಯಾಯ ಪಂಚಾಯಿತಿ ಮಾಡಿ ವಿಭಾಗ ನೀಡಿದ್ದು, ಅದರ ಜಮೀನು ಪಕ್ಕ ಚಿಕ್ಕ ಹೆಂಡತಿ ಮಕ್ಕಳು ಜಮೀನಿನಲ್ಲಿ ಕೆಲಸಮಾಡುತ್ತಿರುವಾಗ ಏಕಾ ಏಕಿ ರಾಡ್ ಮೂಲಕ ಹಲ್ಲೆ ಮಾಡಿದ್ದಾರೆ. ಗಾಯಾಳುಗಳು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ,