ಬೆಂಗಳೂರು: ಸ್ಯಾಂಡಲ್‍ವುಡ್ ಭರ್ಜರಿ ಸಿನಿಮಾ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಚೇತನ್ ಕುಮಾರ್ ಮೈಸೂರಿನಲ್ಲಿ ಇಂದು ಮಾನಸ ಜೊತೆ ಸಪ್ತಪದಿ ತುಳಿದ್ದಾರೆ. ಮೈಸೂರಿನ ಇನ್ಫೋಸಿಸ್‍ನಲ್ಲಿ ಮಾನಸ ಕೆಲಸ ಮಾಡುತ್ತಿದ್ದಾರೆ. ಈ ಮುದ್ದಾದ ಜೋಡಿ ಇಂದು ದಾಂಪತ್ಯಜೀವನಕ್ಕೆ ಕಾಲಿಟ್ಟಿದೆ. ಇದನ್ನೂ ಓದಿ: IAS ಆಕಾಂಕ್ಷಿಗಳಿಗೆ ಫ್ರೀ ಕೋಚಿಂಗ್ ಆಫರ್ ನೀಡಿದ ಸೋನು ಸೂದ್
ಪುನೀತ್ ರಾಜ್ ಕುಮಾರ್, ಧ್ರುವ ಸರ್ಜಾ, ನಿರ್ಮಾಪಕ ಉಮಾಪತಿ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಭರ್ಜರಿ, ಬಹಾದ್ದೂರ್ ಮತ್ತು ಭರಾಟೆ ಚಿತ್ರಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರೊ ಇವರು ಗೀತರಚನಕಾರರಾಗಿ ಮತ್ತು ಸಂಭಾಷಣಾಕಾರನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಸದ್ಯ ಅಪ್ಪು ನಟನೆಯ ಜೇಮ್ಸ್ ಸಿನಿಮಾವನ್ನು ಚೇತನ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.