ನವದೆಹಲಿ: ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಇಂದು ಗೆಳೆಯ ರೋಹನ್ ಪ್ರೀತ್ ಸಿಂಗ್ ಜೊತೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ದೆಹಲಿಯ ಆನಂದ್ ಕಾರಜ್ ನಲ್ಲಿ ನಡೆದ ಮದುವೆಯಲ್ಲಿ ಎರಡು ಕುಟುಂಬಗಳ ಸದಸ್ಯರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು.
ಕಳೆದ ಕೆಲ ದಿನಗಳಿಂದ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಮದುವೆ ಸಂಭ್ರಮದ ವಿಡಿಯೋ ವತ್ತು ಫೋಟೋಗಳನ್ನ ಶೇರ್ ಮಾಡಿಕೊಳ್ಳಲಾರಂಭಿಸಿದ್ದರು. ಮದುವೆ ಬಳಿಕ ನೇಹಾ ಪತಿ ರೋಹನ್ ಜೊತೆ ಪಂಜಾಬ್ ಗೆ ತೆರಳಲಿದ್ದಾರೆ. ಪಂಜಾಬ್ ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಆಯೋಜಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
20 ದಿನಗಳ ಹಿಂದೆಯೇ ನೇಹಾ ಮತ್ತು ರೋಹನ್ ಮದುವೆಯ ಸುದ್ದಿಗಳು ಹರಿದಾಡಿದ್ದವು. ಅಕ್ಟೋಬರ್ 24ರಂದು ಇಬ್ಬರ ಮದುವೆ ನಡೆಯಲಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಅಕ್ಟೋಬರ್ 9ರಂದು ನೇಹಾ ಕಕ್ಕರ್, ಸೋಶಿಯಲ್ ಮೀಡಿಯಾದಲ್ಲಿ ಗೆಳೆಯ ರೋಹನ್ ಜೊತೆ ಮದುವೆ ಆಗುತ್ತಿರುವ ವಿಷಯ ರಿವೀಲ್ ಮಾಡಿದ್ದರು. ರೋಹನ್ ಜೊತೆಗಿನ ಫೋಟೋ ಶೇರ್ ಮಾಡಿಕೊಂಡಿದ್ದ ನೇಹಾ, ನೀನು ನನ್ನವನು ಎಂದು ಬರೆದುಕೊಂಡಿದ್ದರು. ನೇಹಾ ಪೋಸ್ಟ್ ಗೆ ರಿಪ್ಲೈ ನೀಡಿದ್ದ ರೋಹನ್, ಬಾಬು ಐ ಲವ್ ಯು ಸೋ ಮಚ್ ಮೈ ಲವ್. ಹೌದು ನಾನು ನಿನ್ನವನು ಮಾತ್ರ. ನೀನು ನನ್ನ ಜೀವ ಎಂದು ರೊಮ್ಯಾಂಟಿಕ್ ಆಗಿ ಪ್ರೇಮ ವಿಷಯ ತಿಳಿಸಿದ್ದರು.
ಕೆಲ ತಿಂಗಳ ಹಿಂದೆ ರೋಹನ್ ಮತ್ತು ನೇಹಾ ಪರಿಚಯವಾಗಿತ್ತು. ಆಜಾ ಚಲಾ ವ್ಯಾಹ ಕರವಾಯೇಂ ಹಾಡಿನ ಸಂದರ್ಭದಲ್ಲಿ ಇಬ್ಬರ ಪರಿಚಯವಾಗಿತ್ತು. ಪರಿಚಯ ಕೆಲವೇ ದಿನಗಳಲ್ಲಿ ಪ್ರೇಮದ ಪುಟ ತೆರೆದು ಮದುವೆ ಎಂಬ ಹಸ್ತಾಕ್ಷರ ಇಬ್ಬರ ಬಾಳಲ್ಲಿ ಮುದ್ರಣಗೊಂಡಿದೆ.
2019ರ ಇಂಡಿಯನ್ ರೈಸಿಂಗ್ ಸ್ಟಾರ್ ಮೂರನೇ ಸೀಸನ್ ನಲ್ಲಿ ರೋಹನ್ ಪ್ರೀತ್ ಸಿಂಗ್ ಸ್ಪರ್ಧಿಯಾಗಿದ್ದರು. ಇದರ ಜೊತೆ ಮುಜ್‍ಸೇ ಶಾದಿ ಕರೋಗೆ ರಿಯಾಲಿಟಿ ಶೋನಲ್ಲಿ ರೋಹನ್ ಕಾಣಿಸಿಕೊಂಡಿದ್ದರು.