ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತೆಗಳು ಆರಂಭವಾಗಿದ್ದು, ಅರಣ್ಯ ಇಲಾಖೆ ದಸರಾಗೆ ಐದು ಆನೆಗಳ ಆಯ್ಕೆಯನ್ನು ಅಂತಿಮಗೊಳಿಸಿದೆ. ಇದನ್ನೂ ಓದಿ: ಮೈಸೂರು ದಸರಾಕ್ಕೆ ದುಬಾರೆಯಿಂದ ನಾಲ್ಕೇ ಆನೆಗಳು
ದಸರಾ ಗಜಪಡೆಯ ಕ್ಯಾಪ್ಟನ್ ಸ್ಥಾನದಿಂದ ಅರ್ಜುನ ಆನೆಗೆ ನಿವೃತ್ತಿ ಸಿಕ್ಕಿದ್ದು, ಈ ಬಾರಿಯ ದಸರಾದಿಂದ ಅಭಿಮನ್ಯು ಗಜಪಡೆಯ ಕ್ಯಾಪ್ಟನ್ ಆಗಿದ್ದಾನೆ. ಹೀಗಾಗಿ ಈ ಬಾರಿ ಅಂಬಾರಿ ಆನೆಯಾಗಿ ಅಭಿಮನ್ಯು ಆಯ್ಕೆಯಾಗಿದ್ದಾನೆ. ಇನ್ನೂ ಉಳಿದಂತೆ ವಿಕ್ರಮ, ಗೋಪಿ, ಕಾವೇರಿ ಮತ್ತು ವಿಜಯ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ಈ ಐದು ಆನೆಗಳನ್ನ ಕಾಡಿನಿಂದ ಕರೆತರಲು ಅನುಮತಿ ಕೂಡ ಸಿಕ್ಕಿದೆ.
Advertisement
Advertisement
ಸದ್ಯಕ್ಕೆ ಆನೆಗಳು ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮತ್ತಿಗೋಡು ಶಿಬಿರದಲ್ಲಿವೆ. ಅಕ್ಟೋಬರ್ 1ಕ್ಕೆ ಮೈಸೂರಿನ ಅರಣ್ಯ ಭವನಕ್ಕೆ ಆನೆಗಳು ಬರಲಿದೆ. ಮರುದಿನ ಅಂದರೆ ಅಕ್ಟೋಬರ್ 2ಕ್ಕೆ ಮೈಸೂರು ಅರಮನೆಯಲ್ಲಿ ಸಾಂಪ್ರದಾಯಿಕವಾಗಿ ಗಜಪಡೆಗೆ ಸ್ವಾಗತ ಮಾಡಲಾಗುತ್ತದೆ.
Advertisement
Advertisement
ಗಜಪಡೆಗೆ ಕಳೆದ ಐದು ವರ್ಷಗಳಿಂದ ಅರ್ಜುನ ಕ್ಯಾಪ್ಟನ್ ಆಗಿದ್ದ. ಅರ್ಜುನಿಗೆ ಈಗ 60 ವರ್ಷ. ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ 60 ವರ್ಷ ತುಂಬಿದ ಆನೆಗಳ ಮೇಲೆ ಹೆಚ್ಚು ಒತ್ತಡ ಹೇರುವಂತಿಲ್ಲ. ಹೀಗಾಗಿ ಅರ್ಜನನ್ನು ಕ್ಯಾಪ್ಟನ್ ಶಿಪ್‍ನಿಂದ ಕೆಳಗೆ ಇಳಿಸುವುದು ಅನಿವಾರ್ಯವಾಗಿತ್ತು. 20 ವರ್ಷಗಳಿಂದ ನಿರಂತರವಾಗಿ ದಸರಾ ಗಜಪಡೆಯ ಸದಸ್ಯನಾಗಿರುವ ಅಭಿಮನ್ಯುಗೆ ಕ್ಯಾಪ್ಟನ್ ಪಟ್ಟ ಕಟ್ಟಿ ಅಂಬಾರಿ ಹೊರಿಸೋಕೆ ಅರಣ್ಯ ಇಲಾಖೆ ನಿರ್ಧರಿಸಿದೆ.