ಬೆಂಗಳೂರು: ಸಭಾಪತಿ ಪದಚ್ಯುತಿ ನಂತರ ಜೆಡಿಎಸ್ ವಿರುದ್ಧ ಮತ್ತೊಂದು ಅಸ್ತ್ರ ಬಳಸಲು ಸಿದ್ದರಾಮಯ್ಯ ಪ್ಲಾನ್ ಮಾಡಿಕೊಂಡಿದ್ದಾರೆ. ಈ ಮೂಲಕ ಪರಿಷತ್ ಗಲಾಟೆಯಲ್ಲಿ ಜೆಡಿಎಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಸಿದ್ದರಾಮಯ್ಯ ಬತ್ತಳಿಕೆಯಲ್ಲಿ ಮತ್ತೊಂದು ಅಸ್ತ್ರ ಸಿದ್ದವಾಯ್ತಾ ಎಂಬ ಪ್ರಶ್ನೆ ಎದ್ದಿದೆ.
Advertisement
ಹೌದು. ಪರಿಷತ್ ಸಭಾಪತಿ ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಕೈ ಚಳಕ ತೋರಿದ ಸಿದ್ದರಾಮಯ್ಯ ಬಿಜೆಪಿ ಜೆಡಿಎಸ್ ಗೆ ಟಕ್ಕರ್ ನೀಡಿದ್ದರು. ಅದರಲ್ಲೂ ರಾಜಕೀಯವಾಗಿ ಗೊಂದಲಮಯವಾಗಿದ್ದ ಜೆಡಿಎಸ್ ಗೆ ಜತ್ಯಾತೀತ ನಡೆಯ ಸವಾಲು ಹಾಕಿದ್ದರು. ಅನಿವಾರ್ಯವಾಗಿ ಜೆಡಿಎಸ್ ಬಹಿರಂಗವಾಗಿಯೆ ಬಿಜೆಪಿ ಬೆಂಬಲಿಸಿತ್ತು. ಆ ಮೂಲಕ ಜೆಡಿಎಸ್ ನ ಅಸಲಿ ಬಣ್ಣ ಬಯಲು ಮಾಡಬೇಕು ಎಂದುಕೊಂಡಿದ್ದ ಸಿದ್ದರಾಮಯ್ಯ ಆಸೆ ಈಡೇರಿತ್ತು.
Advertisement
Advertisement
ಈಗ ಅದರ ಮುಂದುವರಿದ ಭಾಗವಾಗಿ ಜೆಡಿಎಸ್ ಗೆ ಜಾತ್ಯಾತೀತೆಯ ಮತ್ತೊಂದು ಪಾಠ ಹೇಳಲು ಸಿದ್ಧತೆ ಆರಂಭಿಸಿದ್ದಾರೆ. ಜೆಡಿಎಸ್ ಅವಿಶ್ವಾಸ ನಿರ್ಣಯಕ್ಕೆ ಬಿಜೆಪಿ ಬೆಂಬಲಿಸಿರಬಹುದು. ಆದರೆ ನಾವು ಜಾತ್ಯಾತೀತ ಶಕ್ತಿ ಬೆಂಬಲಿಸ್ತೀವಿ ಅನ್ನೋ ಹೊಸ ಅಸ್ತ್ರ ಬಳಸಲು ಮುಂದಾಗಿದ್ದಾರೆ. ಬಿಜೆಪಿ ಜೆಡಿಎಸ್ ಜಂಟಿ ಅವಿಶ್ವಾಸ ನಿರ್ಣಯ ಯಶಸ್ವಿಯಾಗಿ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ಪದಚ್ಯುತಿ ಅನಿವಾರ್ಯವಾದರೆ ಸಿದ್ದರಾಮಯ್ಯ ಹೊಸ ಅಸ್ತ್ರ ಬಳಕೆ ಫಿಕ್ಸ್ ಆಗಲಿದೆ.
Advertisement
ಜೆಡಿಎಸ್ ಹಿರಿಯ ಸದಸ್ಯ ಹೊರಟ್ಟಿ ಸಭಾಪತಿ ಆಗೋದಾದರೆ ಕಾಂಗ್ರೆಸ್, ಜೆಡಿಎಸ್ ಬೆಂಬಲಿಸಲು ಸಿದ್ಧ ಅನ್ನೋ ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಜೆಡಿಎಸ್ ಬಿಜೆಪಿ ಜೊತೆ ಸೇರಿ ಸಭಾಪತಿ ಪದಚ್ಯುತಿ ಮಾಡಿರಬಹುದು. ಆದರೆ ನಾವು ಜಾತ್ಯಾತೀತ ನಿಲುವಿಗೆ ಬದ್ಧ. ಈಗಲೂ ಕಾಲ ಮಿಂಚಿಲ್ಲ ಜೆಡಿಎಸ್ ನ ಹೊರಟ್ಟಿ ಸದನದ ಹಿರಿಯ ಸದಸ್ಯ ಅವರನ್ನ ಸಭಾಪತಿ ಮಾಡುವುದಾದರೆ ನಾವು ಜಾತ್ಯಾತೀತ ನೆಲೆಗಟ್ಟಲ್ಲಿ ಜೆಡಿಎಸ್ ಬೆಂಬಲಿಸುತ್ತೇವೆ ಎಂಬುದು ಸಿದ್ದರಾಮಯ್ಯ ಪ್ಲಾನ್ ಆಗಿದೆ.
ಹೇಗಿದ್ದರು ಜೆಡಿಎಸ್ ನಾಯಕರು ಒಪ್ಪಿಕೊಳ್ಳಲ್ಲ. ಆಗ ಕಾಂಗ್ರೆಸ್ ಕೊನೆ ಕ್ಷಣದವರೆಗೆ ಜಾತ್ಯಾತೀತ ಶಕ್ತಿ ಒಗ್ಗಟ್ಟಿಗೆ ಪ್ರಯತ್ನಿಸಿತು ಅನ್ನೋ ಸಂದೇಶ ರವಾನೆ ಆಗಲಿದೆ. ಅಲ್ಲದೆ ಜೆಡಿಎಸ್ ಹೆಸರಲ್ಲಿ ಜಾತ್ಯಾತೀತ ಅಂತಿದ್ದರು ಅದು ಬಿಜೆಪಿಯ ಬಿ ಟೀಮ್ ಎಂದು ಬಿಂಬಿಸುವುದು ಇನ್ನು ಸುಲಭವಾಗಲಿದೆ. ಹೀಗೆ ಜೆಡಿಎಸ್ ವಿರುದ್ಧ ಎರಡನೆ ಬಾರಿ ಜಾತ್ಯಾತೀತ ಅಸ್ತ್ರ ಬಳಸಲು ಸಿದ್ದರಾಮಯ್ಯ ಸಿದ್ದತೆ ಮಾಡಿಕೊಂಡು ಆ ಮೂಲಕ ಜೆಡಿಎಸ್ ಗೆ ಇನ್ನೊಂದು ಟಕ್ಕರ್ ಕೊಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.