ಬೆಂಗಳೂರು: ದಲಿತರ ಹೆಸರಲ್ಲಿ ಹಣ ಲೂಟಿ ಆಗಿದೆ ಎಂದು ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.
- Advertisement 2-
ಇಂದು ಪರಿಷತ್‍ನಲ್ಲಿ ಮಾತನಾಡಿದ ಎಚ್. ವಿಶ್ವನಾಥ್, ದಲಿತರ ಹೆಸರಲ್ಲಿ ಹಣ ಲೂಟಿ ಆಗಿದೆ. ದಲಿತರ ಅಭಿವೃದ್ದಿಗೆ ಒಂದು ಲಕ್ಷ ಕೋಟಿ ಹಣ ನೀಡಲಾಗಿದೆ. ಆದರೆ ದಲಿತರಿಗೆ ಕೆಲಸಗಳು ಮಾತ್ರ ಇನ್ನೂ ಆಗಿಲ್ಲ. ಈ ಬಗ್ಗೆ ಸರ್ಕಾರ ಜನಪ್ರತಿನಿಧಿಗಳನ್ನ ಕರೆದು ಸಭೆ ಮಾಡಿ. ಯೋಜನೆಗಳನ್ನ ರೂಪಿಸಬೇಕು ಎಂದು ಆಗ್ರಹಿಸಿದರು.
- Advertisement 3-
ಈ ವಿಚಾರವಾಗಿ ಉತ್ತರ ನೀಡಿದ ಸಚಿವ ಕಾರಜೋಳ, 4 ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಸೈನಿಕ ಶಾಲೆ ಪ್ರಾರಂಭಕ್ಕೆ ಮಾತುಕತೆ ನಡೆಯುತ್ತಿದೆ. ಹಣ, ಭೂಮಿ ನಮ್ಮದು, ಮ್ಯಾನೇಜ್‍ಮೆಂಟ್ ಅವರದ್ದು 50% ದಲಿತ ಮಕ್ಕಳಿಗೆ ಸೀಟು ಕೊಡಬೇಕು ಎಂದು ನಿಯಮ ಮಾಡಲಾಗುತ್ತಿದೆ. ಶೀಘ್ರವೇ ಈ ಯೋಜನೆ ಜಾರಿಗೆ ತರುತ್ತೇವೆ ಎಂದು ತಿಳಿಸಿದರು.
- Advertisement 4-
ಬೀದರ್ ಜಿಲ್ಲೆಯ ಪರಿಶಿಷ್ಟ ಜಾತಿ ಉಪಯೋಜನೆ, ಹಾಗೂ ಗಿರಿಜನ ಯೋಜನೆ ಅಡಿ 2019-20 – 2689 ಲಕ್ಷ ಮತ್ತು 1741 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. 2020-21 ರಲ್ಲಿ 1195.50 ಲಕ್ಷ ಮತ್ತು 876 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದ್ದು, ಈ ಯೋಜನೆ ಅಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ವಾಸಿಸುವ ಕಾಲೋನಿಗಳನ್ನ ಮಾತ್ರ ಕೈಗೊಳ್ಳಲಾಗಿದೆ. ಬೇರೆ ಯಾವುದೇ ಕಾಲೋನಿಗಳ ಕಾಮಗಾರಿ ಕೈಗೆತ್ತುಕೊಂಡಿಲ್ಲ. ಎಸ್‍ಸಿ-ಎಸ್‍ಟಿ ಹಣ ಸರಿಯಾಗಿ ಉಪಯೋಗ ಆಗಬೇಕು ಎಂದು ಸದಸ್ಯ ಅರವಿಂದ್ ಕುಮಾರ್ ಹೇಳಿದರು.
ಈ ವೇಳೆ ಕೂಡಲೇ ಎದ್ದು ನಿಂತು ಮಾತನಾಡಿದ ಸಿಎಂ ಎಸ್‍ಸಿಪಿ-ಟಿಎಸ್‍ಪಿ ಹಣ 100% ಹಣ ಖರ್ಚಾದರೆ ಪ್ರತಿ ದಲಿತರಿಗೆ ಮನೆ ಕಟ್ಟಿಕೊಡಬಹುದು. ಯಾರು ನಿರುದ್ಯೋಗ ಇರದಂತೆ ನೋಡಿಕೊಳ್ಳಬಹುದು ಈಗ ಕೇವಲ 70% ಮಾತ್ರ ಖರ್ಚಾಗುತ್ತಿದೆ. ಸಂಪೂರ್ಣ ಖರ್ಚು ಮಾಡಿ ಎಂದು ಸಚಿವ ಕಾರಜೋಳರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಯಾಗಿ ಸಚಿವ ಕಾರಜೋಳ ಯಾವುದೇ ಹಣ ದುರುಪಯೋಗ ಆಗಿಲ್ಲ. ಅಂತಹ ಯಾವುದೇ ಪ್ರಕರಣ ಕಂಡು ಬಂದರೆ ಕೂಡಲೇ ತನಿಖೆ ಮಾಡಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.