ದರ್ಶನ್ ಹೊಡೆದಿದ್ದು ನಿಜ: ಸಂದೇಶ್ ಪ್ರಿನ್ಸ್ ಸೆಕ್ಯೂರಿಟಿ ಗಾರ್ಡ್ ಸ್ಫೋಟಕ ಹೇಳಿಕೆ

Public TV
2 Min Read
mys darshan sandesh prince hotel security guard

ಮೈಸೂರು: ನಟ ದರ್ಶನ್ ಹೊಡೆದಿದ್ದು ನಿಜ, ಕಪಾಳ, ಕತ್ತು ಹಾಗೂ ಕಿವಿಗೆ ಹೊಡೆದರು. ಕುಡಿದ ಮತ್ತಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಸಂದೇಶ್ ಪ್ರಿನ್ಸ್ ಹೋಟೆಲ್‍ನ ಸೆಕ್ಯೂರಿಟಿ ಗಾರ್ಡ್ ಹೇಳಿದ್ದಾರೆ.

ದರ್ಶನ್ ಗಲಾಟೆ ಸಂಬಂಧ ಅನಾಮಿಕರೊಬ್ಬರ ಜೊತೆ ಮಾತನಾಡಿದ್ದು, ವೀಡಿಯೋದಲ್ಲಿ ಮಾತನಾಡಿರುವ ಸೆಕ್ಯೂರಿಟಿ ಗಾರ್ಡ್, ಯಾವ ರೀತಿ ಕೊಡಬೇಕೋ ಆ ರೀತಿ ಕೊಡಬೇಕು, ದುಡ್ಡು, ಕಾಸು ಕಟ್ಟಿಕೊಂಡು ನಿಮಗೇನು ಎಂದು ನಮ್ಮ ಮಾಲೀಕರಿಗೆ ಬೈದಿದ್ದಾರೆ. ನಮ್ಮ ಸೆಕ್ಯೂರಿಟಿಯವರನ್ನೂ ಬೈಯ್ದಿದ್ದಾರೆ. 50 ಸಾವಿರ ರೂಪಾಯಿ ಎರಚಿದ್ದಾರೆ. ಹಾಲ್ ತುಂಬಾ ಬಿದ್ದಿತ್ತು. ಬಳಿಕ ನಮ್ಮ ಮಾಲೀಕರಿಗೆ ಕೊಡು ಎಂದು ದರ್ಶನ್ ಹೇಳಿದರು. ಆದರೆ ನಮ್ಮ ಹೌಸ್ ಕೀಪಿಂಗ್ ನವರು ಎಲ್ಲವನ್ನೂ ಆರಿಸಿಕೊಂಡು ಲಿಫ್ಟ್‍ನಲ್ಲಿದ್ದ ದರ್ಶನ್ ಅವರಿಗೆ ಕೊಡಲು ಹೋದರು. ಈ ವೇಳೆ ಕತ್ತಿಗೆ ಹೊಡೆದರು. ಹೋಗೋಲೋ ತಗೋಂಡು ಹೋಗು ಎಂದು ದರ್ಶನ್ ಹೇಳಿರುವ ಕುರಿತು ಬಾಯ್ಬಿಟ್ಟಿದ್ದಾರೆ.

darshan 2 medium

ಹುಡುಗರೆಲ್ಲಾ ನಾವು ಕೆಲಸ ಬಿಟ್ಟುಬಿಡ್ತೀವಿ ಅಂದ್ರು. ಆಗ ನಮ್ಮ ಎಂಡಿ ಬಂದು ಅವರು ನಮ್ಮ ಹೋಟೆಲ್‍ಗೆ ಬರೋದೆ ಬೇಡ, ಏನೋ ತಪ್ಪಾಯ್ತು ಮಾಡ್ಕೊಂಡು ಹೋಗ್ರಪ್ಪ ಎಂದು ನಮ್ಮನ್ನು ಕೇಳಿಕೊಂಡರು. ಆದರೆ ಕೆಲಸ ಮಾಡುವ ಹಳಬ 50 ವರ್ಷದ ಗಂಗಾಧರ್ ನಮ್ಮನ್ನು ಹೊಡೆದರು ಎಂದು ನಮ್ಮ ದೊಡ್ಡ ಎಂಡಿಗೆ ಹೇಳಿಬಿಟ್ಟಿದ್ದಾನೆ. ಅಷ್ಟರೊಳಗೆ ದೊಡ್ಡ ಎಂಡಿ ಬಂದರು. ಬಳಿಕ ದರ್ಶನ್ ಅವರನ್ನು ಬರುವಂತೆ ಕರೆದರು. ನಂತರ ಯಾಕೆ ನಮ್ಮ ಹೋಟೆಲ್ ಸ್ಟಾಫ್ ಮೇಲೆ ಕೈ ಮಾಡಿದ್ದೀರಿ, ನಮ್ಮ ಹೋಟೆಲ್ ಹತ್ತಿರ ಬರಬೇಡಿ, ಜಾಗ ಖಾಲಿಮಾಡಿ ಎಂದು ಜೋರಾಗಿ ಮಾತನಾಡಿದರು. ಅವತ್ತೇ ಹೊರಟವರು ಮತ್ತೆ ಬಂದಿಲ್ಲ ಎಂದು ಸೆಕ್ಯೂರಿಟಿ ಗಾರ್ಡ್ ಹೇಳಿದ್ದಾರೆ. ಇದನ್ನೂ ಓದಿ: ನನ್ನ ಬಳಿಯಲ್ಲಿದ್ದ ಆಸ್ತಿ ದರ್ಶನ್ ಕೇಳಿದ್ದು ನಿಜ, ಕೊಡಲ್ಲ ಅಂದಿದ್ದೆ: ನಿರ್ಮಾಪಕ ಉಮಾಪತಿ

darshan 2 1 medium

ಬಳಿಕ ಮಧ್ಯಾಹ್ನ ಟಿವಿಯಲ್ಲಿ ಬರುತ್ತಿತ್ತಲ್ಲ ಎಂದು ಅನಾಮಿಕ ಪ್ರಶ್ನಿಸಿದ್ದಾರೆ. ಆಗ ಸೆಕ್ಯೂರಿಟಿ ಗಾರ್ಡ್ ಮತ್ತೆ ಮುಂದುವರೆದು, ದರ್ಶನ್ ಅವರಿಗೆ ದುಡ್ಡು ಬಂತಲ್ಲ, ಜಂಬ ಜಾಸ್ತಿಯಾಯಿತು. ಒಂದೆರಡು ತಿಂಗಳಾಗಿತ್ತು. ಕೆಳಗಡೆ ಒಬ್ಬ ರೂಮ್ ಸರ್ವೀಸ್ ಬಾಯ್ ಇದಾನೆ. ಅವನಿಗೆ ನಿಮ್ಮ ಏಜ್ ಆಗಿದೆ. ಅವನೇ ಎಲ್ಲಾ ಆರ್ಡರ್ ತೆಗೆದುಕೊಂಡು ಕಳುಹಿಸಿಕೊಡೋದು. ದರ್ಶನ್ ಫ್ರೆಂಡ್ಸ್ ಎಲ್ಲಾ ಅಲ್ಲಿಗೆ ಬರುತ್ತಿದ್ದರು. ಬೇರೆಲ್ಲೂ ಹೋಗುತ್ತಿರಲಿಲ್ಲ, ಯಾವಾಗಲೂ ನಮ್ಮ ಹೋಟೆಲ್‍ಗೇ ಬರುತ್ತಿದ್ದರು. ಅವತ್ತು ಲಾಕ್‍ಡೌನ್‍ನಿಂದ ಏನೂ ಮಾಡಿರಲಿಲ್ಲ. ಹಿಂದೆ ಸಿಂಪಲ್ಲಾಗಿ ಸ್ವಿಮ್ಮಿಂಗ್ ಪೂಲ್ ಪಕ್ಕದಲ್ಲಿನ ಜಾಗ ದಲ್ಲಿ ಟೇಬಲ್ ಹಾಕಿದ್ದೆವು. ಇಪ್ಪತ್ತು, ಮೂವತ್ತು ಜನ ಪಾರ್ಟಿ ಮಾಡಬಹುದು. ಬೇಕಾದವರೆಲ್ಲಾ 15 ಜನ ಪಾರ್ಟಿ ಮಾಡಿದ್ದರು. ಮಿನಿ ಪಾರ್ಟಿ, ಡ್ರಿಂಕ್ಸ್ ಪಾರ್ಟಿ ಮಾಡಿದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನೊಬ್ಬ ಹಾರ್ಡ್ ವರ್ಕಿಂಗ್ ಆರ್ಡಿನರಿ ಮ್ಯಾನ್ – ಪಬ್ಲಿಕ್ ಟಿವಿ ಜೊತೆ ದರ್ಶನ್ ಆಪ್ತ ಹರ್ಷ ಮಾತು

darshan mysuru medium

ಅಂದು ಎಲ್ಲಾ ಆಯಿತು, ಜೋರಾಗಿ ಡ್ರಿಂಕ್ಸ್ ಮಾಡಿದರು. ಆಮೇಲೆ ಏನೋ ಒಂದು ಐಟಂ ಕೊಡಲಿಲ್ಲ ಅನ್ಸುತ್ತೆ, ಆ ಮಾತಿಗೆ ಕಿಚನ್ ರೂಮ್ ಸರ್ವಿಸ್ ನವರು ಆರ್ಡರ್ ಮಾಡುತ್ತಿದ್ದರಲ್ಲ ಅವರಿಗೆ ಕಪಾಳ, ಕಿವಿಗೆ ಸೇರಿ ಎರಡು ಬಿಟ್ಟರು. ಎಣ್ಣೆ ಮತ್ತಲ್ಲಿ ದರ್ಶನ್ ಎರಡು ಹೊಡೆದಿದ್ದಾರೆ. ಬಳಿಕ ಹೋಟೆಲ್ ಸಿಬ್ಬಂದಿ ಅಳುತ್ತ ನಿಂತಿದ್ದರು. ಅವ್ವ, ಅಪ್ಪಾ ಅಂತೆಲ್ಲಾ ಬೈದಿದ್ದಾರೆ. ಆ ಮಗ, ಈ ಮಗ ಎಂದು ಬೈದಿದ್ದಾರೆ ಎಂದು ಸೆಕ್ಯೂರಿಟಿ ಗಾರ್ಡ್ ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *