ಲಕ್ನೋ: ದರೋಡೆಕೋರರ ಗುಂಡಿಗೆ ಮಹಿಳೆಯರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‍ನಲ್ಲಿ ಭಾನುವಾರ ನಡೆದಿದೆ. ಘಟನೆಯಲ್ಲಿ 10, 7 ಮತ್ತು 5 ವರ್ಷದ ಮೂವರು ಮಕ್ಕಳು ಗಾಯಗೊಂಡಿದ್ದಾರೆ.
ಮೃತಪಟ್ಟವರರನ್ನು ಡಾಲಿ(30) ಮತ್ತು ಅನ್ಶು(19) ಎಂದು ಗುರುತಿಸಲಾಗಿದೆ. ಅನ್ಶು ಡಾಲಿಯ ಇಬ್ಬರು ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ವೇಳೆ ಡಾಲಿಯ ಮನೆಗೆ ಬಂದ ಸಂಬಂಧಿಗಳಾದ ಉಮಾ ಮತ್ತು ಸೋನು ಎಂಬವರು ಚಹಾ ಕುಡಿದು ಮಾತನಾಡಿ ಬಳಿಕ ಗನ್ ತೋರಿಸಿದ್ದಾರೆ. ನಂತರ ಆರೋಪಿಗಳು ಅನ್ಶು ಮತ್ತು ಡಾಲಿಯನ್ನು ಗುಂಡಿಟ್ಟು ಕೊಂದಿದ್ದಾರೆ. ಜೊತೆಗೆ ಅಲ್ಲಿಯೇ ಇದ್ದ ಮಕ್ಕಳ ಮೇಲೆ ಚಾಕು ಮತ್ತು ಸ್ಕೂಡ್ರೈವರ್ ನಿಂದ ಹಲ್ಲೆ ನಡೆಸಿ ಮನೆಯಲ್ಲಿದ್ದ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ದೋಚಿಕೊಂಡು ಅಲ್ಲಿಂದ್ದ ಪರಾರಿಯಾಗಿದ್ದಾರೆ.
Advertisement
Advertisement
ಇದೀಗ ಗಾಯಗೊಂಡಿರುವ ಮಕ್ಕಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಮಕ್ಕಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯದ ಮೂಲಕ ಆರೋಪಿಗಳನ್ನು ಗುರುತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿ ಉಮಾಳನ್ನು ಪೊಲೀಸರು ಪತ್ತೆ ಮಾಡಿದ್ದು ಉಮಾ ಬಳಿ ಇದ್ದ ನಗದು ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಆಕೆಯನ್ನು ಬಂಧಿಸಿದ್ದಾರೆ.
Advertisement
Advertisement
ವಿಚಾರಣೆ ವೇಳೆ ಉಮಾ, ಸೋನು ಊರುಬಿಟ್ಟು ತನ್ನ ಹುಟ್ಟೂರಿಗೆ ಹೋಗುತ್ತಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಹೀಗಾಗಿ ಆರೋಪಿ ಸೋನು ಬೆನ್ನತ್ತಿದ ಪೊಲೀಸರು ಮೊಬೈಲ್ ಸಂಖ್ಯೆ ಮೂಲಕ ಟ್ರೆಸ್ ಮಾಡಿ ಆತನನ್ನು ದಾಸ್ನ ಬಳಿ ಪತ್ತೆ ಹಚ್ಚಿದ್ದಾರೆ. ಪೊಲೀಸರು ಗುಂಪು ಗುಂಪಾಗಿರುವುದನ್ನು ಕಂಡು ಆರೋಪಿ ಸೋನು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಪೇದೆಯೊಬ್ಬರ ಕಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಶ್ರೀನೈಥಾನಿ ತಿಳಿಸಿದ್ದಾರೆ.