– 6 ನೇ ವೇತನ ಆಯೋಗ ಶಿಫಾರಸು ಸಾಧ್ಯವೇ ಇಲ್ಲ
ಬೆಂಗಳೂರು: ದಯವಿಟ್ಟು ಹಠ ಬಿಟ್ಟು ಕೆಲಸಕ್ಕೆ ಬರುವಂತೆ ಸರ್ಕಾರಿ ನೌಕರರಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ.
ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ಇಲಾಖೆ ನೌಕರರ ಜೊತೆ ಮಾತುಕತೆ ಪ್ರಶ್ನೆಯೇ ಇಲ್ಲ. ನಾನು ಹಠ ಮಾಡ್ತಿಲ್ಲ. 8 ಬೇಡಿಕೆ ಈಡೇರಿಸಿದ್ದೇವೆ. ಆದ್ರೆ 6ನೇ ವೇತನ ಆಯೋಗ ಜಾರಿ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
Advertisement
ಆದಾಯದಲ್ಲಿ ಶೇ.86 ರಷ್ಟು ಭಾಗ ಸರ್ಕಾರಿ ನೌಕರಿಗೆ ವೇತನ, ಪಿಂಚಣಿ ಇತರೆಗೆ ಖರ್ಚಾಗ್ತಿದೆ. ಸಾರಿಗೆ ನೌಕರರು ಯಾವುದೇ ಕಾರಣಕ್ಕೂ ಹಠಕ್ಕೆ ಬೀಳಬಾರದು. ಈಗಾಗಲೇ 9 ಬೇಡಿಕೆಗಳಲ್ಲಿ 8 ಬೇಡಿಕೆ ಈಡೇರಿಸಿದ್ದೇವೆ. ಅದರಲ್ಲಿ ಲೋಪದೋಷ ಇದ್ರೇ ಹೇಳಿ ಸರಿಪಡಿಸೋಣ. ಅದನ್ನ ಬಿಟ್ಟು ಈ ರೀತಿ ಹಠ ಮಾಡಬಾರದು. ಇವತ್ತಿನ ಪರಿಸ್ಥಿತಿಯಲ್ಲಿ 6 ನೇ ವೇತನ ಆಯೋಗ ಶಿಫಾರಸು ಸಾಧ್ಯವೇ ಇಲ್ಲ ಎಂದು ಸಿಎಂ ಮತ್ತೊಮ್ಮೆ ಉಚ್ಚರಿಸಿದರು.
Advertisement
ಸಾಧ್ಯವೇ ಇಲ್ಲ ಅಂತಾದ್ಮೇಲೆ ಹಠ ಮಾಡೋದು ಸರಿಯಲ್ಲ. ಈಗ್ಲಾದ್ರೂ ಅರ್ಥ ಮಾಡ್ಕೊಂಡು ಕೆಲಸಕ್ಕೆ ಬನ್ನಿ. ಸಾರ್ವಜನಿಕರಿಗೆ ತೊಂದರೆ ಆಗದಂತೆ ನಡೆದುಕೊಳ್ಳಿ. ಯಾರ ಜೊತೆ ಮಾತನಾಡಬೇಕು, ಯಾರದ್ದೋ ಮಾತಿಗೆ ಬಲಿಯಾಗಿ ಈ ರೀತಿ ಹಠ ಮಾಡೋದು ಸರಿಯಲ್ಲ ಎಂದರು.
Advertisement
ಇವತ್ತಿನಿಂದ ನಿಮ್ಮ ಬಸ್‍ಗಳನ್ನ ಓಡಾಡಿಸೋಕೆ ಶುರು ಮಾಡಿ. ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿರುವಾಗ ಈ ರೀತಿ ಹಠ ಮಾಡೋದು ಎಷ್ಟರ ಮಟ್ಟಿಗೆ ಸರಿ, ನೀವೇ ಯೋಚನೆ ಮಾಡಿ. ಮತ್ತೊಮ್ಮೆ ಮನವಿ ಮಾಡ್ತೀನಿ, ಹಠ ಬಿಟ್ಟು ಬನ್ನಿ. ಯಾರತ್ರಾ ಮಾತುಕತೆ ಮಾಡೋದು..? ಎಂದು ಹೇಳುವ ಮೂಲಕ ಪರೋಕ್ಷವಾಗಿ ಕೋಡಿಹಳ್ಳಿ ನೇತೃತ್ವದ ಸಂಘಟನೆಯ ಜೊತೆ ಮಾತಾಡಲ್ಲ ಎಂದು ಸಿಎಂ ಹೇಳಿದರು.