ಹಾಸನ: ದಯಮಾಡಿ ಪ್ರಧಾನಿಗಳು ಕೆಳಮಟ್ಟಕ್ಕೆ ಇಳಿಯಬೇಡಿ ಎಮದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಸಚಿವ ಹೆಚ್.ಡಿ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
Advertisement
ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಧಾನಿಗಳ ವಿಡಿಯೋ ಕಾನ್ಫರೆನ್ಸ್ ಬಗ್ಗೆ ಆಕ್ರೋಶ ಹೊರಹಾಕಿದ ಅವರು, ಜಿಲ್ಲಾಧಿಕಾರಿಗಳನ್ನು ಕೂರಿಸಿಕೊಂಡು ಅವಮಾನ ಮಾಡಿದ್ದೀರಿ. ಯಾವ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೀರಿ. ದಯಮಾಡಿ ಪ್ರಧಾನಿಗಳು ಕೆಳಮಟ್ಟಕ್ಕೆ ಇಳಿಯಬೇಡಿ. ಪ್ರಧಾನಿಗಳು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಬೇಕಿತ್ತು. ಪ್ರಧಾನಿ ಸಭೆ ಮಾಡಿ ಈ ರಾಜ್ಯದ ಬಗ್ಗೆ ಏನು ತಿಳಿದುಕೊಂಡ್ರು ಎಂದು ಪ್ರಶ್ನಿಸಿದರು.
Advertisement
Advertisement
ಆ ಗೌರವ್‍ಗುಪ್ತಾ ಅವರ ಜೊತೆ ಮಾತನಾಡಿದ್ದಾರೆ. ಅವರಿಗೆ ಎಷ್ಟು ಫೋನ್ ಮಾಡಿದ್ರು ರಿಸೀವ್ ಮಾಡಲ್ಲ. ಅವರು ಫೋನ್ ರಿಸೀವ್ ಮಾಡಿದ್ರೆ ರಾಜಕೀಯ ನಿವೃತ್ತಿ ತಗೋತೀನಿ ಎಂದು ಚಾಲೆಂಜ್ ಹಾಕಿದ್ರು.
Advertisement
ಎರಡು ತಿಂಗಳು ತೆಗೆದುಕೊಂಡು ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. 20 ಸಾವಿರ ರೈತರು ಅಂತಾರೆ. ಹಾಗಾದ್ರೆ ಅವರನ್ನು ಗುರುತಿಸಿರೋರು ಯಾರು..? ನಮ್ಮ ರೈತರು ಸಂಕಷ್ಟದಲ್ಲಿದ್ದಾರೆ. ಇದು ಟೆಂಪ್ರವರಿ ಪ್ಯಾಕೇಜ್. ಒಬ್ಬರಿಗೆ ತಿಂಗಳಿಗೆ ಕನಿಷ್ಟ 5 ಸಾವಿರದಂತೆ ಪ್ಯಾಕೇಜ್ ಕೊಡಬೇಕಿತ್ತು. ಸ್ವಲ್ಪ ಮಂತ್ರಿಗಳು ಲೂಟಿ ಮಾಡೋದು ನಿಲ್ಲಿಸಬೇಕಿತ್ತು ಎಂದು ತಿಳಿಸಿದರು.
ಒಂದು ತಿಂಗಳ ಕಾಲ ಲಾಕ್‍ಡೌನ್ ಮಾಡಬೇಕು. ಬಡವರಿಗೆ ಲೂಟಿ ಮಾಡುವುದರಲ್ಲಿ ಶೇ.10ರಷ್ಟು ಕೊಡಿ. ಬಡವರಿಗೆ ಒಂದು ತಿಂಗಳು ಏನೆಲ್ಲ ಸಹಾಯ ಮಾಡಬೇಕು ಎಂದು ಹೇಳಿದರು.