ಬೆಂಗಳೂರು: ದಯಮಾಡಿ ಇಡೀ ಚಿತ್ರರಂಗವನ್ನು ಟಾರ್ಗೆಟ್ ಮಾಡಬೇಡಿ ಎಂದು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಡ್ರಗ್ಸ್ ಇಲ್ಲವೇ ಇಲ್ಲ ಅಂತ ಹೇಳಿಲ್ಲ. ನಮ್ಮ ಅನುಭವದಲ್ಲಿ ಇಲ್ಲ ಎಂದಷ್ಟೇ ಹೇಳಿದ್ದು. ಮಾಹಿತಿ ಇರದ ವಿಚಾರದ ಬಗ್ಗೆ ಪ್ರತಿಕ್ರಿಯೆ ಮಾಡಬಾರದು. ಆರೋಪ ಸಾಬೀತಾಗುವ ಮೊದಲೇ ಜಡ್ಜ್‍ಮೆಂಟ್ ಕೊಡಬಾರದು. ಚಲನಚಿತ್ರರಂಗ ಅಷ್ಟೇ ಅಲ್ಲ, ಎಲ್ಲ ಕಡೆಯಲ್ಲೂ ಇದೆ. ಇಡೀ ಕನ್ನಡ ಚಿತ್ರರಂಗವನ್ನೇ ಬೊಟ್ಟು ಮಾಡಬಾರದು. ಎಷ್ಟು ಪರ್ಸೆಂಟ್ ಇದೆ ಅನ್ನೋದನ್ನ ನೋಡಬೇಕು ಎಂದರು.
Advertisement
Advertisement
ಕನ್ನಡ ಚಿತ್ರರಂಗ ಅಷ್ಟೇ ಅಲ್ಲ, ಎಲ್ಲ ಚಿತ್ರರಂಗದಲ್ಲಿಯೂ ಜನರೇಶನ್ ಚೇಂಜ್ ಆಗಿದೆ. ಹಿರಿಯರ ಜನರೇಶನ್ ಗೆ ಕೊಡುತ್ತಿದ್ದ ಗೌರವ ಈಗ ಕಡಿಮೆಯಾಗಿದೆ. ಅಭ್ಯಾಸ ಆಗಿರೋರಿಗೆ ಬಿಡುವುದು ಕಷ್ಟ. ಡ್ರಗ್ಸ್ ಪೆಡ್ಲರ್ ಗಳ ಜೊತೆ ದಂಧೆ ನಡೆಯುತ್ತಿದೆ. ನಾಯಕಿಯರ ಹೆಸರೇ ದಂಧೆಯಲ್ಲಿ ಕೇಳಿಬರ್ತಿದೆ. ವಿನಾಕಾರಣ ಮಾಹಿತಿ ಇಲ್ಲದೇ ನಾನು ಮಾತನಾಡುವುದಿಲ್ಲ. ಡ್ರಗ್ಸ್ ದಂಧೆಯಲ್ಲಿ ಇತರೆ ನಟರು ಇದ್ದಾರಾ ಅನ್ನೋದ್ರ ಬಗ್ಗೆ ತನಿಖಾಧಿಕಾರಿಗಳೇ ಮಾಹಿತಿ ಕೊಡಬೇಕು ಎಂದು ತಿಳಿಸಿದರು.
Advertisement
ಇದೇ ವೇಳೆ ನಾಗಮಂಗಲದಲ್ಲಿ ಡ್ರಗ್ಸ್ ಮಾರಾಟ ಆಗ್ತಿದೆ ಎಂಬ ಮಾಜಿ ಸಂಸದ ಶಿವರಾಮೇಗೌಡಗೆ ತಿರುಗೇಟು ನೀಡಿದ ಸುಮಲತಾ, ಮಾಧ್ಯಮಗಳ ಮುಂದೆ ಸುಮ್ಮನೆ ಆರೋಪ ಮಾಡಬಾರದು. ದಾಖಲೆ ಇದ್ದರೆ ಪೊಲೀಸರಿಗೆ ಕೊಡಿ. ಸಾಕ್ಷಿ ಪುರಾವೆ ಸಹಿತ ಸಾಬೀತುಪಡಿಸಿ. ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಿ. ಸುಖಾಸುಮ್ಮನೆ ಆರೋಪ ಮಾಡಬೇಡಿ ಎಂದು ಹೇಳಿದರು.
Advertisement
ಡಗ್ರ್ಸ್ ಚಿತ್ರರಂಗದಷ್ಟೇ ಅಲ್ಲ, ಎಲ್ಲ ಕಡೆ ಇದೆ ಅಂತ ಹೇಳುವುದನ್ನ ಕೇಳಿದ್ದೇನೆ. ಈಗ ತನಿಖೆ ನಡೆಯುತ್ತಿದೆ, ಸತ್ಯಾಂಶ ಬರುವ ತನಕ ಕಾಯೋಣ. ಇಂದಿನ ಜನರೇಶನ್ ಹಾಳಾಗುವ ವಿಚಾರ ಇದು. ಇದರಲ್ಲಿ ಎಲ್ಲರ ತಪ್ಪು ಇದೆ. ಚಿತ್ರರಂಗದಲ್ಲಿ ಎಷ್ಟು ಜನರೇಶನ್ ನಿಂದ ನಟನಟಿಯರು ಇದ್ದಾರೆ. ಆದರೆ ಡ್ರಗ್ಸ್ ವಿಚಾರದಲ್ಲಿ ಎಷ್ಟು ಪರ್ಸೆಂಟ್ ಇದ್ದಾರೆ. ಚಿತ್ರರಂಗದಲ್ಲಿ ಏನೇ ನಡೆದ್ರೂ ವಿಪರೀತವಾಗಿ ತೋರಿಸುವುದು ಅಭ್ಯಾಸವಾಗಿಬಿಟ್ಟಿದೆ, ಇದು ಸರಿ ಇಲ್ಲ ಅನ್ನೋದು ನನ್ನ ಅಭಿಪ್ರಾಯ ಎಂದರು.
ಕನ್ನಡ ಚಿತ್ರರಂಗದಲ್ಲಿ ಯಜಮಾನಿಕೆ ಇಲ್ಲದಿರುವುದೇ ಇಷ್ಟಕ್ಕೆಲ್ಲ ಕಾರಣ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಂತಹ ವಿಚಾರಗಳು ನಡೆಯಬೇಕಾದ್ರೆ ಯಾರೂ ಹೇಳಿ ಮಾಡಲ್ಲ. ಎಲ್ಲೆಲ್ಲಿ ನಡೆಯುತ್ತೆ ಅದು ನಡೆಯುತ್ತಿರುತ್ತೆ. ಯಜಮಾನ ಇದ್ದಾರೆ, ಇಲ್ಲ ಅನ್ನೋದನ್ನ ನೋಡಿಕೊಂಡು ಮಾಡುವುದಿಲ್ಲ. ದಯಮಾಡಿ ಇಡೀ ಚಿತ್ರರಂಗವನ್ನು ಟಾರ್ಗೆಟ್ ಮಾಡಬೇಡಿ ಅಂತ ಮನವಿ ಮಾಡಿಕೊಂಡರು.