ಬೆಂಗಳೂರು: ದಕ್ಷ ಪೊಲೀಸ್ ಅಧಿಕಾರಿ ಕಮಲ್ ಪಂಥ್ ಅವರನ್ನು ಡಿ.ಕೆ ಶಿವಕುಮಾರ್ ಅವರು ಏಜೆಂಟ್ ಎಂದಿರುವುದನ್ನು ಗೃಹ ಮಂತ್ರಿ ಬಸವರಾಜ್ ಬೊಮ್ಮಾಯಿ ಬಲವಾಗಿ ಖಂಡಿಸುತ್ತೇನೆ.
ಶ್ರೀ @DKShivakumar ಅವರು ಧಕ್ಷ ಪೋಲಿಸ್ ಅಧಿಕಾರಿಯಾದ ಶ್ರೀ ಕಮಲ ಪಂಥ @CPBlr ಕುರಿತು ಏಜೆಂಟ್ ಎಂದು ನೀಡಿರುವ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇದು ಗಲಭೆಕೋರರನ್ನು ಪರೋಕ್ಷವಾಗಿ ರಕ್ಷಣೆ ಮಾಡುವ ಮತ್ತೊಂದು ತಂತ್ರವಾಗಿದೆ. ಇದು ಯಾವುದು ನಡೆಯುವುದಿಲ್ಲ.
— Basavaraj S Bommai (@BSBommai) August 20, 2020
Advertisement
ದೇವರಾಜ್ ಅರಸರ ಜನ್ಮದಿನದಂದೇ `ಬಿಜೆಪಿ ವಿರುದ್ಧ ಕಾಂಗ್ರೆಸ್ ಜನಧ್ವನಿ’ ಹೆಸರಲ್ಲಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿದೆ. ಈ ವೇಳೆ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಮಾತನಾಡಿದ ಡಿಕೆಶಿ, ಮಿಸ್ಟರ್ ಪೊಲೀಸ್ ಕಮೀಷನರ್ ಬೆಂಗಳೂರಿನಲ್ಲಿ ನಡೆದ ಗಭೆಯಲ್ಲಿ ನೀವು ಬಿಜೆಪಿ ಏಜೆಂಟ್ ರೀತಿ ವರ್ತಿಸುತ್ತಿದ್ದೀರಿ ಎಂದು ಆರೋಪ ಮಾಡಿದ್ದರು. ಇದನ್ನೂ ಓದಿ: ಮಿಸ್ಟರ್ ಪೊಲೀಸ್ ಕಮೀಷನರ್ ಬೆಂಗ್ಳೂರು ಗಲಭೆಯಲ್ಲಿ ನೀವು ಬಿಜೆಪಿ ಏಜೆಂಟ್ ರೀತಿ ವರ್ತಿಸ್ತಿದ್ದೀರಿ: ಡಿಕೆಶಿ
Advertisement
ಈಗ ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಬೊಮ್ಮಾಯಿ, ಡಿಕೆ ಶಿವಕುಮಾರ್ ಅವರು ದಕ್ಷ ಪೊಲೀಸ್ ಅಧಿಕಾರಿಯಾದ ಕಮಲ್ ಪಂಥ್ ಕುರಿತು ಏಜೆಂಟ್ ಎಂದು ನೀಡಿರುವ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇದು ಗಲಭೆಕೋರರನ್ನು ಪರೋಕ್ಷವಾಗಿ ರಕ್ಷಣೆ ಮಾಡುವ ಮತ್ತೊಂದು ತಂತ್ರವಾಗಿದೆ. ಇದು ಯಾವುದು ನಡೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾವು ಯಾವ ಅಮಾಯಕರನ್ನೂ ಅರೆಸ್ಟ್ ಮಾಡಿಲ್ಲ – ಕಾಂಗ್ರೆಸ್ ನಾಯಕರಿಗೆ ಕಮಿಷನರ್ ಕಮಲ್‍ಪಂತ್ ತಿರುಗೇಟು
Advertisement
ಗಲಭೆಯ ವಿಡಿಯೋಗಳಲ್ಲಿ ಸ್ಪಷ್ಟವಾಗಿದ್ದು ಗಲಭೆಕೋರರ ವಿರುದ್ದ ನಿರ್ದಾಕ್ಷಿಣ್ಯವಾಗಿ ಪೋಲಿಸ್ ಕಮೀಶನರ್ ಕೈಗೊಂಡ ಕ್ರಮವನ್ನು ರಾಜ್ಯದ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಪೋಲಿಸರನ್ನು ಏಜೆಂಟರನ್ನಾಗಿ ನಡೆಸಿಕೊಳ್ಳುವುದು ಅವರ ಸಂಸ್ಕೃತಿ, ಪೋಲಿಸರು ನಿಷ್ಪಕ್ಷಪಾತವಾಗಿ ತನಿಖೆಯನ್ನು ಮಾಡುತ್ತಿದ್ದಾರೆ. ಇದರಲ್ಲಿಯಾರದೆ ಪ್ರಭಾವ ನಡೆಯುವುದಿಲ್ಲ
— Basavaraj S Bommai (@BSBommai) August 20, 2020
Advertisement
ಗಲಭೆಯ ವಿಡಿಯೋಗಳಲ್ಲಿ ಸ್ಪಷ್ಟವಾಗಿದ್ದು, ಗಲಭೆಕೋರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಪೊಲೀಸ್ ಕಮಿಷನರ್ ಕೈಗೊಂಡ ಕ್ರಮವನ್ನು ರಾಜ್ಯದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೊಲೀಸರನ್ನು ಏಜೆಂಟರನ್ನಾಗಿ ನಡೆಸಿಕೊಳ್ಳುವುದು ಅವರ ಸಂಸ್ಕೃತಿ. ಪೋಲಿಸರ ನಿಷ್ಪಕ್ಷಪಾತವಾಗಿ ತನಿಖೆಯನ್ನು ಮಾಡುತ್ತಿದ್ದಾರೆ. ಇದರಲ್ಲಿ ಯಾರದ್ದೇ ಪ್ರಭಾವ ನಡೆಯುವುದಿಲ್ಲ ಎಂದು ಕೈ ನಾಯಕರಿಗೆ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.