– 8 ಲಕ್ಷ ಖರ್ಚು ಮಾಡಿದ್ರೂ ಬದುಕಲಿಲ್ಲ ತಂದೆ, ತಾಯಿ
ಬಾಗಲಕೋಟೆ: ವಾರದ ಅಂತರದಲ್ಲಿ ಕೋವಿಡ್ ಗೆ ದಂಪತಿ ಬಲಿಯಾದ ಕಾರಣ, ಎಂಟು ಜನ ಮಕ್ಕಳು ಅನಾಥರಾಗಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಿಗಿ ಗ್ರಾಮದಲ್ಲಿ ನಡೆದಿದೆ.
Advertisement
ಗ್ರಾಮದ ರಾಮಪ್ಪ ಹೂಗಾರ, ದುಂಡವ್ವ ಹೂಗಾರ ಅವರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಕಳೆದ ಶನಿವಾರ ಮೇ 29 ರಂದು ದುಂಡವ್ವ ಹೂಗಾರ ಮೃತರಾದರೆ, ಬಳಿಕ ಪತಿ ದುಂಡಪ್ಪ ಸಾವನ್ನಪ್ಪಿದ್ದಾರೆ. ಕಾರಣ ಎಂಟು ಜನ ಮಕ್ಕಳು ಅನಾಥರಾಗಿದ್ದಾರೆ. ದಂಪತಿಗೆ ಏಳು ಜನ ಹೆಣ್ಣು ಮಕ್ಕಳು, ಓರ್ವ ಗಂಡು ಮಗ ಇದ್ದು, ಆರು ಜನ ಹೆಣ್ಣು ಮಕ್ಕಳ ಮದುವೆ ಮಾಡಿದ್ದಾರೆ. ಇನ್ನೋರ್ವ 16 ವರ್ಷದ ಪುತ್ರಿ, 17 ವರ್ಷದ ಮಗ ಇದ್ದಾರೆ. ತಂದೆ ತಾಯಿ ಕಳೆದುಕೊಂಡು ಅನಾಥರಾದ ಮಕ್ಕಳು, ಬೇಸರದ ಜೀವನ ಸಾಗಿಸುತ್ತಿದ್ದಾರೆ. ಇದನ್ನೂ ಓದಿ: 16,387 ಹೊಸ ಕೊರೊನಾ ಪ್ರಕರಣ – ನಿಲ್ಲದ ಮ’ರಣ’ಕೇಕೆ, 463 ಸಾವು
Advertisement
Advertisement
ಮೊದಲು ರಾಮಪ್ಪ ಹೂಗಾರಗೆ ಸೊಂಕು ಕಾಣಿಸಿಕೊಂಡು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು. ಆದರೆ ಪತಿಯ ಆರೈಕೆ ಮಾಡುತಿದ್ದ ಪತ್ನಿಗೂ ನಂತರ ಸೊಂಕು ತಗುಲಿ ವಾರದ ಬಳಿಕ ವಿಜಯಪುರ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಎಂಟು ಲಕ್ಷ ರೂ. ಖರ್ಚು ಮಾಡಿದರೂ ತಂದೆ, ತಾಯಿಯನ್ನು ಬದುಕಿಸಿಕೊಳ್ಳಲು ಆಗಲಿಲ್ಲ ಎಂದು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ.