ಚೆನ್ನೈ: ತಮಿಳುನಾಡಿನ ಕಡ್ಡಲೂರು ಜಿಲ್ಲೆಯ ಥರ್ಮಲ್ ಪವರ್ ಪ್ಲಾಂಟ್‍ನಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಆರು ಜನರು ಸಾವನ್ನಪ್ಪಿದ್ದರು. ಗಾಯಗೊಂಡ 16 ಕಾರ್ಮಿಕರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ರವಾನಿಸಿದ್ದಾರೆ.
ಘಟನೆ ನಡೆದ ಸ್ಥಳ ಚೆನ್ನೈನಿಂದ 180 ಕಿಲೋ ಮೀಟರ್ ದೂರದಲ್ಲಿರುವ ಕಡ್ಡಲೂರಿನಲ್ಲಿರುವ ಎನ್‍ಎಲ್‍ಸಿ ಇಂಡಿಯಾ ಲಿಮಿಟೆಡ್‍ನ ಪವರ್ ಪ್ಲಾಂಟ್‍ನಲ್ಲಿ ಬಾಯ್ಲರ್ ಸ್ಫೋಟವಾಗಿದೆ. ಗಾಯಾಳುಗಳ ಪೈಕಿ 6 ಖಾಯಂ ಕಾರ್ಮಿಕರು, 10 ಜನರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು.
ಈ ಕುರಿತು ಪವರ್ ಪ್ಲಾಂಟ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಬಾಯ್ಲರ್ ಬಂದ್ ಆಗಿತ್ತು. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ. ಎರಡು ತಿಂಗಳ ಹಿಂದೆ ಮೇನಲ್ಲಿಯೂ ಇದೇ ರೀತಿ ಬಾಯ್ಲರ್ ಸ್ಫೋಟಗೊಂಡಿತ್ತು. ಅಂದಿನ ಸ್ಫೋಟದಲ್ಲಿ ಆರು ಕಾರ್ಮಿಕರು ಬೆಂಕಿಗಾಹುತಿಯಾಗಿದ್ದರು. ಕಂಪನಿ 3,940 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಇಂದು ಸ್ಫೋಟಗೊಂಡ ಘಟಕದಲ್ಲಿ 1,470 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ.